ಚಿತ್ರೀಕರಣ ನೋಡಲು ಬಂದ 4ಸಾವಿರ ಜನರಿಗೆ ಚಿಕನ್ ಊಟದ ವ್ಯವಸ್ಥೆ ಮಾಡಿದ ಅಣ್ಣಾವ್ರು…

ಚಿತ್ರೀಕರಣ ನೋಡಲು ಬಂದ 4ಸಾವಿರ ಜನರಿಗೆ ಚಿಕನ್ ಊಟದ ವ್ಯವಸ್ಥೆ ಮಾಡಿದ ಅಣ್ಣಾವ್ರು..

ಶೂಟಿಂಗ್ ನೋಡಲು ಬಂದ ಗ್ರಾಮದ ಜನರಿಗೆ ಪ್ರತಿದಿನ ಮೃಷ್ಟಾನ್ನ ಭೋಜನ.

ಇದು ದೊಡ್ಮನೆಯ ದೊಡ್ಡತನ..

ಬೆಂಗಳೂರು : ಸಿನಿಮಾಗಳ ಚಿತ್ರೀಕರಣಗಳಲ್ಲಿ ಭಾಗಿಯಾದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ತೃಪ್ತಿದಾಯಕವಾದ ಊಟದ ವ್ಯವಸ್ಥೆ ಮಾಡಲು ಕೆಲ ಕೊರತೆಗಳಾಗುವ ಪರಿಸ್ಥಿತಿಗಳಲ್ಲಿ, ಚಿತ್ರದ ಚಿತ್ರೀಕರಣ ನೋಡಲು ಬಂದ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡುವದು ದೊಡ್ಡಗುಣ, ಅಂತಹ ಹಿರಿಮೆಯ ಗುಣದಿಂದಲೇ “ಅಭಿಮಾನಿ ದೇವರುಗಳಿಗೆ” ಬಾಡೂಟ ಬಡಿಸಿದವರು ಕನ್ನಡದ ವರನಟ ಡಾ ರಾಜಕುಮಾರ ಅವರು..

ಹೌದು, ಮೊನ್ನೆ ನಟ ಶಿವರಾಜಕುಮಾರ್ ಅವರು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 1996ರಲ್ಲಿ “ಜನುಮದ ಜೋಡಿ” ಚಿತ್ರದ “ಇವನ್ಯಾರ ಮಗನೋ” ಎಂಬ ಹಾಡಿನ ಚಿತ್ರೀಕರಣ ಮಾಡುತ್ತಿದ್ದೇವು, ಆ ಹಾಡನ್ನು ನಿಜವಾದ ಜಾತ್ರೆಯಲ್ಲಿಯೇ ಶೂಟ್ ಮಾಡಿದ್ದು, ನಮ್ಮ ಹಾಡಿನ ಚಿತ್ರೀಕರಣಕ್ಕೆ ಬೇಕಾದ ಕಲಾವಿದರು, ಹಾಗೂ 60ಕ್ಕೂ ಹೆಚ್ಚು ಸಹ ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು..

ಆದರೆ ಆ ಜಾತ್ರೆಯ ವಾತಾವರದಲ್ಲಿ ಜಾತ್ರೆಗೆ ಬಂದ ಸುತ್ತಮುತ್ತಲಿನ ಗ್ರಾಮದ ಜನರು, ಜಾತ್ರೆ ಬಿಟ್ಟು ಚಿತ್ರೀಕರಣ ನೋಡಲು ಬರುತ್ತಿದ್ದರು, ಆಗ ನಮ್ಮ ಚಿತ್ರದ ನಿರ್ದೇಶಕರು ಟಿ ಎಸ್ ನಾಗಾಭರಣ ಅವರು, ಆ ಜಾತ್ರೆ ನೋಡಲು ಬಂದಂತ ಜನರನ್ನೂ ಕೂಡಾ ಸಹ ಕಲಾವಿದರಂತೆ ಬಳಸಿಕೊಂಡು ಚಿತ್ರೀಕರಣ ಮಾಡುತ್ತಿದ್ದರು, ಹಾಡಿನ ಚಿತ್ರೀಕರಣ ತುಂಬಾ ಸೊಗಸಾಗಿ, ನೈಜವಾಗಿ ನಡೆಯುತ್ತಿತ್ತು..

