ಕೊಲೆ ಆರೋಪಿಗಳಿಗೆ ಮಾತಿನ ಚಾಟಿ ಬೀಸಿದ ಕಿಚ್ಚ ಸುದೀಪ್…

ಕೊಲೆ ಆರೋಪಿಗಳಿಗೆ ಮಾತಿನ ಚಾಟಿ ಬೀಸಿದ ಕಿಚ್ಚ ಸುದೀಪ್..

ಮೃತ ರೇಣುಕಾಸ್ವಾಮಿ ಕುಟುಂಬದ ಪರ ನಿಂತ ಅಭಿನಯ ಚಕ್ರವರ್ತಿ..

ಸೆಲೆಬ್ರಿಟಿಗಳನ್ನ ದೇವರೆಂದು ತಿಳಿಯಬೇಡಿ..

ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿ, ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸುದೀಪ್, ಕಾನೂನು ಮೇಲೆ ಜನರಿಗೆ ನಂಬಿಕೆ ಬರಬೇಕು ಅಂದರೆ, ಅನ್ಯಾಯ ಆದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ..

ಕೊಲೆಯಾದ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಸುದೀಪ, ಆ ಕುಟುಂಬಕ್ಕೆ ಅನ್ಯಾಯ ಆಗಿದೆ, ನ್ಯಾಯ ಸಿಗಬೇಕು ಎಂದಿದ್ದಾರೆ, ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಸಿಗಬೇಕು ಎನ್ನುವ ಮೂಲಕ, ಆರೋಪಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ..

ಬ್ಯಾನ ಆಗುವದು ದೊಡ್ಡ ವಿಷಯವಲ್ಲ, ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಬರಬಾರದು, ನ್ಯಾಯದ ಮೇಲೆ ಎಲ್ಲರಿಗೂ ನಂಬಿಗೆ ಬರಬೇಕು, ಸೆಲೆಬ್ರಿಟಿಗಳು ದೇವರು ಅಂದುಕೊಳ್ಳಬೇಡಿ, ನಾನು
ಕರ್ನಾಟಕದವನು ನನಗೆ ಇಲ್ಲಿ ಎಲ್ಲರೂ ಹತ್ತಿರಾನೆ, ಎಂದು ಮೃತ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ನಟ ಸುದೀಪ್..

ವರದಿ ಪ್ರಕಾಶ ಬಸಪ್ಪ ಕುರಗುಂದ..