ಬೆಳಗಾವಿ ನಗರವಾಸಿಗಳಿಗೆ ಕೆಂಪು ಬಣ್ಣದ ನೀರು ಕುಡಿಯುವ ಪರಿಸ್ಥಿತಿ..
ಸಾರ್ವಜನಿಕರಿಗೆ ತಮ್ಮ ಆರೋಗ್ಯದ್ದೇ ದೊಡ್ಡ ಚಿಂತೆ..
ತಾಂತ್ರಿಕ ಕಾರಣ ನೀಡಿ, ಎರಡ್ಮೂರು ದಿನಗಳಲ್ಲಿ ಶುದ್ಧ ನೀರು ಪೂರೈಕೆ ಎಂದ ಅಧಿಕಾರಿಗಳು..
ಬೆಳಗಾವಿ : ಕಳೆದ ಸುಮಾರು ಒಂದು ತಿಂಗಳಿನಿಂದ ನಗರಕ್ಕೆ ಮಳೆ ಸುರಿಯುತ್ತಿದ್ದು, ಆಗಿನಿಂದ ಹೊಸ ಮಳೆಯ ನೀರು ಸ್ವಲ್ಪ ಕೆಂಪು ಬಣ್ಣದಲ್ಲಿ ಬರುವದು ಸಾಮಾನ್ಯಎಂದು ನಗರವಾಸಿಗಳು ಅನುಸರಿಸಿಕೊಂಡು ಅಂತಹ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದರು..
ಆದರೆ ಇಂದು ರವಿವಾರ ದಿನಾಂಕ 28/07/2024ರಂದು ನಗರದ ಕೋಟೆ ರಸ್ತೆ, ಪಾಟೀಲ ಗಲ್ಲಿ, ಪೂಲಭಾಗಲ್ಲಿ, ಬಾಂದುರ ಗಲ್ಲಿ, ತಹಶೀಲ್ದಾರ ಗಲ್ಲಿ, ತಾನಾಜಿ ಗಲ್ಲಿ, ಶೇರಿಗಲ್ಲಿ, ಕುಲ್ಕರ್ಣಿ ಗಲ್ಲಿ ಮಠಗಲ್ಲಿ, ಹೀಗೆ ವಿವಿಧ ಭಾಗಗಳಲ್ಲಿ ಬೆಳಿಗ್ಗೆಯಿಂದ ಕುಡಿಯುವ ನೀರು ಬಿಟ್ಟಿದ್ದು ತುಂಬಾ ಕೆಂಪು ಬಣ್ಣದಿಂದ ಕೂಡಿದ್ದು ಯಾರು ನೀರು ತುಂಬಲಿಕ್ಕೆ ಮುಂದೆ ಬರದಂತೆ ಸ್ಥಿತಿ ಇತ್ತು..
ನಾಲ್ಕೈದು ದಿನಕ್ಕೊಮ್ಮೆ ನೀರು ಯಾವಾಗ ಬರುತ್ತವೆ ಎಂದು ಕಾಯ್ದು ಕುಳಿತಿರುವ ಜನರು ಇವತ್ತಿನ ಇಂತಹ ನೀರು ನೋಡಿ ನಿರಾಸೆಯೊಂದಿಗೆ ಕೂಪಿತರಾಗಿದ್ದು, ನೀರು ಪೂರೈಕೆ ಮಾಡುವ ಇಲಾಖೆಯನ್ನು ತಮ್ಮದೇ ಧಾಟಿಯಲ್ಲಿ ಕೆಲ ಹೊತ್ತು ನೆನಸಿಕೊಂಡಿದ್ದಾರೆ..
ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಸಭೆಗಳಲ್ಲಿ ಮಾತನಾಡುತ್ತಾ, ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿದ್ದೇವೆ ಎಂದು ಹೇಳಿಕೆ ನೀಡುವರು, ಆದರೆ ಇಲ್ಲಿ ವಾಸ್ತವ ಸ್ಥಿತಿಯೇ ಬೇರೆಯಾಗಿರುತ್ತದೆ, ಇಂತಹ ಮಣ್ಣು ಮಿಶ್ರಿತ ಕೆಂಪು ಬಣ್ಣದ ನೀರನ್ನು ಕುಡಿಯುವ ಸಾರ್ವಜನಿಕರಿಗೆ ತಮ್ಮ ಆರೋಗ್ಯದ್ದೆ ದೊಡ್ಡ ಚಿಂತೆಯಾಗಿದೆ..

