ಜನರಿಗೆ ಸೌಲಭ್ಯ ನೀಡದ ಸರ್ಕಾರವೇಕೆ, ಜನಪ್ರತಿನಿಧಿಗಳೇಕೆ?

ಜನರಿಗೆ ಸೌಲಭ್ಯ ನೀಡದ ಸರ್ಕಾರವೇಕೆ, ಜನಪ್ರತಿನಿಧಿಗಳೇಕೆ?

ಹೊಸ ಶಾಸಕರಾದರೂ ಜನರ ಸಮಸ್ಯೆಗೆ ಸ್ಪಂದಿಸುತ್ತಾರಾ?

ಬೆಳಗಾವಿ : ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಗೆ ಅನುಕೂಲಕರವಾದ ಕಾರ್ಯಗಳು ನಡೆಯುವಂತಹ ವ್ಯವಸ್ಥೆ, ಆದರೆ ಪ್ರಜೆಗಳಿಂದ ಮತ, ಅಧಿಕಾರ ಪಡೆದ ರಾಜಕಾರಣಿಗಳು ಜನಗಳನ್ನೇ ಮರೆತು, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕೂಡಾ ಪೂರೈಸದೆ ಮೈಮರೆತು ಇರುವದು ದುರದೃಷ್ಟಕರ..

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಇರುವ, ಕೋಟೆ ರಸ್ತೆಯ, ದೇಶಪಾಂಡೆ ಪೆಟ್ರೋಲ್ ಬಂಕನಿಂದ ಹಿಡಿದು ತಾನಾಜಿ ಗಲ್ಲಿಯ ರೇಲ್ವೆ ಗೇಟ್ ವರೆಗೆ ಇರುವ ರಸ್ತೆ ಹಾಳಾಗಿ ಎಷ್ಟೋ ವರ್ಷಗಳಾಗಿವೆ, ಆದರೆ ಯಾವುದೇ ಸರ್ಕಾರದ, ಯಾವುದೇ ಶಾಸಕರು ಬಂದರೂ ಈ ರಸ್ತೆ ಸುಧಾರಣೆಗೆ ಮನಸ್ಸು ಮಾಡಿಲ್ಲ..

ಬೆಳಗಾವಿ ಉತ್ತರ ಮತ ಕ್ಷೇತ್ರದ ಕೊನೆಗೆ ಹಾಗೂ ದಕ್ಷಿಣ ಮತಕ್ಷೇತ್ರದ ಆರಂಭವನ್ನು ಜೋಡಣೆ ಮಾಡುವ ಈ ರಸ್ತೆಯ ಬಗ್ಗೆ ಎಲ್ಲರಿಗೂ ನಿಷ್ಕಾಳಜಿಯೇ ಅನಿಸುತ್ತದೆ, ಮಳೆಗಾಲ ಬಿಡಿ, ಯಾವ ಕಾಲದಲ್ಲಿಯೂ ಈ ರಸ್ತೆ ಸಂಚಾರಕ್ಕೆ ಯೋಗ್ಯ ಎನಿಸಿಲ್ಲ, ಇಲ್ಲಿ ಸಂಚರಿಸುವ ಸಾರ್ವಜನಿಕರು ಎಷ್ಟೋ ಸಲ ಈ ರಸ್ತೆ ಸುಧಾರಣಾ ವಿಷಯವನ್ನು ಸಂಭಂದಪಟ್ಟ ಶಾಸಕರ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ..

ಹಿಂದಿನ ಅವಧಿಯಲ್ಲಿ ಬಿಜೆಪಿಯ ಅನಿಲ ಬೇನಕೆ ಅವರು ಶಾಸಕಾರಿಗಿದ್ದು, ಈ ಅವಧಿಯಲ್ಲಿ ಕಾಂಗ್ರೆಸ್ಸಿನ ಆಶಿಫ್ (ರಾಜು) ಸೇಠ ಅವರು ಶಾಸಕರಾಗಿದ್ದು, ಇನ್ನುತನಕ ಈ ರಸ್ತೆ ಸುಧಾರಣೆ ಆಗಿಲ್ಲದ ಕಾರಣ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ..

ಪ್ರತಿದಿನ ಸಾವಿರಾರು ರಸ್ತೆ ಸಂಚಾರಿಗಳು ಈ ಕೆಟ್ಟುಹೋದ ರಸ್ತೆಯಲ್ಲಿ ಸಂಚರಿಸುವಾಗ, ತಮ್ಮ ವಾಹನಗಳು ಪಡುವ ಸಂಕಷ್ಟಕ್ಕೆ ಸಾಕಾಗಿ ಹೋಗಿದ್ದು, ತಮ್ಮ ಮನಸ್ಸಿನಲ್ಲಿಯೇ ಜನಪ್ರತಿನಿಧಿಗಳ ಮೇಲೆ ಹಿಡಿಶಾಪ ಹಾಕುವ ಸನ್ನಿವೇಶ ಸಾಮಾನ್ಯವಾಗಿದೆ..

ಎಲ್ಲರ ನಿರ್ಲಕ್ಷಕ್ಕೆ ಗುರಿಯಾದ ಈ ರಸ್ತೆ, ಈಗಲಾದರೂ ಸುಧಾರಣೆಯ ಭಾಗ್ಯ ಕಾಣುತ್ತಾ? ಸ್ಥಳೀಯ ಶಾಸಕರು ತಮ್ಮ ಕ್ಷೇತ್ರದ ಮತದಾರರ ಬಗ್ಗೆ ಈಗಲಾದರೂ ಸ್ವಲ್ಪ ಕಾಳಜಿ ತೋರಿ ರಸ್ತೆ ಸುಧಾರಣೆ ಮಾಡುವರಾ? ಎಂದು ಕಾದುನೋಡಬೇಕಾಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..