ವ್ಯಾಪಕ ಮಳೆಯಾದ ಖಾನಾಪುರ ತಾಲೂಕಿಗೆ ಸಚಿವರ ಬೇಟಿ ಮತ್ತು ಪರಿಶೀಲನೆ..

ಬೆಳಗಾವಿ : ಶುಕ್ರವಾರ ದಿನಾಂಕ 26/07/2024ರಂದು ಜಿಲ್ಲೆಯ ಖಾನಾಪುರ ತಾಲ್ಲೂಕಿನ ಅತೀ ವೃಷ್ಟಿಯಾದ ಕೆಲ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಬೇಟಿ ನೀಡಿದ್ದಾರೆ..

ಈ ವೇಳೆ ಜಾಂಬೋಟಿ ರಸ್ತೆಯಲ್ಲಿರುವ ಕುಸುಮಳ್ಳಿ‌ ಸೇತುವೆ ‌ಪರಿಶೀಲಿಸಿದರು, ತೀವ್ರ ಮಳೆಗೆ ಹಾನಿಗೊಳಗಾದ ಕೃಷಿ ಬೆಳೆಗಳು, ಸಂಚಾರ ರಸ್ತೆಗಳು ಹಾಗೂ ಜನವಸತಿ ನೆಲೆಗಳ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಖಾನಾಪುರ ಶಾಸಕರಾದ‌ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..