ಕಡೆಗೂ ಆರಂಭವಾದ ಶಾಲಾಶೌಚಾಲಯ..

ಕಡೆಗೂ ಆರಂಭವಾದ ಶಾಲಾ
ಶೌಚಾಲಯ..

👉ಅಗಸಗೆ ಪ್ರಾಥಮಿಕ ಶಾಲೆ ಮಕ್ಕಳು-ಶಿಕ್ಷಕರು ಈಗ ನಿರಾಳ..

👉ಸೇಫ್ ವಾರ್ಡ್-ದಲಿತ ಹೋರಾಟಕ್ಕೆ ಮಣಿದ ಅಗಸಗೆ ಗ್ರಾಮ ಪಂಚಾಯತಿ..

👉ಸಮಾಜಮುಖಿ ವರದಿ ಫಲಶೃತಿ

ಬೆಳಗಾವಿ : ಕಳೆದ ಒಂಬತ್ತು ತಿಂಗಳಿನಿಂದ ಶೌಚಾಲಯವಿಲ್ಲದೇ ಭಾರೀ ತೊಂದರೆ ಅನುಭವಿಸುತ್ತಿದ್ದ ಅಗಸಗೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಸುಮಾರು‌ ಎರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೌಚಾಲಯ ಆರಂಭಿಸಿರುವುದರಿಂದ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಸಮಾಜಮುಖಿ ಸುದ್ದಿ ವಾಹಿನಿ ಗುರುವಾರ ಸುದ್ದಿ ಬಿತ್ತರಿಸಿತ್ತು.

ಬೆಳಗಾವಿ ತಾಲೂಕಿನ ಅಗಸಗೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಲು ಹಳೆಯ ಶೌಚಾಲಯ ಕೆಡವಿ ಸುಮಾರು ಒಂಬತ್ತು ತಿಂಗಳು ಕಳೆದಿತ್ತು. ಶೌಚಾಲಯ ಕಾಮಗಾರಿ ಮುಕ್ತಾಯಗೊಂಡು ತಿಂಗಳುಗಳು ಕಳೆದಿದ್ದರೂ ಗ್ರಾಮ ಪಂಚಾಯತಿಯವರು ಅದನ್ನು ಬಳಸಲು ಅನುಮತಿ ನೀಡಿರಲಿಲ್ಲ. ಇದರಿಂದ ಒಂದೇ ಕಾಂಪೌಂಡ್ ಒಳಗೆ ಇರುವ ಕನ್ನಡ ಹಾಗೂ ಮರಾಠಿ ಎರಡೂ ಶಾಲೆಯ ಸುಮಾರು ಮೂರು ನೂರಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕರು ಒಂದೇ ಶೌಚಾಲಯ ಬಳಸುತ್ತಿದ್ದರು. ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು.

ಶೌಚಾಲಯವನ್ನು ಬೇಗ ಆರಂಭಿಸುವಂತೆ ಪಿಡಿಒ ಹಾಗೂ ಗುತ್ತಿಗೆದಾರರಿಗೆ ಹಲವಾರು ಬಾರಿ ಹೇಳಿದ್ದರೂ ಅವರು ಆ ಕಡೆ ಗಮನ ಹರಿಸಿರಲಿಲ್ಲ.

ಹೀಗಾಗಿ ಬುಧವಾರ ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಹಾಗೂ ದಲಿತ ಮುಖಂಡ ಶಿವಪುತ್ರ ಮೇತ್ರಿ ಪಿಡಿಒ ಎನ್.ಎ. ಮುಜಾವರ್ ಅವರನ್ನು ಭೇಟಿ ಮಾಡಿ ಆಗಸ್ಟ್ 1ರವರೆಗೆ ಶೌಚಾಲಯ ಆರಂಭಿಸದಿದ್ದರೆ ಬೀಗ ಮುರಿಯುವ ಎಚ್ಚರಿಕೆ ನೀಡಿದ್ದರು. ಇದನ್ನು ಅರಿತ ಪಿಡಿಒ ಎನ್.ಎ.ಮುಜಾವರ ಗುರುವಾರ ಶೌಚಾಲಯ ಕೀಲಿ ತೆಗೆಸಿ ಶೌಚಾಲಯ ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ.

👉ಗ್ರಾಮಸ್ಥರಿಂದ ಮೆಚ್ಚುಗೆ..

