ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಬಂಧನ…

ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಬಂಧನ..

ರೇಣುಕಾಸ್ವಾಮಿಗೆ ದರ್ಶನ ಬೆಲ್ಟಿನಿಂದ ಹಲ್ಲೆ ಮಾಡಿದರಾ??

ಘನಘೋರ ಅಪರಾಧ ಎಸಗಿಯೂ ಸ್ಟಾರ್ ಹೋಟೆಲಿನಲ್ಲಿ ದರ್ಶನ್ ಇದ್ದರಾ??

ಸೇರೆಂಡರ್ ಆದ 11 ಆರೋಪಿಗಳಿಂದ ಮಾಹಿತಿ..

ಬೆಂಗಳೂರು : ಚಿತ್ರದುರ್ಗದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರವಾದ ತನಿಖಾ ಮಾಹಿತಿಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸ್ ಸಿಬ್ಬಂದಿ ಕಲೆ ಹಾಕಿದ್ದು, ಜೂನ್ ಎಂಟನೆಯ ತಾರಿಕಿನಂದು 11 ಜನರ ತಂಡ, ಚಿತ್ರದುರ್ಗದಿಂದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಅಪಹರಣ ಮಾಡಿಕೊಂಡು, ಬೆಂಗಳೂರಿನ ಆರ್ ಆರ್ ನಗರದ ಖಾಸಗಿ ಕಾರ ಶೆಡ್ ಒಂದರಲ್ಲಿ ಕೂಡಿ ಹಾಕಲಾಗಿತ್ತು..

ಅಪಹರಿಸಿದ ಹನ್ನೊಂದು ಜನರ ತಂಡ ಚಿತ್ರನಟ ದರ್ಶನ ಎದುರೇ, ರೇಣುಕಾಸ್ವಾಮಿಯನ್ನು ಹೊಡೆದಿದ್ದಾರೆಂಬ ಮಾಹಿತಿ ಇದ್ದು, ದರ್ಶನ ಕೂಡಾ ನನ್ನ ಪತ್ನಿಗೆ ಕೆಟ್ಟದಾಗಿ ಮೆಸ್ಸೇಜ್ ಮಾಡುತ್ತೀಯಾ ಎಂದು ಬೇಲ್ಟಿನಿಂದ ಹೊಡೆದು, ಗೋಡೆಗೆ ಅಪ್ಪಳಿಸಿದರು ಎಂದು ಸರೆಂಡೆರ್ ಆದ ಆರೋಪಿಗಳು ಪೊಲೀಸರ ಮುಂದೆ ಮಾಹಿತಿ ನೀಡಿದ್ದಾರೆ..

ಬಿರುಸಿನ ಹೊಡೆತದ ಕಾರಣಕ್ಕೆ ತೀವ್ರ ಹಲ್ಲೆಗೊಳಗಾದಾಗ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಇದ್ದು, ದರ್ಶನ ಹೇಳಿದಂತೆ, ಮೃತ ರೇಣುಕಾಸ್ವಾಮಿಯ ದೇಹವನ್ನು ಕಾಮಾಕ್ಷಿಪಾಳ್ಯ ಠಾಣ ವ್ಯಾಪ್ತಿಯಲ್ಲಿ ಬರುವ ಮೋರಿಗೆ ಬಿಸಾಡಿ ಬಂದೆವು ಎಂದು ಪೊಲೀಸರ ಮುಂದೆ ಆರೋಪಿಗಳು ಹೇಳಿದ್ದಾರೆ, ಇಷ್ಟೊಂದು ಕ್ರೂರ ಅಪರಾಧವಾದರೂ ಚಿತ್ರನಟ ದರ್ಶನ ಮೈಸೂರಿನ ಸ್ಟಾರ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿ ಸಾಮಾನ್ಯವಾಗಿ ಉಳಿದಿದ್ದು ವಿಚಿತ್ರವೇ..

ಈ ಪ್ರಕರಣದಲ್ಲಿ ಈಗಾಗಲೇ ಹನ್ನೊಂದು ಜನ ಆರೋಪಿಗಳು ಸೇರೆಂಡೆರ್ ಆಗಿದ್ದು, ದರ್ಶನ ಹಾಗೂ ಪವಿತ್ರಾಗೌಡ ಸೇರಿದಂತೆ ಈಗ ಒಟ್ಟು 13 ಜನ ಆರೋಪಿಗಳು ಈ ಕೊಲೆ ಪ್ರಕರಣದ ವಿಚಾರಣೆಗೆ ಒಳಪಟ್ಟಿದ್ದಾರೆ, ಮೃತ ದೇಹ ಸಿಕ್ಕ ಕಾರಣಕ್ಕೆ ಆರೋಪಿಗಳು ಸರೆಂಡರ್ ಆಗಿರುವ ಮಾಹಿತಿ ದೊರಕಿದ್ದು, ಪೊಲೀಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..