ಹಾಡಿನ ಚಿತ್ರೀಕರಣದ ಎರಡನೇ ದಿನ ಅಪ್ಪಾಜಿ (ಡಾ ರಾಜ್) ಅವರು, ಚಿತ್ರೀಕರಣದ ಸ್ಥಳಕ್ಕೆ ಭೇಟಿನೀಡಿ, ಶೂಟಿಂಗ್ ವೀಕ್ಷಣೆ ಮಾಡಿ, ತುಂಬಾ ಸಂತಸಗೊಂಡಿದ್ದರು, ಅದೇ ಸಮಯದಲ್ಲಿ ಒಂದು ಮಾತು ಕೇಳಿದರು, ಶೂಟಿಂಗ್ ನೋಡಲು ಬಂದಂತ ಈ ಜನರಿಗೆ ಊಟ ತಿಂಡಿ ಹೇಗೆ ಎಂದು ನನ್ನನ್ನು ವಿಚಾರಿಸಿದಾಗ, ನಾನು ಅವರೇ ಮಾಡಿಕೊಂಡು ಬಂದಿರುತ್ತಾರೆ ಎಂದು ಹೇಳಿದೆ ಎಂದರು..

ಆಗ ಡಾ ರಾಜ್ ಅವರು, ದಿನಾಲೂ ಶೂಟಿಂಗ್ ನೋಡಲು ಬರುವ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಜನರಿಗೂ ಊಟದ ವ್ಯವಸ್ಥೆ ಆಗಬೇಕು, ಮಾಂಸಾಹಾರ ಸಹಿತ ಊಟದ ವ್ಯವಸ್ಥೆ ಮಾಡಬೇಕು ಎಂದರು, ನಮ್ಮದೇ ನಿರ್ಮಾಣ ಸಂಸ್ಥೆಯ ಚಿತ್ರವಾಗಿರುವದರಿಂದ, ಆಗಿನಿಂದಲೇ ಶೂಟಿಂಗ್ ಅಲ್ಲಿ ಭಾಗಿಯಾದ, ನೋಡಲು ಬಂದಂತ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಸುಮಾರು 4ಸಾವಿರ ಜನರು ಶೂಟಿಂಗನಲ್ಲಿ ಖುಷಿಯಿಂದ ಭಾಗಿಯಾಗಿ, ಸವಿಯೂಟ ಸವಿಯುತ್ತಿದ್ದರು ಎಂದು ಶಿವಣ್ಣ ನೆನಪು ಮಾಡಿಕೊಂಡರು..

ಅಣ್ಣಾವ್ರ ಮನೆತನದ ಇಂತಹ ಉದಾರತೆಯ ನಡೆಯಿಂದಲೇ “ಜನುಮದ ಜೋಡಿ” ಚಿತ್ರ 1996ರ ನವೆಂಬರ್ ತಿಂಗಳಲ್ಲಿ ತೆರೆಕಂಡು, ರಾಜ್ಯಾದ್ಯಂತ 100 ಚಿತ್ರಮಂದಿರಗಳಲ್ಲಿ, 100 ನೂರು ದಿನದ ಯಶಸ್ವಿ ಪ್ರದರ್ಶನ ಕಂಡಿದ್ದು, ಕೆಲವು ಕೇಂದ್ರಗಳಲ್ಲಿ ಸಿಲ್ವರ್ ಜ್ಯುಬಿಲಿ, ಗೋಲ್ಡನ್ ಜುಬಿಲಿ ಕಂಡ, ಕ್ಲಾಸಿಕಲ್ ಚಿತ್ರವಾಗಿ, ಇಂದಿನ ಜನಮನದಲ್ಲಿ ಹಚ್ಚ ಹಸಿರಾಗಿದೆ ಎನ್ನಬಹುದು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..