ಶ್ರೀಕೃಷ್ಣ ಜನ್ಮಾಷ್ಠಮಿ-2024..
ಕೃಷ್ಣನ ಪ್ರತಿಯೊಂದು ಕಥೆಯಲ್ಲಿ ಬದುಕಿನ ರೂಪಗಳು ಅಡಗಿವೆ..
ಮಹಾಪೌರೆ ಸವಿತಾ ಕಾಂಬಳೆ..
ಬೆಳಗಾವಿ:ಆ.(16): ಕೃಷ್ಣನ ಹುಟ್ಟಿನಿಂದ ಅಂತ್ಯದವರೆಗೆ ಅನೇಕ ರೋಚಕ ಕತೆಗಳಿದ್ದು, ಒಂದೊಂದು ಕಥೆಯಲ್ಲೂ ಬದುಕಿನ ವಿವಿಧ ರೂಪಗಳನ್ನು ತೋರುತ್ತಾನೆ ಎಂದು ಮಹಾಪೌರರಾದ ಸವಿತಾ ಕಾಂಬಳೆ ನುಡಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನಯ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕೃಷ್ಣನ ಕಥೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ, ಪ್ರಪಂಚದ ಮೊದಲ ಪದಗಳ ಯುದ್ಧವನ್ನು ಮೊದಲು ಮಾಡಿದವನು ಶ್ರೀಕೃಷ್ಣ, ಅರ್ಜುನನ ಮೂಲಕ ಇಡೀ ಜಗತ್ತಿಗೆ ನೀಡಿರುವ ಸಂದೇಶವೆ ಭಗವದ್ಗೀತೆ ಸರ್ವ ಕಾಲಕ್ಕೂ ಪ್ರಸ್ತುತ ಇದೆ ಎಂದು ಹೇಳಿದರು.
ಕುರುಕ್ಷೇತ್ರ ಯುದ್ಧವೆಂದು ಕರೆಯಲಾಗುವ ಮಹಾಭಾರತ ಯುದ್ಧವು ಹಿಂದೂ ಕಾವ್ಯವಾದ ಮಹಾಭಾರತದಲ್ಲಿ ವಿವರಿಸಲ್ಪಟ್ಟ ಯುದ್ಧವಾಗಿದೆ ಎಂದು ಮಹಾಪೌರರಾದ ಸವಿತಾ ಕಾಂಬಳೆ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರಿಯ ಭಾಷಾ ಅಧ್ಯಯನ ಸಂಸ್ಥೆ ಸಹಾಯಕ ಪ್ರಧ್ಯಾಪಕರು ಡಾ. ಗಜಾನನ ನಾಯ್ಕ ಅವರು ಮಾತನಾಡಿ ಕೃಷ್ಣ ಕೇವಲ ಮಹಾನ್ ಪರಾಕ್ರಮಿ ಮಾತ್ರನಲ್ಲ. ಸಕಲ ಕಲೆಯನ್ನು ತನ್ನೊಂದಿಗೆ ಕರಗತ ಮಾಡಿಕೊಂಡವನು. ಮಥುರಾದಲ್ಲಿ ವಿಷ್ಣು ದೇವರು ಜನಿಸಿದ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ, ಶ್ರೀ ಕೃಷ್ಣ ತನ್ನ ಇಡೀ ಜೀವನದಲ್ಲಿ ಜನರಿಗೆ ಕೇವಲ ಜ್ಞಾನವನ್ನು ನೀಡಿದ್ದಾನೆ, ಅದು ಕಾಲಕ್ಷೇಪಗಳ ಮೂಲಕವಾಗಲಿ ಅಥವಾ ಗೀತಾ ಮೂಲಕವಾಗಲಿ ಇಂದಿನ ಜನರು ತಿಳಿದುಕೊಳ್ಳಬಹುದು ಎಂದರು.

ಕೃಷ್ಣನ ಬಗ್ಗೆ ಭಗವತ ಪುರಾಣ, ವಿಷ್ಣು ಪುರಾಣ, ಮಹಾಭಾರತ ಹಾಗೂ ಭಗವದ್ಗೀತೆ, ಬೌದ್ಧ ಧರ್ಮ, ಜೈನ ಧರ್ಮದಲ್ಲಿ ಉಲ್ಲೇಖವಿದೆ, ಶ್ರೀಕೃಷ್ಣನ ನೆಲೆಯನ್ನು ಗೋಕುಲ ವೃಂದಾವನ, ದ್ವಾರಕಾ, ಮಥುರ ಎಂದು ಬರೆಯಲಾಗಿದೆ. ಮಹಾಭಾರತಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ೧೮ ದಿನದಗಳ ಮಹಾಯುದ್ದವನ್ನು ನಾವು ಮಹಾಭಾರತ ಭಗವದ್ಗಿತೆಯ ಮುಖಾಂತರ ತಿಳಿದುಕೊಳ್ಳಬಹುದಾಗಿದೆ ಎಂದರು.
