ರಜೆ ದಿನವೂ ರೆವೆನ್ಯೂ ಸಂಗ್ರಹ ಮಾಡಿದ ಪಾಲಿಕೆಯ ಕಂದಾಯ ವಿಭಾಗ..
ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿದ ಸಿಬ್ಬಂದಿ..
ಪ್ರಸಕ್ತ ವರ್ಷದಲ್ಲಿ ಗರಿಷ್ಠ ತೆರಿಗೆ ಸಂಗ್ರಹದ ಗುರಿ..
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು, ತಿಂಗಳ ನಾಲ್ಕನೆಯ ಶನಿವಾರವಾದ ಇಂದು ಸರ್ಕಾರಿ ರಜೆ ಇದ್ದರೂ ಕೂಡಾ ತಮ್ಮ ಕೆಲಸದಲ್ಲಿ ನಿರತರಾಗಿದ್ದು, ನಗರದ ಸಾರ್ವಜನಿಕರ ವಸತಿ (ಮನೆ) ತೆರಿಗೆ ತುಂಬುವ ಕಾರ್ಯದಲ್ಲಿ ಸಹಕಾರ ಮಾಡುತ್ತಿದ್ದು, ಇಲಾಖೆ ಹಾಗೂ ಸಮಾಜಕ್ಕೆ ಅನುಕೂಲಕರ ಅಂಶವಾಗಿದೆ..
ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಕಂದಾಯ ವಲಯಗಳ ಸಿಬ್ಬಂದಿಗಳು ಇಂದು ತಮ್ಮ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದು, ಬಂದಂತ ನಗರವಾಸಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಚಲನಗಳನ್ನು ನೀಡಿ, ತೆರಿಗೆ ನಿಗಧಿತ ವಿಷಯದಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದಲ್ಲಿ ಮಾಹಿತಿ ನೀಡಿ, ಪರಿಹರಿಸಿದ ಸನ್ನಿವೇಶಗಳು ಸಾಮಾನ್ಯವಾಗಿದ್ದವು..

ಇನ್ನು ನಾಲ್ಕೈದು ವರ್ಷಗಳಿಂದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡವರ ಪಟ್ಟಿ ಮಾಡಿ, ಸಂಬಂದಿಸಿದ ಕರ ಸಂಗ್ರಾಹಕ ಅಥವಾ ಕಂದಾಯ ನಿರೀಕ್ಷಕ ಅವರ ವಿಳಾಸಕ್ಕೆ ಹೋಗಿ, ತೆರಿಗೆ ಕಟ್ಟುವಂತೆ ತಿಳಿಸಿ ಬರುತ್ತಿದ್ದು, ಒಂದು ವೇಳೆ ತೆರಿಗೆ ಬಾಕಿ ಉಳಿಸಿಕೊಂಡರೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿ ಬರುತ್ತಿರುವ ಮಾಹಿತಿ ನೀಡಿದ್ದಾರೆ..
ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ತೆರಿಗೆಯಲ್ಲಿ ಶೇಕಡಾ ಮೂರರಷ್ಟು (3 ರಿಂದ 5%) ಹೆಚ್ಚಾಗಿರುವುದರಿಂದ ನಗರವಾಸಿಗಳಿಗೆ ಸರಿಯಾಗಿ ತಿಳಿಸುವುದು ಮತ್ತು ನೋಂದಣಾಧಿಕಾರಿ ಕಚೇರಿಯ ಭೂಮಿ ಮೌಲ್ಯದ ದರದ ಪ್ರಕಾರ ಈ ವರ್ಷದ ತೆರಿಗೆ ದರದಲ್ಲಿ ಬದಲಾವಣೆ ಆಗಿರುವ ವಿಷಯವನ್ನು ನಗರವಾಸಿಗಳಿಗೆ ಸರಿಯಾಗಿ ತಿಳಿಸಿ, ತೆರಿಗೆ ನಿಗಧಿಯಲ್ಲಿ ಆದ ಸಣ್ಣ ಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿ, ಕೆಲಸ ಮಾಡುವ ಕಂದಾಯ ವಿಭಾಗದ ಸಿಬ್ಬಂದಿ ಕೆಲಸ ಪ್ರಶಂಸನೀಯ..
ಲೋಕಸಭಾ ಚುನಾವಣೆ ಕಾರ್ಯದಲ್ಲಿ ನಿಗಧಿತ ಪ್ರಮಾಣದ ತೆರಿಗೆ ಸಂಗ್ರಹ ಆಗದ ಹಿನ್ನೆಲೆಯಲ್ಲಿ, ಇಲಾಖೆಯಿಂದ ತೆರಿಗೆ ರಿಯಾಯಿತಿ ಕಾಲಾವಕಾಶ ಹೆಚ್ಚಿಸಿರುವುದಲ್ಲದೇ, ಈಗ ಕಂದಾಯ ಸಿಬ್ಬಂದಿ ಕೂಡಾ ಹೀಗೆ ದಕ್ಷತೆಯಿಂದ ಕಾರ್ಯೋಮ್ಮುಖವಾಗಿದ್ದು ಉತ್ತಮ ಬೆಳವಣಿಗೆ ಎನ್ನಬಹುದು..
ವರದಿ ಪ್ರಕಾಶ ಬಸಪ್ಪ ಕುರಗುಂದ..