ಕಾಂಗ್ರೆಸ್ಸಿನ ಎಲ್ಲಾ ಶಾಸಕ, ಸಚಿವರು ಸಿಎಂ ಅವರ ಬೆಂಬಲಕ್ಕೆ ಇದ್ದೇವೆ…

ಕಾಂಗ್ರೆಸ್ಸಿನ ಎಲ್ಲಾ ಶಾಸಕ, ಸಚಿವರು ಸಿಎಂ ಅವರ ಬೆಂಬಲಕ್ಕೆ ಇದ್ದೇವೆ..

ಪಾಲಿಕೆಯ ಆರ್ಥಿಕ ನಷ್ಟಕ್ಕೆ ಅಧಿಕಾರಿಗಳ ಮೇಲೆ ಕ್ರಮ..

ಬೆಳಗಾವಿ : ನಮ್ಮ ಪಕ್ಷದ ಎಲ್ಲಾ ಶಾಸಕ, ಸಚಿವರು ಹಾಗೂ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರ ಜೊತೆ ಇದ್ದು, ಅವರ ಬೆಂಬಲವಾಗಿ ನಿಲ್ಲುತ್ತೇವೆ, ಅವರ ಮೇಲೆ ಯಾವ ಪರಿಣಾಮವೂ ಆಗುವದಿಲ್ಲ ಎಂದಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ರಾಜು ಸೇಠ ಅವರು, ಹಿಂದೆ ರಾಜ್ಯಪಾಲರು ಹೊರಡಿಸಿದ ಸಿಎಂ ವಿರುದ್ಧದ “ಕಾನೂನು ಕ್ರಮದ” ನಿರ್ಣಯದ ವಿರುದ್ಧ ಪ್ರತಿಭಟನೆಯಾಗಿ ಭಾಗಿಯಾಗಲು ಕರೆ ಬಂದಿದ್ದು, ಅನಾರೋಗ್ಯದ ಕಾರಣ ನಾನು ಭಾಗಿಯಾಗಲು ಆಗಲಿಲ್ಲ ಎಂದಿದ್ದಾರೆ..

ನಗರದಲ್ಲಿ ಸರಗಳ್ಳತನ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪಾಲಿಕೆಯ ಆರ್ಥಿಕ
ಬಿಕ್ಕಟ್ಟಿಗೆ ಕಾನೂನಿನಲ್ಲಿ ಅವಕಾಶಗಳನ್ನು ನೋಡಿಕೊಂಡು ಮುಂದುವರೆಯುತ್ತವೆ, ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಖಂಡಿತ ಕ್ರಮ ಆಗುತ್ತದೆ ಎಂದರು.

ಶಾಸಕ, ಸಚಿವರು ಯಾರೇ ಇರಲಿ ಕಾನೂನಿನ ಪ್ರಕಾರ ಕೆಲಸ ಮಾಡಬೇಕು, ಕಾನೂನು ಮೀರಿ ಮಾಡಬಾರದು, ಮಾಡಿದರೆ ಇಲ್ಲಿ ಅಧಿಕಾರಿಗಳೇ ಹೊಣೆಯಾಗುತ್ತರೆ ಎಂದ ಅವರು,
ಸರ್ಕಾರದಿಂದ ಬಿಡುಗಡೆ ಆಗುವ ನಗರೋತ್ತಾನದ ನಿಧಿ ಆದಷ್ಟು ಬೇಗ ಬರುವದು ಎಂಬ ಭರವಸೆ ನೀಡಿದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..