ಜಗಜ್ಜಾಹೀರಾಗಿ ಹಣ ಹಂಚಿದರೂ ಗಂಡು ಮೆಟ್ಟಿದ ನಾಡಿನ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. .
ಜನಬಲದ ಮುಂದೆ ಹಣಬಲ ನಡೆಯಲಿಲ್ಲ.
ಬೆಳಗಾವಿ ಮತದಾರರಿಗೆ ಕೃತಜ್ಞತೆ..
ವಿಜೇತ ಅಭ್ಯರ್ಥಿ ಜಗದೀಶ್ ಶೆಟ್ಟರ್..
ಬೆಳಗಾವಿ : ಬೆಳಗಾವಿ ಇದು ಗಂಡು ಮೆಟ್ಟಿದ ನೆಲ, ಪಕ್ಷದ ಇಲ್ಲಿಯ ನಾಯಕರು, ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಈ ಜಯಬೇರಿ ಎಂದು ಬೆಳಗಾವಿ ಲೋಕಸಭಾ ಬಿಜೆಪಿಯ ವಿಜೇತ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮೇಲಿನಂತೆ ಹೇಳಿದ್ದಾರೆ..

ಈ ಗೆಲುವಿನ ಮೂಲಕ ಬೆಳಗಾವಿ ಮತದಾರರಿಗೆ ನಾನು ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ, 30 ವರ್ಷದ ಈ ಬೆಳಗಾವಿಯ ನನ್ನ ಸಂಬಂಧಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಅಭಿವೃದ್ದಿ ಕೆಲಸ ಮಾಡಿ ಬೆಳಗಾವಿಯ ಜನರ ಋಣ ತೀರಿಸುವ ಎಂದಿದ್ದಾರೆ..

ಹಿಂದೆ ಕಂಡ ಹಲವು ಯೋಜನೆಗಳನ್ನು ಬೆಳಗಾವಿಗೆ ತಂದು , ಬೆಳಗಾವಿಯನ್ನು ಉತ್ತಮ ನಗರವನ್ನಾಗಿ ಮಾಡುತ್ತೇನೆ, ಬರುವ ದಿನಗಳಲ್ಲಿ ಬೆಳಗಾವಿಯನ್ನು ಒಂದು ಮಾದರಿ ನಗರ ಮಾಡುವ ಕನಸು ಕಂಡಿದ್ದೆ, ಅದನ್ನು ಮಾಡಿಯೇ ತೀರುತ್ತೇವೆ ಎಂದರು..
ನನ್ನ ಅಡ್ರೆಸ್ ಬಗ್ಗೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ, ಬಾಡಿಗೆ ಮನೆ ಈಗ ಸ್ವಂತ ಮನೆ ಆಗೆ ಆಗುತ್ತದೆ, ಇನ್ನು ರಾಷ್ಟ್ರದಲ್ಲಿ ಬಿಜೆಪಿ ಬಹುಮತ ಬಂದೆ ಬರುತ್ತದೆ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗೆ ಆಗುತ್ತಾರೆ ಎಂದರು..

ಪ್ರತಿಪಕ್ಷವಾಗಿ ಏನು ಕೆಲಸ ಮಾಡದ ಕಾಂಗ್ರೆಸ್ ಪಕ್ಷವನ್ನು ಬೆಳಗಾವಿ ಜನತೆ ತಿರಸ್ಕರಿಸಿದ್ದಾರೆ, ಗ್ಯಾರೆಂಟಿ ಯೋಜನೆ ವಿಫಲವಾಗಿವೆ, ರಾಜ್ಯ ಸರ್ಕಾರ ಬಹಳ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದೆ, ಎಲ್ಲವೂ ಸರಿಯಲ್ಲ, ಹೊಂದಾಣಿಕೆ ಇಲ್ಲ, ನಿಗಮಗಳಲ್ಲಿ ಹಗರಣ ಆಗಿದೆ, ಭ್ರಷ್ಟರನ್ನು ರಕ್ಷಣೆ ಮಾಡುತ್ತಿದ್ದಾರೆ, ಸರ್ಕಾರ ಪತನವಾದರು ಅಚ್ಚರಿಯಿಲ್ಲ ಎಂದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..