ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೊರೆಯವರ 77ನೇ ಜನ್ಮದಿನದ ವಿಶೇಷ…

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೊರೆಯವರ 77ನೇ ಜನ್ಮದಿನದ ವಿಶೇಷ..

100 ರೋಗಿಗಳಿಗೆ ಉಚಿತ ಎಂಜಿಯೋಗ್ರಾಫಿ ಹಾಗೂ 25 ಜನರಿಗೆ ಎಂಜಿಯೋಪ್ಲಾಸ್ಟಿ..

ಜಿಲ್ಲೆಯ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ..

ಬೆಳಗಾವಿ : ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೋರೆ ಅವರ 77ನೇ ಜನ್ಮ ದಿನದ ಸಂಭ್ರಮಾಚರಣೆಯ ಅಂಗವಾಗಿ, ಕೆಎಲ್ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಆರ್ಥಿಕವಾಗಿ ಹಿಂದುಳಿದ, ಸರ್ಕಾರದಿಂದ ಯಾವುದೇ ವೈದ್ಯಕೀಯ ಯೋಜನೆ ಪಡೆಯದ 100 ರೋಗಿಗಳಿಗೆ ಉಚಿತ ಎಂಜಿಯೋಗ್ರಾಫಿ ಹಾಗೂ 25 ಜನರಿಗೆ ಎಂಜಿಯೋಪ್ಲಾಸ್ಟಿ ನೆರವೇರಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ..

ಸೋಮವಾರ ದಿನಾಂಕ 29/07/2024ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ತಜ್ಞರು, ರೋಗಿಯು ಆರ್ಥಿಕವಾಗಿ ಹಿಂದುಳಿದವರು ಆಗಿರಬೇಕು, ಕುಟುಂಬ ವಂಚಿತ ಹಿರಿಯ ನಾಗರಿಕರು ಈ ಯೋಜನೆಗೆ ಅರ್ಹರು, ಮೊದಲಿಗೆ ಬಂದ ರೋಗಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಅವಶ್ಯಕತೆ ಇದ್ದ ಜನರು ತಮ್ಮ ಹೆಸರು ನೀಡಬಹುದು ಎಂದಿದ್ದಾರೆ..

ಚಿಕಿತ್ಸೆ ಬಯಸುವ ರೋಗಿಗಳಿಗೆ ಆಧಾರ ಕಾರ್ಡ, ರೇಶನ ಕಾರ್ಡ, ಪ್ಯಾನ್ ಕಾರ್ಡ, ಅಭಾ ಕಾರ್ಡ ಕಡ್ಡಾಯ, ಈ ಯೋಜನೆಯೊಂದಿಗೆ ಯಾವುದೇ ವಿಮಾ ಯೋಜನೆ ಸೇರಿಸಲಾಗುವದಿಲ್ಲ, ವೈದ್ಯಕೀಯ ದಾಖಲೆಗಳನ್ನು ಕಾಗದದ ರೂಪದಲ್ಲಿ ಮಾತ್ರ ನೀಡುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ..

ಇಲ್ಲಿಯಯವರೆಗೆ ಆಸ್ಪತ್ರೆ ಸುಮಾರು ಒಂದೂವರೆ ಲಕ್ಷ ಎಂಜಿಯೋಗ್ರಾಫಿ, ಹಾಗೂ ಎಂಜಿಯೋಪ್ಲಾಸ್ಟಿ ಮಾಡಿದ್ದು, ಈ ಭಾಗದ ಅತೀ ಹೆಚ್ಚು ಜನರ ಹೃದಯ ಚಿಕಿತ್ಸೆ ನೀಡಿರುವ ಹೆಮ್ಮೆ ಆಸ್ಪತ್ರೆಗಿದೆ ಎಂದಿದ್ದಾರೆ.

ಡಾ ಪ್ರಭಾಕರ ಕೋರೆಯವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..