ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳು..
ಅಗಸಗೆ ಪ್ರೌಢಶಾಲೆಗೆ ಪ್ರಥಮ ಸ್ಥಾನ..
ಬೆಳಗಾವಿ : ಸಾರ್ವಜನಿಕ ಶಿಕ್ಷಣ ಇಲಾಖೆ (ಬೆಳಗಾವಿ ಗ್ರಾಮೀಣ) ಏರ್ಪಡಿಸಿದ್ದ ಕಡೋಲಿ ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಅಗಸಗೆಯ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ನಡೆದ ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಅಗಸಗೆ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡವು 4-3 ಅಂತರದಿಂದ ಹಂದಿಗನೂರು ಸರಸ್ವತಿ ಕಬ್ಬಡ್ಡಿ ತಂಡವನ್ನು ಪರಾಭವಗೊಳಿಸಿದರು.
ಅಗಸಗೆ ಪ್ರೌಢಶಾಲೆ ಕಬ್ಬಡ್ಡಿ ತಂಡದಲ್ಲಿ ಶ್ರೀಧರ ಪಾಟೀಲ, ಪರಶುರಾಮ ಮೇಕಳೆ, ಸುಬ್ರಹ್ಮಣ್ಯ ಲಟ್ಟಿ, ಸುದೇಶ ಡೋಣಕರಿ, ಕಾರ್ತಿಕ ಸೋಮಣ್ಣವರ, ಸಿದ್ದನಗೌಡ ಪಾಟೀಲ, ಅಮೋಲ ಭಾಗವಹಿಸಿದ್ದರು. ಅಗಸಗೆ ಪ್ರೌಢಶಾಲೆ ಕಬ್ಬಡ್ಡಿ ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಕ ನಿಂಗನಗೌಡ ಪಾಟೀಲ ತರಬೇತಿಯೊಂದಿಗೆ ಉತ್ತಮ ಮಾರ್ಗದರ್ಶನ ನೀಡಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ಶಾಲೆಯ ಕಬ್ಬಡ್ಡಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಅಗಸಗೆ ಪ್ರೌಢಶಾಲೆ ಕಬ್ಬಡ್ಡಿ ತಂಡದ ಆಟಗಾರರಿಗೆ ಶಾಲೆಯ ಮುಖ್ಯೋಪಾಧ್ಯಾಯ ಕೆ.ಶಿ. ಶಿವಕುಮಾರ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀ, ದಲಿತ ಮುಖಂಡ ಶಿವಪುತ್ರ ಮೇತ್ರಿ, ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ, ಸ್ಥಾನಿಕ ಆಡಳಿತ ಮಂಡಳಿಯವರು ಶುಭ ಹಾರೈಸಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕರಾದ ಅಗಸಗೆ ಪ್ರೌಢಶಾಲೆಯ ನಿಂಗನಗೌಡ ಪಾಟೀಲ, ಕಡೋಲಿ ಪ್ರೌಢಶಾಲೆಯ ಎನ್.ಆರ್ ಪಾಟೀಲ, ನದಾಫ್, ವಿನಾಯಕ, ಕೇದನೂರು ಶಾಲೆಯ ಆರ್.ಎನ್. ಪಾಟೀಲ, ಬಂಬರಗಾ ಶಾಲೆಯ ಎಮ್.ಎಮ್ ಪಾಟೀಲ, ಅಲತಗೆ ಶಾಲೆಯ ರಾಜು ಜಾಧವ, ಮಣ್ಣಿಕೇರಿ ಶಾಲೆಯ ಭಸ್ಮೆ, ಹಂದಿಗನೂರು ಶಾಲೆಯ ಮಾಸೇಕರ, ಕಟ್ಟಣಭಾವಿಯ ಕೋಳ್ತೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
….
ಸಂತೋಷ ಮೇತ್ರಿ…