ಶೌಚಾಲಯ ಕಾಮಗಾರಿ ಮುಗಿದು ತಿಂಗಳುಗಳು ಉರುಳಿದ್ದರೂ ಗುತ್ತಿಗೆದಾರರು ಇದನ್ನು ಶಾಲೆಗೆ ಹಸ್ತಾಂತರ ಮಾಡಿರಲಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿರಲಿಲ್ಲ, ಸೇಫ್ ವಾರ್ಡ್ ಸಂಸ್ಥೆ ಹಾಗೂ ದಲಿತ ಸಂಘಟನೆಗಳ ಹೋರಾಟದ ಎಚ್ಚರಿಕೆಯಿಂದ ಗ್ರಾಮ ಪಂಚಾಯತಿಯವರು ಎಚ್ಚೆತ್ತುಕೊಂಡಿದ್ದಾರೆ, ಸಂತೋಷ ಮೇತ್ರಿ ಶಿವಪುತ್ರ ಮೇತ್ರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

👉ಶಾಲಾ ಮಕ್ಕಳು-ಶಿಕ್ಷಕರು ಈಗ ನಿರಾಳ..

ಅಗಸಗೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸುಮಾರು ‌ಎರಡು ನೂರಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು, ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎರಡೂ ಶಾಲೆಗಳಿಗೆ ಪ್ರತ್ಯೇಕ ‌ಶೌಚಾಲಯವಿದ್ದವು, ಆದರೆ ಕನ್ನಡ ಶಾಲೆಯ ಕಾಮಗಾರಿ ‌ಪ್ರಗತಿಯಲ್ಲಿದ್ದ ಕಾರಣ ಎರಡೂ ಶಾಲೆಯ ಸುಮಾರು ನಾಲ್ಕು ನೂರು ವಿದ್ಯಾರ್ಥಿ ಹಾಗೂ ಶಾಲಾ ಸಿಬ್ಬಂದಿ ಒಂದೇ ಶೌಚಾಲಯ ಉಪಯೊಗಿಸುವಂತಾಗಿದೆ. ಇದರಿಂದ ಶೌಚಕ್ಕೆ ಎರಡೂ ಶಾಲೆ ಮಕ್ಕಳು ಒಮ್ಮೆಲೆ ಹೊರಗೆ ಬರುವುದರಿಂದ ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗುತ್ತಿದೆ. ಅಷ್ಟೂ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ ಸಕಾಗುತ್ತಿಲ್ಲ. ಅಲ್ಲದೆ ಶೌಚಾಲಯ ಗೊಬ್ಬು ನಾರುತ್ತಿದೆ. ಇದು ಶಾಲಾ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿತ್ತು. ಈಗ ಶೌಚಾಲಯ ಆರಂಭವಾಗಿರುವುದರಿಂದ ನಿರಾಳವಾಗಿದ್ದಾರೆ.

👉ಶಾಲೆಗೆ ಭೆಟ್ಟಿ

ಶುಕ್ರವಾರ ಶಾಲೆಗೆ ಭೇಟಿ ನೀಡಿದ ದಲಿತ ಪ್ರಗತಿಪರ ಸೇನೆ ರಾಜ್ಯಾಧ್ಯಕ್ಷ ಶಿವಪುತ್ರ ಮೇತ್ರಿ, ಸಂತೋಷ ಮೇತ್ರಿ ಹಾಗೂ ಸಿ.ಆರ್.ಪಿ ರಮೇಶ್‌ ಪಾಟೀಲ ಶೌಚಾಲಯ ಕಟ್ಟಡ ವೀಕ್ಷಿಸಿದರು. ನೀರಿನ ಕೊರತೆ ಬಾರದಂತೆ‌ ಎಚ್ಚರವಹಿಸಲು ಸಿ.ಆರ್.ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ದಲಿತ ಪ್ರಗತಿಪರ ಸೇನೆ ರಾಜ್ಯ ಅಧ್ಯಕ್ಷ ಶಿವಪುತ್ರ ಮೇತ್ರಿ, ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ, ಪತ್ರಕರ್ತ ಸಿದ್ರಾಯ ಗಡಕರಿ, ಸಿ.ಆರ್.ಪಿ ರಮೇಶ ಪಾಟೀಲ ಶಿಕ್ಷಕರು ಇದ್ದರು..

ವರದಿ ಸಂತೋಷ ಮೇತ್ರಿ ಅಗಸಗೆ…