ನಿಯತಿ ಪೌಂಡೇಶನ್ ವತಿಯಿಂದ ಡೆಂಗ್ಯೂ ಜಾಗೃತಿ ಶಿಬಿರ…

ನಿಯತಿ ಪೌಂಡೇಶನ್ ವತಿಯಿಂದ ಡೆಂಗ್ಯೂ ಜಾಗೃತಿ ಶಿಬಿರ..

ನಿರ್ಗತಿಕ ಮಹಿಳೆಗೆ ಹೊಲಿಗೆ ಯಂತ್ರ ವಿತರಿಸಿದ ಡಾ ಸೋನಾಲಿ ಸರ್ನೋಬತ್..

ಬೆಳಗಾವಿ : ರವಿವಾರ ದಿನಾಂಕ 30/06/2024ರಂದು ವೈದ್ಯರ ದಿನಾಚರಣೆ ನಿಮಿತ್ತವಾಗಿ ನಿಯತಿ ಫೌಂಡೇಶನ್ ಹಾಗೂ ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಡೆಂಗ್ಯೂ ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಔಷಧಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಪೂಜೆ ಸಲ್ಲಿಸಿ ಮಾತನಾಡಿದ ಡಾ
ಸೋನಾಲಿ ಸರ್ನೋಬತ್ ಅವರು ನಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಡಾ.ಸುಧೀರ್ ಬಿ.ಕೆ, ಡೆಂಗ್ಯೂ ಕಾಯಿಲೆ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಮಾತನಾಡಿದರು. ಮಹಿಳಾ ಸಬಲೀಕರಣದ ಸಂಕೇತವಾಗಿ ನಿಯತಿ ಫೌಂಡೇಶನ್‌ನಿಂದ ಮಂಗಲ್ ಪಾಟೀಲ್ ಅವರಿಗೆ ಡಾ. ಸೋನಾಲಿ ಸರ್ನೋಬತ್ ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

ಶಾಹುನಗರದ ನಿವಾಸಿಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳಿಗೆ ಡೆಂಗ್ಯೂ ಹನಿ ಹಾಕಲಾಗಿದ್ದು,
ದೀಪಾಲಿ ಮಾಲಕರಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಡಾ.ಸುಧೀರ ಬಿ.ಕೆ.,ಯುವಪರಿವರ್ತನ ಸಂಯೋಜಕ ಪ್ರವೀಣ ಸುಳಗೇಕರ, ಮಾಜಿ ಸೇವಾ ಯೋಧ ಸಿದ್ಧಪ್ಪ ಹಿಂಗ್ಮಿರೆ, ಮಂಗಲ ಪಾಟೀಲ, ಗೀತಾಂಜಲಿ ಚೌಗುಲೆ, ದೀಪಾಲಿ ಮಲಕಾರಿ, ಕಾಂಚನ್ ಚೌಗುಲೆ ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..