ಸಂಕಷ್ಟಿಯಂದು ಪಾಲಿಕೆಯ ಸಂಕಟ ಪರಿಹರಿಸುವ ಪ್ರಯತ್ನ..
ಪಾಲಿಕೆಗೆ ತುಸು ಸಂತಸ, ಸಂಚಾರಿಗಳಿಗೆ ಸ್ವಲ್ಪ ಸಂಕಟ..
ಬೆಳಗಾವಿ : ಸಂಕಷ್ಟ ಚತುರ್ಥಿಯ ದಿನವಾದ ಶನಿವಾರ ದಿನಾಂಕ 21/09/2024ರಂದು ಬೆಳಗಾವಿ ಮಹಾನಗರ ಪಾಲಿಕೆ ತನಗೆ ಬಂದ ಸಂಕಟದಿಂದ ಮುಕ್ತವಾಗಲು ಕಾರ್ಯ ಪ್ರವರ್ತವಾಗಿದೆ, ನ್ಯಾಯಾಲಯದ ಆದೇಶದ ಪ್ರಕಾರ, ಬೆಳಗಾವಿ ಸ್ಮಾರ್ಟ್ ಸಿಟಿ ನಿರ್ಮಾಣದ ವೇಳೆ ಜಾಗ ಕಳೆದುಕೊಂಡವರಿಗೆ ಮತ್ತೆ ಅವರ ಜಾಗ ಮರಳಿಸುವ ಮೂಲಕ ಪಾಲಿಕೆ ತನಗೆ ಬಂದ ಸಮಸ್ಯೆಯಿಂದ ಪಾರು ಆಗುವ ಪ್ರಯತ್ನದಲ್ಲಿದೆ..
ಇದೇ ಸೋಮವಾರದ ಒಳಗಡೆ ಹೈಕೋರ್ಟ್ ನಿರ್ದೇಶನದಂತೆ ಜಾಗ ಕಳೆದುಕೊಂಡವರಿಗೆ ಅವರ ಜಮೀನು ವಾಪಸ್ ಕೊಡಬೇಕು, ಇಲ್ಲವಾದರೆ 20 ಕೋಟಿ ದಂಡ ಕೊಡಬೇಕು ಎಂಬ ಸೂಚನೆ ನೀಡಿದ್ದು, ಅದರ ಪ್ರಕಾರ ಇಂದು ಸಂತ್ರಸ್ತರಿಗೆ ಜಾಗ ಬಿಟ್ಟು ಕೊಡಲಾಗಿದ್ದು ರಸ್ತೆ ಬಂದಾಗಿದೆ..

ನ್ಯಾಯಾಲಯದ ಆದೇಶದ ಪಾಲನೆ ಆಗಿದೆ, ರಸ್ತೆ ನಿರ್ಮಾಣಕ್ಕೆ ಸರ್ಕಾರದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ, ಮುಂಜಾಗ್ರತೆ ಇಲ್ಲದೇ ರಸ್ತೆ ನಿರ್ಮಾಣ ಮಾಡಿ, ಸರ್ಕಾರದ ಕೋಟ್ಯಂತರ ಹಣವನ್ನು ನಷ್ಟ ಮಾಡಿದ ಹಿಂದಿನ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂಬುದು ನಗರವಾಸಿಗಳ ಬೇಡಿಕೆಯಾಗಿದೆ..
ಕೆಲ ದಿನಗಳ ಹಿಂದೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವಾಗಿ 20 ಕೋಟಿ ಹಣ ದಂಡವಾಗಿ ನೀಡಲು ಅನುಮೋದನೆ ನೀಡಿದ್ದು, ಅದಕ್ಕೆ ರಾಜಕೀಯ ಪ್ರಭಾವಗಳು ಸೇರಿಕೊಂಡಿದ್ದವು ಎಂಬ ಅನುಮಾನಗಳಿದ್ದವು ಇಂದು ಪಾಲಿಕೆಯ ನಡೆಯೇ ಬೇರೆಯಾಗಿದೆ..

ಎಲ್ಲಾ ