ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ತಾಲ್ಲೂಕು ಪಂಚಾಯತಿ ಇ ಒ..
40 ಸಾವಿರ ಲಂಚದ ಹಣವನ್ನು ಪಡೆಯುವಾಗ ಟ್ರ್ಯಾಪ್..
ಬೆಳಗಾವಿ : ಶುಕ್ರವಾರ ಸಂಜೆ 7ರ ಹೊತ್ತಿಗೆ ಬೆಳಗಾವಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕೈಗಾರಿಕಾ ಉದ್ದೇಶಿತ ಬಡಾವಣೆಯ ನಕ್ಷೆಯನ್ನು ಅನುಮೋದನೆ ಮಾಡಲು 40 ಸಾವಿರ ರೂಪಾಯಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಆಗಿದ್ದಾನೆ..
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸರ್ವೆ ಸಂಖ್ಯೆ 32/4 ರಲಿ, 22 ಗುಂಟೆ ಕೃಷಿ ಜಮೀನಿನಲ್ಲಿ ಗಿರಣಿ ಕಲ್ಲು ಕೈಗಾರಿಕೆ ಮಾಡುವ ಸಲುವಾಗಿ, ವಿನ್ಯಾಸ ನಕ್ಷೆ ಅನುಮೋದನೆ ಮಾಡಿಕೊಡಲು ತಾಲೂಕು ಪಂಚಾಯತಿ ಅಧಿಕಾರಿ ರಾಮರೆಡ್ಡಿ ಪಾಟೀಲ್ ಹಾಗೂ ಹಾಗೂ ಕೇಸ್ ವರ್ಕರ್ ವೈಜನಾಥ ಸನದಿ ಅವರು ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ..

ಪಿರ್ಯಾದಿದಾರ ಶಹನಾವಾಜಖಾನ ಪಠಾಣ್ ಕಾಕತಿವೆಸ್, ಬೆಳಗಾವಿ ಇವರು ಲೋಕಾಯುಕ್ತರಿಗೆ ನೀಡಿದ ನೀಡಿದ ದೂರಿನ ಅನ್ವಯ, ಲಂಚದ ಬೇಡಿಕೆಯ ಹಿನ್ನೆಲೆಯಲ್ಲಿ, ಪ್ರಕರಣ ದಾಖಲಿಸಿಕೊಂಡು, ತಾಲೂಕು ಪಂಚಾಯತಿ ಕಛೇರಿಯಲ್ಲಿಯೇ ಲಂಚದ ಹಣ ಪಡೆಯುವಾಗಲೆ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆದ ಅನ್ನಪೂರ್ಣ ಹಲಗೂರ ಹಾಗೂ ಅವರ ತಂಡದವರಿಂದ ಇಬ್ಬರೂ ಸಿಬ್ಬಂದಿಯನ್ನು ಟ್ರ್ಯಾಪ್ ಮಾಡಲಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ…