ನಗರದ ವಾರ್ಡ ಸಂಖ್ಯೆ 4 ಹಾಗೂ 6ರಲ್ಲಿ ರೈನ್ ಕೋಟ್ ವಿತರಣೆ..
ನಗರ ಸೇವಕರಿಂದ ಪೌರ ಕಾರ್ಮಿಕರಿಗೆ ರೈನ್ ಕೋಟ್ ವಿತರಣೆ..
ಬೆಳಗಾವಿ : ವರ್ಷಪೂರ್ತಿ ಬಿಸಿಲು ಮಳೆ, ಚಳಿ ಎನ್ನದೇ ಬೆಳಿಗ್ಗೆ ಎದ್ದು ನಗರವನ್ನೆಲ್ಲಾ ಸ್ವಚ್ಛ ಮಾಡುವ ಸ್ವಚ್ಚತಾ ಕಾರ್ಮಿಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ರೈನ್ ಕೋಟ್ ಗಳನ್ನು ವಿತರಣೆ ಮಾಡಲಾಗಿದೆ..
ನಗರದಲ್ಲಿ ತೀವ್ರವಾದ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಪಾಲಿಕೆಯ ಅಧಿಕಾರಿಗಳು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸ್ವಚ್ಚತಾ ಕಾರ್ಮಿಕರಿಗೂ ರೈನ್ ಕೋಟ್ ನಿದಿಲಾಗಿದೆ..
ಅದೇರೀತಿ ಪಾಲಿಕೆಯ ವಾರ್ಡ ಸಂಖ್ಯೆ 4 ಹಾಗೂ 6ರಲ್ಲಿ ನಗರ ಸೇವಕರಾದ, ಜಯತೀರ್ಥ ಸವದತ್ತಿ ಹಾಗೂ ಸಂತೋಷ ಪೆಡ್ನೆಕರ ಅವರು ತಮ್ಮ ವಾರ್ಡಿನಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ರೈನ್ ಕೋಟ್ ವಿತರಿಸಿ, ಅಭಿನಂದಿಸಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..