ಬೆಳ್ಳಂಬೆಳಿಗ್ಗೆ ಪಾಲಿಕೆಯ ಪೌರ ಕಾರ್ಮಿಕರ ಕಾರ್ಯ ಪರಿಶೀಲನೆ..

ಬೆಳ್ಳಂಬೆಳಿಗ್ಗೆ ಪಾಲಿಕೆಯ ಪೌರ ಕಾರ್ಮಿಕರ ಕಾರ್ಯ ಪರಿಶೀಲನೆ..

ನಸುಕಿನ ಜಾವದಲ್ಲೇ ಬೇಟಿ ನೀಡಿ ಪರಿಶೀಲಿಸಿದ ಮಹಾಪೌರರು..

ಸ್ವಚ್ಛತಾ ಸಮಸ್ಯೆ ಆಲಿಸಿ ಕೆಲ ಸೂಚನೆ ನೀಡಿದ ಮಹಾಪೌರರು..

ಬೆಳಗಾವಿ : ಶುಕ್ರವಾರ ಬೆಳ್ಳಂಬೆಳಿಗ್ಗೆನೆ ನಗರದ ಪ್ರಥಮ ಪ್ರಜೆಯಾದ, ಮಹಾಪೌರರು ಸುಮಾರು 5.30 ಗಂಟೆಗೆ ತಮ್ಮ ಕೆಲ ನಗರ ಸೇವಕರೊಂದಿಗೆ ಆಜಾಮ ನಗರದ ಪಾಲಿಕೆಯ ಸ್ವಚ್ಚತಾ ಸಿಬ್ಬಂದಿ ಕಚೇರಿಗೆ ಬೇಟಿ ನೀಡಿದ್ದಾರೆ..

ಆಜಾಮ ನಗರದ ಬೀಟ್ ಗೆ ಬೇಟಿ ನೀಡಿದ ಮಹಾಪೌರರು, ಪೌರ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಬರುತ್ತಿರುವರೋ, ಬೈಯೋಮೆಟ್ರಿಕ್ ಹಾಜರಿ ಹಾಕುತ್ತಿರುವರೋ, ನಿಯೋಜಿಸಿದ ಸ್ಥಳಗಳಲ್ಲಿ ಸರಿಯಾಗಿ ಕಾರ್ಯ ಮಾಡುತ್ತಿರುವರೋ ಎಂಬ ಹಲವು ವಿಷಯಗಳನ್ನು ಖುದ್ದಾಗಿ ಪರಿಶೀಲನೆ ಮಾಡಿದ್ದಾರೆ..

ಇನ್ನು ಇದೇ ವೇಳೆ ಕೆಲ ಪೌರ ಕಾರ್ಮಿಕರು ಕೆಲ ಸಮಸ್ಯೆ ಹೇಳಿಕೊಂಡಿದ್ದು, ಅವುಗಳ ಪರಿಹಾರದ ಭರವಸೆ ನೋಡುತ್ತಾ ಅಧಿಕಾರಿಗಳಿಗೆ ಸ್ಥಳೀಯ ಕೆಲಸದ ಬಗ್ಗೆ ಹಾಗೂ ಪೌರಕಾರ್ಮಿಕರ ಸಮಸ್ಯೆಗಳ ನಿವಾರಣೆಯ ಬಗ್ಗೆ ಸೂಚನೆ ನೀಡಿದ್ದಾರೆ..

ಇನ್ನು ಇದಾದ ಬಳಿಕ ಪಾಲಿಕೆಯ ಕಸದ ವಾಹನಗಳು ನಿಲ್ಲುವ ಸ್ಥಳಕ್ಕೆ ಬೇಟಿ ನೀಡಿದ ಮಹಾಪೌರರು, ವಾಹನಗಳ ಸ್ಥಿತಿಗತಿ, ಕೆಲಸಮಾಡುವ ರೀತಿ, ಕೆಟ್ಟು ನಿಂತ ವಾಹನಗಳ, ಅಲ್ಲಿಯ ಸಿಬ್ಬಂದಿ, ಅವರ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದು, ಹಲವು ಸೂಚನೆಗಳನ್ನು ನೀಡಿದ್ದಾರೆ..

ಒಟ್ಟಿನಲ್ಲಿ ನಗರದ ಸ್ವಚ್ಚತಾ ಕಾರ್ಯ ಸರಿಯಾಗಿ ಆಗಬೇಕು, ಪಾಲಿಕೆಯ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ಮಾಡಬೇಕು, ಅದರಿಂದ ನಗರವಾಸಿಗಳಿಗೆ ಉತ್ತಮ ಸೇವೆ ನೀಡಿ, ಪಾಲಿಕೆಗೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಮಹಾಪೌರರು ಈ ಬೇಟಿ ಅವಶ್ಯಕ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು..

ಇನ್ನು ಈ ಭೇಟಿಯ ವೇಳೆ, ನಗರ ಸೇವಕ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಶ್ರೇಯಸ್ ನಾಕಾಡಿ, ಪ್ರವೀಣ ಪಾಟೀಲ, ಪಾಲಿಕೆಯ ಪರಿಸರ ಅಭಿಯಂತರರಾದ ಕಲಾದಗಿ, ಇನ್ನಿತರ ಪಾಲಿಕೆ ಸಿಬ್ಬಂದಿಗಳು ಹಾಜರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..