ಬೆಳಗಾವಿಯಲ್ಲಿ 3ಸಾವಿರ ಸರ್ವಧರ್ಮ ಶ್ರೀಗಳ ಭಾವೈಕ್ಯತಾ ಸಮಾವೇಶ..
ಅಶೋಕ ಖೇಣಿ ಅವರ 75ನೇ ಜನ್ಮ ದಿನಾಚರಣೆ ನಿಮಿತ್ತ ದೇಶದ ವಿಭಿನ್ನ ಸಂಸ್ಕೃತಿಯ ಐಕ್ಯತೆಯ ದರ್ಶನ..
ಹತ್ತು ದಿನಗಳ ಕಾಲ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐಕ್ಯತೆಯ ಜಾತ್ರೆಗೆ ಬರದ ಸಿದ್ಧತೆ..
ಬೆಳಗಾವಿ : ನಗರದಲ್ಲಿ ಬರುವ ಅಕ್ಟೋಬರ್ ಐದರಿಂದ ಅಕ್ಟೋಬರ್ ಹದಿನೈದರ ವರೆಗೆ ಹತ್ತು ದಿನಗಳ ಕಾಲ ನಡೆಯುವ “ಲೋಕ ಕಲ್ಯಾಣಕ್ಕಾಗಿ ಸರ್ವಧರ್ಮ ಗುರುಗಳ ಭಾವೈಕ್ಯತೆಯ ಸಮಾವೇಶ” ದಲ್ಲಿ ದೇಶದ ವಿವಿಧ ಭಾಗಗಳ ಸುಮಾರು ಮೂರು ಸಾವಿರ ಮಠಾಧೀಶರು ಭಾಗಿಯಾಗಲಿದ್ದಾರೆಂದು ಅಶೋಕ ಖೇಣಿ ಯೂತ್ ಮುಮೆಂಟ್ ರಾಜ್ಯ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ..

ರವಿವಾರ ಬೆಳಗಾವಿಯ ಇನ್ಸ್ಟಿಟ್ಯೂಟ್ ಆಫ್ ಎಂಜಿಿಯರಿಂಗ್ ಸಭಾಂಗಣದಲ್ಲಿ ಆಯೋಜನೆ ಮಾಡಲಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 75ನೇ ಜನ್ಮ ದಿನ ಕೇವಲ ನೆಪ ಮಾತ್ರ, ಇಲ್ಲಿ ಭಾರತದ ಭವ್ಯ ಸಂಸ್ಕೃತಿ, ವೈವಿಧ್ಯ ಆಚರಣೆ, ಪರಂಪರೆ, ನಂಬಿಕೆ, ಮೌಲ್ಯಗಳ ಏಕತೆಯನ್ನು ಗಟ್ಟಿಗೊಳಿಸುವ ಹಾಗೂ ಜಗತ್ತಿಗೆ ಭಾರತದ ಧಾರ್ಮಿಕ ಸಾಂಸ್ಕೃತಿಕ ವೈಶಿಷ್ಟ್ಯತೆ ಹಾಗೂ ಏಕತೆಯನ್ನು ಸ್ಪಷ್ಟಪಡಿಸುವ ಸಕಾರಾತ್ಮಕ ಆಸೆಯನ್ನಿಟ್ಟುಕೊಂಡು ಈ ಮಹಾ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಮಾಡುತ್ತಿದ್ದೇವೆ..

ಸುಮಾರು ಹದಿನೈದು ವರ್ಷಗಳಿಂದ ನಾವು ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಇದು ಅತ್ಯಂತ ವಿಶೇಷ ಕಾರ್ಯಕ್ರಮವಾಗಿ ಮೂಡಿಬರುವ ನಂಬಿಕೆ ಇದ್ದು, ನಾಗನೂರು ಮಠದ ಸ್ವಾಮೀಜಿಗಳು, ಸಿದ್ದರಾಮೇಶ್ವರ ಶ್ರೀಗಳು, ಅಲ್ಲಮಪ್ರಭು ಶ್ರೀಗಳು, ಕೂಡಲ ಸಂಗಮ ಬಸವ ಮೃತ್ಯುಂಜಯ ಸ್ವಾಮೀಜಿಗಳು, ನೀಡಸೋಸಿ ಶ್ರೀಗಳು, ಕಾರಂಜಿಮಠದ ಶ್ರೀಗಳು, ಅಥಣಿಯ ಗಚ್ಚಿನ ಮಠದ ಸ್ವಾಮಿಜಿಗಳು ಹಾಗೂ ಕೆಎಲ್ಇ ಮುಖ್ಯಸ್ಥರಾದ ಹಾಗೂ ಈ ಸಭೆಯ ಮಾರ್ಗದರ್ಶಕರಾದ ಮಹಾಂತೇಶ ಕವಟಗಿಮಠ ಈ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದು, ಇದು ಮೊದಲ ಸಭೆ ಇನ್ನು ಸಭೆಗಳು ಆಗುತ್ತವೆ..
ನಾವು ಈಗಾಗಲೇ ದೇಶದ ಮೂರು ಸಾವಿರ ಸ್ವಾಮೀಜಿಗಳಿಗೆ ಆಮಂತ್ರಣ ನೀಡಿದ್ದು, ಅದರಲ್ಲಿ ಕನಿಷ್ಠ 2500 ಸ್ವಾಮೀಜಿಗಳು ಅಕ್ಟೋಬರ್ 15ರ ಈ ಸರ್ವಧರ್ಮ ಸಮ್ಮೇಳನದಲ್ಲಿ ಉಪಸ್ಥಿತರಿರುವರು ಉಪಸ್ಥಿತರಿರುವರು, ಈ ಸಮ್ಮೇಳನ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಬೆಳಗಾವಿ ಜಿಲ್ಲಾ ರಾಜಕಾರಣಿಗಳೂ ಕೂಡಾ ಭಾಗಿಯಾಗುವರು ವೇದಿಕೆ ಕಾರ್ಯಕ್ರಮ ಮುಗಿದ ನಂತರ ವಿವಿಧ ಕ್ಷೇತ್ರದ ಗಣ್ಯರು ಖೇಣಿಯವರ ಹಿತೈಷಿಗಳು ಬಂದು ಶುಭಕೋರುವರು ಎಂದರು..