ನಮ್ಮ ದೇಶದ ಆಚಾರ-ವಿಚಾರ, ನಡೆ-ನುಡಿ, ಧಾರ್ಮಿಕ ಮನೋಭಾವನೆ ಬೇರೆ ದೇಶದ ಜನರ ಗಮನವನ್ನು ಸೆಳೆಯುತ್ತಿದೆ. ಮಕ್ಕಳಿಗೆ ಯಾವುದೇ ದೇಶದ ಸಂಸ್ಕೃತಿ ಹೇಳದೆ, ನಮ್ಮ ದೇಶದಲ್ಲಿ ನಡೆದಿರುವ ಮಹಾಭಾರರತ, ಭಗವತಗೀತೆ, ರಾಮಾಯಣ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದುರ ಜೊತೆಗೆ ನಮ್ಮ ದೇಶದ ಕೀರ್ತಿಯನ್ನು ಬೆಳಗುವ ಮೌಲ್ಯವನ್ನು ಯುವಕರಲ್ಲಿ ಮೂಡಿಸಬೇಕು.

ಜೀವನದಲ್ಲಿ ಕೋಪ ದ್ವೇಷದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ ಪ್ರೀತಿ ಪ್ರೇಮದಿಂದಲೇ ಎಲ್ಲವನ್ನು ಜಯಿಸಬಹುದು. ಒಬ್ಬ ವ್ಯಕ್ತಿ ಶತ್ರುವೂ ಆಗಬಲ್ಲ ಮಿತ್ರನೂ ಆಗಬಲ್ಲ. ಲೋಕಕಲ್ಯಾಣಕ್ಕಾಗಿ ಕೃಷ್ಣನು ನೀಡಿದ ಸಂದೇಶಗಳು ಮಹತ್ವವಾದದ್ದು, ಮಾತ್ರವಲ್ಲ ಕೃಷ್ಣನ ಜೀವನವೇ ಸಂದೇಶವಾಗಿ ನಮ್ಮ ಬಾಳನ್ನು ಬೆಳಗಬಹುದು. ಶ್ರೇಷ್ಠವಾದ ಜೀವನದ ಪಾಠವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಸದಾ ನಮ್ಮ ಬದುಕಿನಲ್ಲಿ ಬೆಳಕು ಚೆಲ್ಲುವುದು ಎಂದು ಡಾ. ಗಜಾನನ ನಾಯ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರು ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಹಣಬರ ಯಾದವ ಸಂಘ (ರಿ) ಅಧ್ಯಕ್ಷರಾದ ಎಸ್.ಎ.ಮುಂಡೆ. ಜೆ.ಎನ್.ಎಮ್.ಸಿ ಪ್ರಾದ್ಯಾಪಕರು ಡಾ. ಅರವಿಂದ ತೇನಗಿ, ನಗರ ಸೇವಕ ಬಸವರಾಜ್ ಮೊದಗೆಕರ. ಶೀತಲ ಗುಂಡೆ, ಜಯಗೌಡ ಪಾಟೀಲ, ರವಿ ಶಿವಲಿಂಗ ಪಾಟಿಲ. ಎನ್. ಎನ್ ಪಾಟೀಲ, ಗಣ್ಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರವಣಿಗೆ: ಇದಕ್ಕೂ ಮುಂಚೆ ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಆಕರ್ಷಕ ಮೆರವಣಿಗೆಗೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಚಾಲನೆ ನೀಡಿದರು.
ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಬಂದು ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ವೀರಗಾಸ, ಡೊಳ್ಳು ಕುಣಿತ, ಕುಂಭಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಧಾನ ಪರಿಷತ್ತು ಶಾಸಕರಾದ ಚನ್ನರಾಜ ಹಟ್ಟಿಹೊಳಿ, ಮೃನಾಳ ಹೆಬ್ಬಾಳಕರ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..