ಬೆಳಗಾವಿ ನಗರದಲ್ಲಿ ಕಾಲುವೆ ಸ್ವಚ್ಛ…

ಬೆಳಗಾವಿ ನಗರದಲ್ಲಿ ಕಾಲುವೆ ಸ್ವಚ್ಛ..

ಮಳೆ ನೀರು ಸರಾಗ ಸಾಗಣೆಗೆ ಅನುಕೂಲ..

ನಗರ ಸೇವಕರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ..

ಬೆಳಗಾವಿ : ಕಳೆದ ಕೆಲ ದಿನಗಳಿಂದ ನಗರದಲ್ಲಿ ತೀವ್ರವಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ನಗರದ ಕಾಲುವೆ, ಚರಂಡಿಗಳಲ್ಲಿ ನೀರಿನ ಅತೀ ವೇಗವಾಗಿ ಹರಿದು, ಕೆಲ ರಸ್ತೆಗಳ ಮೇಲೆಯೇ ನೀರು ನಿಂತು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವದು ಸಾಮಾನ್ಯವಾಗಿರುತ್ತದೆ..

ಆದರೆ ಬೆಳಗಾವಿ ನಗರದ ಕೆಲ ನಗರ ಸೇವಕರ ಜನಪರ ಕಾಳಜಿಯಿಂದ ನಗರದ ಬ್ರಹತ್ತಾದ ಕಾಲುವೆಯೊಂದು ಸ್ವಚ್ಛವಾಗಿ, ಮಳೆಯ ರಬಸದ ನೀರು ಸರಾಗವಾಗಿ ಸಾಗುವಂತಾಗಿದೆ.

ವಾರ್ಡ ಸಂಖ್ಯೆ 4, 6, 9ರ ನಗರ ಸೇವಕರಾದ ಜಯತೀರ್ಥ ಸವದತ್ತಿ, ಸಂತೋಷ ಪೆಡ್ನೆಕರ ಹಾಗೂ ಸಿದ್ಧಾರ್ಥ ಬಾತ್ಕಂಡೆಯವರು ಇಂದು ಬೆಳಿಗ್ಗೆನೇ ನಗರದ ಅಂಬಾಭವನ ಹತ್ತಿರ ಹಾಯ್ದು ಹೋಗುವ ಬ್ರಹತ್ ಕಾಲುವೆಯನ್ನು ಸ್ವಚ್ಛಗೊಳಿಸಿದ್ದಾರೆ.

ಪಾಲಿಕೆಯ ಬುಲ್ಡೋಜರ್ ಹಾಗೂ ಬಾರಿ ಕಸದ ವಾಹನಗಳನ್ನು ಬಳಸಿಕೊಂಡು, ತುಂಬಾ ಕಸ ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ತುಂಬಿಕೊಂಡಿದ್ದ ಕಾಲುವೆಯನ್ನು ಪಾಲಿಕೆಯ ಸಿಬ್ಬಂದಿಗಳಿಂದ ಸ್ವಚ್ಛಗೊಳಿಸಿ, ಮಳೆ ನೀರು ಸುಲಭ ಹಾಗೂ ರಭಸದಿಂದ ಸಾಗಲು ಅನುಕೂಲ ಮಾಡಿ, ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..