ಯಳ್ಳೂರು ಗ್ರಾಪಂ ‘ಅರಿವು ಕೇಂದ್ರ’ಕ್ಕೆ ಪುಸ್ತಕ ದೇಣಿಗೆ..

ಯಳ್ಳೂರು ಗ್ರಾಪಂ ‘ಅರಿವು ಕೇಂದ್ರ’ಕ್ಕೆ ಪುಸ್ತಕ ದೇಣಿಗೆ..

ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮ..

ವ್ಯಕ್ತಿಯ ನಡುವಳಿಕೆಯ ಪ್ರಭುದ್ಧಯತೆಗೆ ಉತ್ತಮ ಪುಸ್ತಕ ಸಹಾಯಕ..

ಅಭಿಜಿತ, ಯೂನಿಯನ ಬ್ಯಾಂಕ್ ಸ್ಥಳೀಯ ವ್ಯವಸ್ಥಾಪಕ..

ಬೆಳಗಾವಿ : ತಾಲ್ಲೂಕಿನ ಯಳ್ಳೂರು ಗ್ರಾಮ ಪಂಚಾಯತಿಯ ʼಅರಿವು ಕೇಂದ್ರʼಕ್ಕೆ ಯೂನಿಯನ್ ಬ್ಯಾಂಕ್ ಯಳ್ಳೂರು ಶಾಖೆ ವತಿಯಿಂದ ಪುಸ್ತಕ ದೇಣಿಗೆ ನೀಡಲಾಯಿತು.

ಯೂನಿಯನ್ ಬ್ಯಾಂಕ್ ಸ್ಥಳೀಯ ವ್ಯವಸ್ಥಾಪಕ ಅಭಿಜಿತ್ ಅವರ ನೇತೃತ್ವದಲ್ಲಿ ಸಮಾಜ ಸುಧಾರಕರ ಜೀವನ ಚರಿತ್ರೆ, ಮಕ್ಕಳಿಗೆ ನೆರವಾಗುವ ಪಠ್ಯಪೂರಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಸುಮಾರು 70 ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.

ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕ ಅಭಿಜೀತ ಮಾತನಾಡಿ ಪುಸ್ತಕಗಳು ಮನುಷ್ಯನ ಓದಿನ ದಾಹ ತೀರಿಸುತ್ತವೆ. ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮನಾದದ್ದು. ಒಳ್ಳೆಯ ಪುಸ್ತಕ ಓದುವುದರಿಂದ ವ್ಯಕ್ತಿಯ ನಡವಳಿಕೆಯಲ್ಲಿ ಪ್ರಬುದ್ದತೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಮಾಸೇಕರ, ಉಪಾಧ್ಯಕ್ಷರು ಪ್ರಮೋದ ಪಾಟೀಲ, ಮಾಜಿ ಅಧ್ಯಕ್ಷ ಸತೀಶ ಪಾಟೀಲ ಸದಸ್ಯ ಶಿವಾಜಿ ನಾಂದೋರಕರ, ಹಿರಿಯ ದಲಿತ ಮುಖಂಡ ಲಕ್ಷ್ಮಣ ಛತ್ರನ್ನವರ, ಪಿಡಿಒ ಪೂನಮ ಗಾಡಗೆ, ಗ್ರಂಥಪಾಲಕ ಕಲ್ಮೇಶ ಕೋಕಣೆ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಸಂತೋಷ ಮೇತ್ರಿ..