ಸರಳವಾಗಿ ಮುಗಿದುಹೋದ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ…

ಸರಳವಾಗಿ ಮುಗಿದುಹೋದ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ..

ಐದು ನಮಗೆ ಎರಡು ನಿಮಗೆ ಪಾಲಿಸಿ..

ಅಭಿವೃದ್ಧಿ ಮಂತ್ರ ಪಠಿಸಿದ ಆಡಳಿತ ವಿರೋಧ ಪಕ್ಷದ ಅಧ್ಯಕ್ಷರು..

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣಾ ಪ್ರಕ್ರಿಯೆ ಮಂಗಳವಾರ ದಿನಾಂಕ 02/07/2024ರಂದು ಜರುಗಿದ್ದು, ಬಹುತೇಕ ಬಿಜೆಪಿ ಹಾಗೂ ಕಾಂಗ್ರೆಸ್ ಮಿತ್ರ ಪಕ್ಷಗಳ ಹೊಂದಾಣಿಕೆಯಲ್ಲಿ ಮುಗಿದಿದೆ ಎಂಬಂತಾಗಿದೆ..

58 ನಗರ ಸೇವಕರು ಇರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ನಗರ ಸೇವಕರು ಅಧಿಕಾರ ಪಡೆದುಕೊಂಡಾಗಿನಿಂದ ಎರಡನೆಯ ಬಾರಿಗೆ ಸ್ಥಾಯಿ ಸಮಿತಿಯ ಚುನಾವಣೆ ನಡೆಯುತ್ತಿದ್ದು, ವಿಶೇಷ ಬೆಳವಣಿಗೆ ಯಾವದೂ ಕಾಣದೇ, ಹೋದ ವರ್ಷದ ನೀತಿಯಂತೆ ಬಿಜೆಪಿಗೆ ಐದು, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಎರಡು ಸದಸ್ಯರ ಆಯ್ಕೆಗೆ ಅವಕಾಶ ಮಾಡಿಕೊಂಡಿದ್ದಾರೆ..

ಈ ವೇಳೆ ಮಾತನಾಡಿದ ಬೆಳಗಾವಿಯ ಶಾಸಕರಾದ ಅಭಯ ಪಾಟೀಲ್ ಹಾಗೂ ರಾಜು ಶೇಟ್ ಅವರು ನಗರದ ಅಭಿವೃದ್ಧಿ ದೃಷ್ಟಿಯಿಂದ ಹೊಂದಾಣಿಕೆಯ ಮೇಲೆ ಸ್ಥಾಯಿ ಸಮಿತಿಯ ಸದಸ್ಯರ ಅವಿರೋಧ ಆಯ್ಕೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಸದಸ್ಯರ ಹಾಗೂ ಪಾಲಿಕೆಯ ಅಧಿಕಾರಿಗಳ ಸಹಯೋಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದಿದ್ದಾರೆ..

ಬಿಜೆಪಿ ನಗರ ಸೇವಕರಲ್ಲಿ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲಾ, ಇವತ್ತು ಸದಸ್ಯರ ಆಯ್ಕೆ ನಡೆದು, ಇನ್ನು ಮುಂದಿನ ಎಂಟು ದಿನಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ನಡೆಯುತ್ತದೆ ಎಂಬ ಅಭಿಪ್ರಾಯ ತಿಳಿಸಿದ್ದಾರೆ..

ಶಾಸಕ ಅಭಯ ಪಾಟೀಲ ಅವರು ಮಾತನಾಡುತ್ತಾ, ಸರ್ಕಾರದಿಂದ ಬರುವ ಅನುದಾನದ ಕೊರತೆಯಿಂದ ನಗರದಲ್ಲಿ ಇನ್ನು ಹಲವಾರು ಅಭಿವೃದ್ದಿ ಕೆಲಸಗಳು ಬಾಕಿ ಉಳಿದಿದ್ದು, ಸರ್ಕಾರ ಸರಿಯಾದ ಅನುದಾನ ಬಿಡುಗಡೆ ಮಾಡಿ, ಪ್ರಗತಿಗೆ ಸಹಕಾರ ನೀಡಬೇಕು ಎಂದರು..

ಇನ್ನು ಆರೋಗ್ಯ, ಲೆಕ್ಕ, ಕಂದಾಯ, ಹಾಗೂ ಲೋಕೋಪಯೋಗಿ ಸ್ಥಾಯಿ ಸಮಿತಿಗಳಿಗೆ ಬಿಜೆಪಿಯ ತಲಾ ಐದೈದು ಸದಸ್ಯರ ಹೆಸರು ಈ ಕೆಳಗಿನಂತಿವೆ.. ಆರೋಗ್ಯ ಸಮಿತಿಯಲ್ಲಿ ಬಿಜೆಪಿಯ ಶ್ರೀಶೈಲ ಕಾಂಬಳೆ, ರೂಪಾ ಚಿಕ್ಕಲದಿನ್ನಿ, ದೀಪಾಲಿ ತೋಪಗಿ, ರಾಜು ಬಾಥಕಂಡೆ, ಮಾಧುರಿ ರುಘೋಚೆ, ಕಾಂಗ್ರೆಸ್ಸಿನ ಲಕ್ಷ್ಮಿ ಲೋಕರೆ, ಅಸ್ಮಿತಾ ಪಾಟೀಲ್, ಲೆಕ್ಕ ಸಮಿತಿಗೆ ಮಂಗೇಶ ಪವಾರ, ಸರಿತಾ ಪಾಟೀಲ, ಶಂಕರ ಪಾಟೀಲ, ಪ್ರಿಯಾ ಸಾತಗೌಡ, ರೇಷ್ಮಾ ಕಾಮಕರ, ಕಾಂಗ್ರೆಸ್ಸಿನ ರೇಷ್ಮಾ ಬೈರಕದಾರ, ಶಕೀಲಾ ಮುಲ್ಲಾ, ಆಯ್ಕೆಯಾಗಿದ್ದು,

ಕಂದಾಯ ಸಮಿತಿಗೆ, ಬಿಜೆಪಿಯ ನೇತ್ರಾವತಿ ಭಾಗವತ, ಪೂಜಾ ಪಾಟೀಲ್, ನೀತಿನ ಜಾಧವ, ಬ್ರಹ್ಮಾನಂದ ಮಿರಜಕರ, ಹಣಮಂತ ಕೊಂಗಾಲಿ, ಕಾಂಗ್ರೆಸ್ಸಿನ ಇಕ್ರಾ ಮುಲ್ಲಾ, ಜರಿನಾ ಪತೇಖಾನ,

ಇನ್ನು ಲೋಕೋಪಯೋಗಿಗೆ ಬಿಜೆಪಿಯ ಅಭಿಜಿತ್ ಜವಲ್ಕರ, ಸಂತೋಷ ಪೆಡ್ನೇಕರ, ರವಿರಾಜ ಸಾಂಬ್ರೇಕರ, ಜಯತೀರ್ಥ ಸವದತ್ತಿ, ಉದಯ ಉಪಾರಿ, ಕಾಂಗ್ರೆಸ್ಸಿನ ಶಿವಾಜಿ ಮಂಡೋಲ್ಕರ, ಬಸವರಾಜ ಮೊದಗೇಕರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..