ವಿಧ್ಯಾರ್ಥಿಗಳ ಶಿಕ್ಷಣ ಹಾಗೂ ಭವಿಷ್ಯಕ್ಕಿಂತ ಹಣದ ವ್ಯವಹಾರವೇ ಹೆಚ್ಚಾಯಿತೆ??

ವಿಧ್ಯಾರ್ಥಿಗಳ ಶಿಕ್ಷಣ ಹಾಗೂ ಭವಿಷ್ಯಕ್ಕಿಂತ ಹಣದ ವ್ಯವಹಾರವೇ ಹೆಚ್ಚಾಯಿತೆ??

ನಿಲಯ ಪಾಲಕರನ್ನು ತಂದು ಕಚೇರಿಯ ಹೆಚ್ಚುವರಿ ವ್ಯವಸ್ಥಾಪಕರನ್ನಾಗಿ ಮಾಡಿದ ಉದ್ದೇಶವೇನು??

ಒಂದು ಕಚೇರಿಗೆ ಎರಡೆರಡು ಮ್ಯಾನೇಜರ್ ಬೇಕಾ??

ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳ ನಿಲುವೇನು??

ಬೆಳಗಾವಿ : ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುವ ಬಡ ಹಾಗೂ ಮಧ್ಯಮ ವರ್ಗಗಳ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಸರ್ಕಾರ ವಸತಿ ನಿಲಯಗಳನ್ನು ನಿರ್ಮಿಸಿ ಅಲ್ಲಿ, ಉತ್ತಮ ವೇತನ ನೀಡಿ, ನಿಲಯ ಪಾಲಕರನ್ನು ನೇಮಿಸುತ್ತಾರೆ, ಆದರೆ ವಿಧ್ಯಾರ್ಥಿಗಳ ಹಾಗೂ ವಸತಿನಿಲಯದ ಜವಾಬ್ದಾರಿ ತೊರೆದು, ಇಲ್ಲಿ ಜಿಲ್ಲಾ ಕಚೇರಿಯ ಬಿಲ್ಲುಗಳಿಗೆ ಸಹಿ ಮಾಡಲು ಬಂದಿರುವದನ್ನು ನೋಡಿದರೆ, ವಿದ್ಯಾರ್ಥಿಗಳಿಗಿಂತ ಕಚೇರಿಯ ಹಣದ ವ್ಯವಹಾರವೇ ಹೆಚ್ಚಾಯಿತೇ ಎಂಬ ಸಂಶಯ ಮೂಡುತ್ತದೆ..

ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಈಗಾಗಲೇ ಗೆಜೆಟೆಡ್ ದರ್ಜೆಯ ಒಬ್ಬರು ಕಚೇರಿ ವ್ಯವಸ್ಥಾಪಕರು ಇದ್ದರೂ ಕೂಡಾ, ಹುಕ್ಕೇರಿ ವಸತಿ ನಿಲಯದ ನಿಲಯ ಪಾಲಕರಾದ ಗಾಳೇಶ
ಯಾದವಾಡ ಅವರು ಕಳೆದ ಎರಡ್ಮೂರು ತಿಂಗಳಿನಿಂದ ಹೆಚ್ಚುವರಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾವ ಆದೇಶದ ಮೇರೆಗೆ ಇವರ ನಿಯೋಜನೆ ಆಗಿದೆ ತಿಳಿಯದಾಗಿದೆ.

ಕಚೇರಿಯ ಅತಿಯಾದ ಕೆಲಸದಿಂದ ಇಲಾಖೆಯ ಸ್ವತಃ ಜಿಲ್ಲಾ ಅಧಿಕಾರಿಯವರೇ ನಿಯೋಜನೆ ಮಾಡಿದ್ದು ಎಂಬ ಮಾಹಿತಿ ನೀಡಿದ ಹೆಚ್ಚುವರಿ ಮ್ಯಾನೇಜರ್ ಅವರು, ಹುಕ್ಕೇರಿ ವಸತಿ ನಿಲಯದಲ್ಲಿ ಮಕ್ಕಳ ಪಾಲನೆ ಹಾಗೂ ಕಾಳಜಿ ಬಗ್ಗೆ ಕೇಳಿದಾಗ, ಬೇರೆಯವರು ನೋಡುತ್ತಾರೆ ಬಿಡಿ ಎಂದು ಹಾರಿಕೆ ಉತ್ತರ ನೀಡಿದ್ದು, ಮಾನವೀಯತೆ ಮರೆಯಾದಂತ ಅನುಭವವಾಯಿತು..

ಸರ್ಕಾರ ಇಲಾಖೆಯ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಶಾಲೆ, ವಸತಿನಿಲಯ, ಅದಕ್ಕೆ ಬೇಕಾದ ಸಿಬ್ಬಂದಿ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಪೂರೈಸುವ ಮೂಲಕ, ನಾಡಿನ ಮಕ್ಕಳು ಸಮರ್ಥವಾಗಿ ಕಲಿತು, ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಮುಂದೆ ಉತ್ತಮ ಸಮಾಜದ ನಿರ್ಮಾಣ ಆಗಬೇಕು ಎಂದು ಕೋಟಿಗಟ್ಟಲೇ ಹಣ ವ್ಯಯ ಮಾಡುತ್ತಿದ್ದರೂ ಕೂಡಾ, ಮಕ್ಕಳ ಪಾಲನೆಯ ಮಹತ್ವದ ಜವಾಬ್ದಾರಿ ಬಿಟ್ಟು, ಬೇರೆ ಕೆಲಸ ಮಾಡುವ ನಿಲಯ ಪಾಲಕರ ಬಗ್ಗೆ ಅಧಿಕಾರಿಯವರು ನಿಲುವೇನು??

ವರದಿ ಪ್ರಕಾಶ್ ಬಸಪ್ಪ ಕುರಗುಂದ..