ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಲಿಸುತ್ತಿರುವ ಹಿಂದುಳಿದ ವರ್ಗಗಳ ಇಲಾಖೆ..

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಲಿಸುತ್ತಿರುವ ಹಿಂದುಳಿದ ವರ್ಗಗಳ ಇಲಾಖೆ..

ವಸತಿ ನಿಲಯ ವಿಧ್ಯಾರ್ಥಿಗಳಿಗೆ ಉತ್ತಮ ಮೂಲಭೂತ ಸೌಕರ್ಯ..

ಶೈಕ್ಷಣಿಕ ಸಾಧನೆಗೈದ ವಿಧ್ಯಾರ್ಥಿಗಳಿಗೆ ಗೌರವ ಹಾಗೂ ಪ್ರೋತ್ಸಾಹ..

ವಿಶೇಷ ಕಾರ್ಯಗಾರಗಳಿಂದ ಸೇವಾ ಗುಣಮಟ್ಟ ಹೆಚ್ಚಿಸಿದ ಅಧಿಕಾರಿ ಶಿವಪ್ರಿಯಾ ಕಡೆಚೂರ..

ಬೆಳಗಾವಿ : ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶಿವಪ್ರಿಯಾ ಕಡೇಚೂರ ಅವರು ಇಲಾಖೆಯ ಅಧಿಕಾರ ವಹಿಸಿಕೊಂಡ ಇನ್ನೂ ಒಂದು ವರ್ಷವೂ ಕೂಡಾ ಆಗದೇ ಇದ್ದರೂ, ಅಲ್ಪ ಸಮಯದಲ್ಲಿಯೇ ಜಿಲ್ಲೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ..

ಇಲಾಖೆಯ ಶೈಕ್ಷಣಿಕ ಹಾಗೂ ಸಾಮಾಜಿಕವಾದ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳ ಒದಗುವಂತೆ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದು, ಜಿಲ್ಲೆಯ ವಸತಿ ನಿಲಯಗಳಲ್ಲಿ ವಿಧ್ಯಾರ್ಥಿಗಳಿಗೆ ಉತ್ತಮ ರೀತಿಯ ಮೂಲಭೂತ ಸೌಲಭ್ಯ ಸಿಗುವ ವ್ಯವಸ್ಥೆ ಮಾಡಿದ್ದಾರೆ..

ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಾಸಿಗೆ ಹೊದಿಕೆ, ಬೆಳಕಿನ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಆದ್ಯತೆ, ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆ, ಎಸೆಸೆಲ್ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಿ, ಅವರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಇಲಾಖೆಯ ಜಿಲ್ಲಾ ಅಧಿಕಾರಿಯವರು ಕಾರ್ಯ ಶ್ಲಾಘನೀಯ..

2023 – 24ನೇ ಸಾಲಿನಲ್ಲಿ ಸವದತ್ತಿ ತಾಲೂಕಿನ, ಮುನವಳ್ಳಿಯಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವ್ಯಾಸಾಂಗ ಮಾಡಿದ ವಿಧ್ಯಾರ್ಥಿನಿ ಗಂಗವ್ವ ಸುಣದೊಳಿ (ಶೇ99 %) ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಐದನೆಯ ರ್ಯಾಂಕ್ ಪಡೆದಿದ್ದು ಇಲಾಖೆಗೆ ಹೆಮ್ಮೆಯ ಸಾಧನೆಯಾಗಿದೆ..

ಈ ವಿಧ್ಯಾರ್ಥಿನಿ ಬಡ ರೈತನ ಮಗಳಾಗಿದ್ದು, ಇಲಾಖೆಯ ಅಧಿಕಾರಿಯಾದ ಶಿವಪ್ರಿಯ ಕಡೇಚೂರ್ ಅವರು, ಗೊರಗುದ್ದಿ ಗ್ರಾಮದ ಹೊಲದಲ್ಲಿ ಇರುವ ಅವರ ಮನೆಗೆ ಬೇಟಿ ನೀಡಿ, ವಿಧ್ಯಾರ್ಥಿನಿ ಹಾಗೂ ಅವರ ಪಾಲಕರಿಗೆ ಗೌರವಿಸಿ, ಮುಂದಿನ ಶಿಕ್ಷಣಕ್ಕಾಗಿ ನೆರವು ನೀಡಿದ್ದು, ಅದೇ ರೀತಿ ಜಿಲ್ಲೆಗೆ ಅತೀ ಹೆಚ್ಚು ಅಂಕಗಳನ್ನು ತಗೆದುಕೊಂಡ 10 ವಿಧ್ಯಾರ್ಥಿಗಳನ್ನು ಕಚೇರಿಗೆ ಕರೆಯಿಸಿ, ಸತ್ಕರಿಸಿ, ಗೌರವ ನೀಡಿ ಪ್ರೋತ್ಸಾಹಿಸಿದ ಕಾರ್ಯ ಮಾದರಿಯಾಗಿದೆ..

ಅದೇರೀತಿ ಕಳೆದ ಮೇ ತಿಂಗಳಿನಲ್ಲಿ ನಿಲಯ ಮೇಲ್ವಿಚಾರಕರಿಗೆ, ಅಡುಗೆ ಹಾಗೂ ಅಡುಗೆ ಸಹಾಯಕರಿಗೆ ವಿಶೇಷವಾದ ತರಬೇತಿಯನ್ನು ನೀಡುವ ಮೂಲಕ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಫಲವಾಗಿದ್ದು, ಇಲಾಖೆಯ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹರಿಗೆ ತಲುಪುವಂತೆ ಮಾಡುತ್ತಿರುವ ಕಾರ್ಯ ಪ್ರಶಂಸನೀಯ..

ವರದಿ ಪ್ರಕಾಶ ಬಸಪ್ಪ ಕುರಗುಂದ..