ಬೆಳಗಾವಿಯಲ್ಲಿ ಮನೆಗೆ ಕಣ್ಣ ಹಾಕಿ ದೋಚಿದ ಕಳ್ಳರು…

ಬೆಳಗಾವಿಯಲ್ಲಿ ಮನೆಗೆ ಕಣ್ಣ ಹಾಕಿ ದೋಚಿದ ಕಳ್ಳರು..

ಕಳ್ಳರ ಬೇಟೆಗೆ ಬಲೆ ಬೀಸಿದ ಕ್ಯಾಂಪ್ ಪೊಲೀಸರು..

ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಕಾನೂನುಬಾಹಿರ ಕೃತ್ಯಗಳು ಕಂಡುಬರುತ್ತಿದ್ದು, ಅದಕ್ಕೆ ಮತ್ತೊಂದು ಸಾಕ್ಷಿಯಂತೆ, ಗಣೇಶ ಪುರದ ಮನೆಯೊಂದರಲ್ಲಿ ಬೀಗ ಒಡೆದು ಕಳ್ಳರು 35 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಗಣೇಶಪುರ ರಸ್ತೆಯ ಸರಸ್ವತಿ ನಗರದ 1ನೇ ಕ್ರಾಸಿನಲ್ಲಿ ಈ ಘಟನೆ ನಡೆದಿದ್ದು, ಕಳ್ಳರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹೆದರಿಕೆ ಇಲ್ಲದಂತಾಗಿದೆ.

ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿಕೊಂಡು, ಕಳ್ಳರು ಎರಡು ಮನೆಗಳನ್ನು ಒಡೆದಿದ್ದಾರೆ. ಎರಡು ಮನೆಗಳು ಪ್ರದೀಪ್ ಅಸ್ಪೆಕ‌ರ್ ಎಂಬುವವರಿಗೆ ಸೇರಿದ್ದು. ಎರಡೂ ಮನೆಯಲ್ಲಿ ತಮ್ಮ ಎರಡು ಮಕ್ಕಳು ವಾಸಿಸುತ್ತಿದ್ದರು ಎಂಬ ಮಾಹಿತಿಯಿದೆ..

ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆ ಬೀಗ ಒಡೆದು ನಗದು ಕಳ್ಳತನ ಮಾಡಿದ್ದಾರೆ, ಈ ಕುರಿತು ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಖಾಕಿ ಪಡೆ ಬಲೆ ಬೀಸಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..