ಎಲ್ಲವೂ ಸರಿ ಇರುವಾಗಲೇ ಕಾಯಿಲೆಗಳು ಬರುವ ಈ ಮಳೆಗಾಲದ ವಾತಾವರಣದಲ್ಲಿ ಇನ್ನು ಇಂತಹ ನೀರು ಕುಡಿದರೆ ಹೇಗೆ ಎಂದು ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ..
ಇನ್ನು ಸಂಬಂಧಪಟ್ಟ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಬೆಳಗಾವಿಯ ಅಧಿಕಾರಿಯನ್ನು ವಿಚಾರಿಸಿದಾಗ ನೀರು ಶುದ್ಧೀಕರಣ ಸಮಯದಲ್ಲಿ ವಿದ್ಯುತ್ ಕಡಿತಗೊಂಡಾಗ, ಶುದ್ಧೀಕರಣದ ತಂತ್ರಗಳಲ್ಲಿ ಕಲ್ಮಶವಿದ್ದಾಗ ಹೀಗೆ ಆಗುವುದುಂಟು, ಅದೇ ರೀತಿ ಮಹಾರಾಷ್ಟ್ರದಿಂದ ರಾಕಸಕೊಪ್ಪ ಜಲಶಯಕ್ಕೆ ಅತಿಯಾದ ಮಣ್ಣು ಮಿಶ್ರಿತ ನೀರು ಬರುತ್ತಿರುವುದರಿಂದ ಈ ರೀತಿಯ ಕೆಂಪು ನೀರು ಬರುತ್ತಿದ್ದು, ಎರಡ್ಮೂರು ದಿನಗಳಲ್ಲಿ ಶುದ್ದಿಕರಣಗೊಂಡ ನೀರು ಪೂರೈಕೆ ಆಗುತ್ತದೆ ಎಂದಿದ್ದಾರೆ..
ನೀರಿನ ಬಣ್ಣ ಅಷ್ಟೇ ಕೆಂಪಾಗಿರಬಹುದು ಆದರೆ ಇದು ಕುಡಿಯಲು ಯೋಗ್ಯವಾದ ಎಲ್ಲಾ ಅಂಶಗಳನ್ನು ಹೊಂದಿದ ನೀರೇ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಂಡಿದ್ದು, ಸಾಮಾನ್ಯ ಜನರು ನೀರನ್ನು ನೀಡಿದಾಗ ಅದು ಕಲ್ಮಷ ನೀರೇ ಎಂದು ಗೋಚರಿಸುತ್ತದೆ ಎಂಬುದು ವಿಷಾದನೀಯ..
ಅದೇನೇ ಇರಲಿ ಇಂತಹ ಮಳೆಗಾಲದ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಅಧಿಕಾರಿಗಳು ತಾವು ಸಭೆಗಳಲ್ಲಿ ನುಡಿಯುವಂತೆ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು, ಈಗಾಗಲೇ ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿರುವದರಿಂದ, ಸಮಸ್ಯೆಗಳು ಆಗದಂತೆ ಮುಂಜಾಗ್ರತಾ ಕ್ರಮವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು, ಇದು ನಮಗೆ ಸಂಬಂಧ ಇಲ್ಲಾ, ನಿಮಗೆ ಸಂಬಂಧ ಇಲ್ಲಾ ಅನ್ನುವ ನುಣುಚಿಕೊಳ್ಳುವ ಹೇಳಿಕೆ ನೀಡದೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇಲಾಖೆಗಳು ಜವಾಬ್ದಾರಿ ತಗೆದುಕೊಂಡು ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆನ್ನುವುದು ಸಾರ್ವಜನಿಕರ ಆಶಯ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..