ಕರ್ನಾಟಕದ ಬಹುತೇಕ ಸ್ವಾಮೀಜಿಗಳು, ಮಂತ್ರಾಲಯದ ಶ್ರೀಗಳು, ಅಮೃತಸರದ ಶಿಖರ್ ಧರ್ಮಗುರು, ಈಶ್ವರಿ ವಿದ್ಯಾಲಯದ ಮೌಂಟ್ ಅಬುವಿನ ದಾದಿಜಿ, ರವಿಶಂಕರ ಗುರೂಜಿ, ಕೇರಳದ ಅಮೃತಾನಂದಮಯಿ, ಬಾಬಾ ರಾಮದೇವ ಅವರು ಎರಡು ದಿನ ಇರುವರು, ಹತ್ತು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದರು..

ಅಶೋಕ್ ಖೇಣಿಯವರ ಹಾಗೂ ಈ ಸಮ್ಮೇಳನದ ಉದ್ದೇಶವೆಂದರೆ ಭಾರತ ದೇಶದ ಎಲ್ಲ ಧರ್ಮದ ಗುರುಗಳು ಒಂದೇ ವೇದಿಕೆಯಲ್ಲಿ ಸೇರಿ, ತಮ್ಮ ಪ್ರವಚನದ ಮೂಲಕ ಜನತೆಗೆ ಸಂದೇಶ ನೀಡಿದಾಗ, ಭಾರತದ ಕೋಟ್ಯಂತರ ಭಕ್ತರಲ್ಲಿ ನಾವೆಲ್ಲ ಒಂದು ಎಂಬ ಭಾವನೆಯಿಂದ, ಸಹೋದರರಂತೆ ಬದುಕಬೇಕು ಎಂಬ ಐಕ್ಯತೆ ಮೂಡಿ, ಅದು ದೇಶ ವಿದ್ದೇಶಕ್ಕೆ ತಲುಪಿ, ಭಾರತೀಯರೆಲ್ಲ ಧರ್ಮಗುರುಗಳ ಮಾರ್ಗದಲ್ಲಿ ಅನ್ಯೋನ್ಯತೆಯಿಂದ ವಿವಿಧತೆಯಲ್ಲಿ ಏಕತೆಯೊಂದಿಗೆ ಬಾಳುತ್ತಿರುವರೆಂಬ ಭಾವನೆ ಸಾರುವದಾಗಿದೆ..
ಅದೇ ರೀತಿ “ಅಶೋಕ ಖೇಣಿ ಯೂತ್ ಮೊಮೆಂಟ್” ರಾಜ್ಯ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ ಅವರು ಬೆಳಗಾವಿಯ ಜನತೆಯಲ್ಲಿ ಮನವಿ ಮಾಡಿಕೊಂಡು, ನಾವು ಕೇವಲ ಇಬ್ಬರು ಅಥವಾ ಮೂರು ಜನ ಇರುತ್ತೇವೆ, ಈ ಮಹಾ ಸಮ್ಮೇಳನವನ್ನು ನಡೆಸುವವರು ಯಶಸ್ವಿ ಗೊಳಿಸುವವರು ಎಲ್ಲಾ ತಾವೇ, ತಮ್ಮೆಲ್ಲರ ಸಹಕಾರ ಈ ಸಮ್ಮೇಳನಕ್ಕೆ ಇರಬೇಕು ಎಂದು ಮನವಿ ಮಾಡಿಕೊಂಡರು..

ಈ ಪೂರ್ವಭಾವಿ ಸಭೆಯ ಮಾಹಿತಿ ನೀಡುವಲ್ಲಿ, ನಾಗೇಂದ್ರ ಪ್ರಸಾದ, ಖೇಣಿ ಯೂತ್ ಮೂಮೆಂಟ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶಿವಾನಂದ ತಮ್ಮಾಚಿ, ರಾಜು ಸೋಗಲ, ಪ್ರೇಮ ಚೌಗುಲೆ, ಎಸ್ ಆರ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..