ಬೆಳಗಾವಿಯಲ್ಲಿ “ಬೀಯಿಂಗ್ ಹ್ಯೂಮನ್” ಬಟ್ಟೆ ಅಂಗಡಿ ಉದ್ಘಾಟಿಸಿದ ನಟ ಸೊಹೈಲ್ ಖಾನ್..
ಉತ್ತಮ ಗುಣಮಟ್ಟದ ಬ್ರಾಂಡೆಡ್ ಬಟ್ಟೆಗಳು ಇಂದಿನಿಂದ ಬೆಳಗಾವಿಗರಿಗೆ ಲಭ್ಯ..
“ಬೀಯಿಂಗ್ ಹ್ಯೂಮನ್” ಬಟ್ಟೆ ಖರೀದಿಸಿದರೆ ತಾವು ಚಾರಿಟಿಗೆ ಸಹಾಯ ಮಾಡಿದಂತೆ..
ಸೊಹೈಲ್ ಖಾನ್, ನಟ ನಿರ್ಮಾಪಕ..
ಬೆಳಗಾವಿ : ಬೆಳಗಾವಿಯಲ್ಲಿ “ಬೀಯಿಂಗ್ ಹ್ಯೂಮನ್” ಬಟ್ಟೆ ಅಂಗಡಿಯನ್ನು ಉದ್ಘಾಟನೆ ಮಾಡಿದ್ದಕ್ಕೆ ತುಂಬಾ ಸಂತಸವೇನಿಸುತ್ತದೆ, ಈ “ಬೀಯಿಂಗ್ ಹ್ಯೂಮನ್” ಬಟ್ಟೆ ತಾವು ಖರಿದಿಸಿದ್ದೇ ಆದರೆ ತಾವು ಕೂಡ ಪರೋಕ್ಷವಾಗಿ ಚಾರಿಟಿಗೆ ಸಹಾಯ ಮಾಡಿದಂತೆ ಎಂದು ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಸೊಹೈಲ್ ಖಾನ್ ಹೇಳಿದ್ದಾರೆ..

ರವಿವಾರ ದಿನಾಂಕ 01/09/2024ರ ಸಂಜೆ, ನಗರದ ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಹೊಸದಾಗಿ ಪ್ರಾರಂಭವಾದ “ಬೀಯಿಂಗ್ ಹ್ಯೂಮನ್” ಬಟ್ಟೆ ಅಂಗಡಿಯನ್ನು ಉದ್ಘಾಟಿಸಿ, ಶುಭಹಾರೈಸಿ ಈ ಮೇಲಿನಂತೆ ತಮ್ಮ ಅನಿಸಿಕೆಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ..
ಬೆಳಗಾವಿಯ ಜನತೆ ತುಂಬಾ ಫ್ಯಾಷನ್ ಇರೋವಂತವರು, ಅವರಿಗೆ ಹೊಸ ಬಗೆಯ ಬ್ರಾಂಡ್ ಬಟ್ಟೆಗಳು ಖಂಡಿತ ಇಷ್ಟ ಆಗುತ್ತವೆ, “ಬೀಯಿಂಗ್ ಹ್ಯೂಮನ್” ಬಟ್ಟೆಗಳ ಗುಣಮಟ್ಟದ ಕಾರಣಕ್ಕೆ ಅವು ಬೆಳಗಾವಿ ಜನತೆಗೆ ಇಷ್ಟ ಆಗುತ್ತವೆ ಎಂಬ ನಂಬಿಕೆ ಇದೆ ಎಂದರು..

ಕರ್ನಾಟಕ ರಾಜ್ಯಾದ್ಯಂತ ಸುಮಾರು 250 ನಗರಗಳಲ್ಲಿ “ಬೀಯಿಂಗ್ ಹ್ಯೂಮನ್” ಬಟ್ಟೆ ಅಂಗಡಿಗಳನ್ನು ತೆರೆಯುವ ಯೋಜನೆ ಇದೆ ಎಂದ ಅವರು, ನಮ್ಮ ಸಹೋದರ ಸಲ್ಮಾನ್ ಖಾನ್ ಕೂಡಾ ಬಂದು ಭಾಗಿಯಾಗುವರು ಎಂದರು..
ಇನ್ನು ಮಾಧ್ಯಮ ವರ್ಗದ ಜನರಿಗೆ ಎಟಕುವ ದರದಲ್ಲಿ ಬಟ್ಟೆಗಳನ್ನು ಪೂರೈಕೆ ಮಾಡುವ ಬಗ್ಗೆ ಮಾತನಾಡಿದ ಅವರು, ಈಗ ನೋಡೋಣ, ಒಂದು ವೇಳೆ ಜನರಿಗೆ ನಾವು ಇಟ್ಟಿರುವ ದರ ಹೆಚ್ಚಿಗೆ ಅನಿಸಿದರೆ ಮುಂದೆ ಕಡಿಮೆ ಮಾಡುತ್ತೇವೆ, ಆದರೆ ನಾವು ಏನೇ ಪ್ರಾಡಕ್ಟ್ಟ ಮಾಡಿದರೂ ಅದು ಎಲ್ಲಾ ವರ್ಗದ ಜನರ ಸಲುವಾಗಿಯೇ ಇರುತ್ತದೆ ಎಂದರು..

ಬೆಳಗಾವಿಯ ಜನತೆ ಆದಷ್ಟು “ಬೀಯಿಂಗ್ ಹ್ಯೂಮನ್” ಕೊಳ್ಳಿ, ಈ ಬಟ್ಟೆಗಳ ಗುಣಮಟ್ಟ ನೋಡಿ, ನಾವು ಪ್ರೀತಿಯಿಂದ, ಅಲ್ಲಿಂದ ನಿಮಗಾಗಿ ಈ ಬ್ರ್ಯಾಂಡನ್ನು ತಂದಿರುತ್ತೇವೆ, ತಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು..

ಈ ವೇಳೆ ಶಾಸಕ ರಾಜು ಸೇಠ, ಕೆಎಲ್ಇ ಮುಖ್ಯಸ್ಥ ಪ್ರಭಾಕರ ಕೋರೆ, ಉದ್ಯಮಿ ನುರಾನಿ, ಬೆಳಗಾವಿಯ ಬೀಯಿಂಗ್ ಹ್ಯೂಮನ್ ಅಂಗಡಿಯ ಮಾಲೀಕರು, ಸೊಹೈಲ್ ಖಾನ್ ಅಭಿಮಾನಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..