ಮುಖ್ಯಮಂತ್ರಿ ನಾನೇ..
ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ..
ಊಹಾಪೋಹಗಳಿಗೆ ತೆರೆ ಎಳೆದ ಸಿದ್ದರಾಮಯ್ಯ..
ಬೆಂಗಳೂರು : ರಾಜ್ಯದ ಸಿಎಂ ಬದಲಾವಣೆಯ ಗಾಳಿ ಸುದ್ದಿ ರಾಜ್ಯಾದ್ಯಂತ ಹರಿದಾಡುತ್ತಿದ್ದು, ನಾನು ಸಿಎಂ ಆಕಾಂಕ್ಷಿ, ನಾನು ಆಕಾಂಕ್ಷಿ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದ ನಾಯಕರು ಹಾಗೂ ಹಿಂಬಾಲಕರ ಚರ್ಚೆಗೆ ಇಂದು ಬ್ರೇಕ್ ಹಾಕಿದಂತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ..
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನೇ ಸಿಎಂ ಆಗಿ ಮುಂದುವರೆಯುವೆ, ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ, ಯಾರು ಏನೇ ಮಾತನಾಡಿದರೂ ಏನೂ ಆಗೊಲ್ಲ, ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುವೆ ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..