ಸುದ್ದಿಗೋಷ್ಠಿಯಲ್ಲಿ ಸ್ವಪಕ್ಷದ ವಿರುದ್ಧವೇ ಆರೋಪ ಮಾಡಿದ ರಮೇಶ ಕುಡಚಿ..
ಹಾಗಿದ್ದರೆ ತಾವು ಕಾಂಗ್ರೆಸ್ ಪಕ್ಷವನ್ನೇ ಬಿಟ್ಟುಬಿಡಿ ಎಂಬ ಸಲಹೆ ನೀಡಿದ ಪತ್ರಕರ್ತರು..
ಬೆಳಗಾವಿ : ಗುರುವಾರ ದಿನಾಂಕ 19/09/2024ರಂದು ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ನಗರದ ಮಾಜಿ ಶಾಸಕ ರಮೇಶ್ ಕುಡಚಿ ಅವರು ತಮ್ಮ ಸ್ವಪಕ್ಷವಾದ ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ವಿರುದ್ದ ಆರೋಪಗಳನ್ನು ಮಾಡಿದ್ದು, ವಿರೋಧ ಪಕ್ಷದವರಂತೆ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ದ ಮಾತನಾಡಿದ್ದಾರೆ..
ಬೆಳಗಾವಿ ಪಾಲಿಕೆಯು ಇಪ್ಪತ್ತು ಕೋಟಿ ದಂಡ ನೀಡುವ ವಿಷಯದ ಬಗ್ಗೆ ಮಾತನಾಡಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಮೇಶ ಕುಡಚಿ ಮಾತನಾಡಿ, ಪಾಲಿಕೆ ದಂಡ ನೀಡದೇ, ಸ್ಮಾರ್ಟ್ ಸಿಟಿ ಇದರ ಹೊಣೆ ಹೊರಬೇಕು, ಒಂದು ವೇಳೆ ದಂಡ ನೀಡಬೇಕಾದರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪರಿಷತ್ತಿನ ಒಪ್ಪಿಗೆ ಪಡೆದು ನೀಡಬೇಕು, ಇಲ್ಲಿ ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಸಚಿವರು ನಿರ್ಣಯ ತೆಗೆದುಕೊಳ್ಳಲು ಬರುವದಿಲ್ಲ ಎಂದರು.

ಭೂ ಅತಿಕ್ರಮಣದ ದಂಡದ ಹಣ ಯಾರು ತುಂಬಬೇಕು, ಯಾರ ಸಮ್ಮತಿಯಿಂದ ತುಂಬಬೇಕು, ಯಾರ ತಪ್ಪು, ಯಾರದ್ದು ಸರಿ ಎಂಬುದನ್ನ ಮಾತಾಡಿದ ರಮೇಶ್ ಕುಡಚಿ, ನಂತರ ನಿಜ ವಿಷಯಕ್ಕೆ ಬಂದು, ನಾನು ಬೆಳಗಾವಿ ಕಾಂಗ್ರೆಸ್ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡಬೇಕಿದೆ ಎಂದು ಪ್ರಾರಂಭಿಸಿದರು..
ಈಗ ಪಾಲಿಕೆಯ ನಾಮನಿರ್ದೇಶಿತ ಸದಸ್ಯರ ಬಗ್ಗೆ ವಿರೋಧ ವ್ಯಕ್ತಪಡಿಸಿ, ಅವರು ಪಕ್ಷದ ವಿರೋಧ ಚಟುವಟಿಕೆ ಮಾಡಿದವರು ಅಂತವರನ್ನು ಇವರು ಆಯ್ಕೆ ಮಾಡುತ್ತಾರೆ ಎಂದರೆ ಹೇಗೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು, ಚಿಕ್ಕೋಡಿಯಿಂದ ಬಂದು ಇಲ್ಲಿ ಬುಡಾ ಅಧ್ಯಕ್ಷ ಆಗುವದು ಯಾವ ನ್ಯಾಯ? ಇದರ ಬಗ್ಗೆ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದರು..
ತಮ್ಮ ರಾಜಕೀಯ ಲಾಭಕ್ಕಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ಇಂದು ಏನೇನೋ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ಅವರು, ಜಿಲ್ಲಾ ಅಧ್ಯಕ್ಷರ ಸ್ಥಾನಗಳು ಕೂಡಾ ಹಲವು ವರ್ಷಗಳಿಂದ ಬದಲಾಗಿಲ್ಲ ಎಂದರು, ಕಾಂಗ್ರೆಸ್ ಬಯ್ಲಾಗ್ ದ ಪ್ರಕಾರ ಇಂದು ಡಿಕೆ ಶಿವಕುಮಾರ್ ಅಧಿಕಾರ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ನಡೆ ಸರಿಯಿಲ್ಲ ಎಂದು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರು..
ಇದೆಲ್ಲವನ್ನೂ ಕೇಳಿಸಿಕೊಂಡು ಸುದ್ದಿಗೋಷ್ಠಿಯಲ್ಲಿ ಇದ್ದ ಒಬ್ಬ ಪತ್ರಕರ್ತರು ಒಂದು ಪಕ್ಷದ ಸದಸ್ಯರಾಗಿದ್ದು, ಆ ಪಕ್ಷದ ನಾಯಕರು ತಗೆದುಕೊಂಡು ನಿರ್ಧಾರ ಹಾಗೂ ಅವರ ನಡೆಯನ್ನೇ ತಾವು ಹೀಗೆ ವಿರೋಧ ಮಾಡುವುದಾದರೆ, ಆ ಪಕ್ಷವನ್ನು ತಾವು ಬಿಟ್ಟುಬಿಡುವುದೇ ಉತ್ತಮ ಎಂದು ಸಲಹೆ ನೀಡಿದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..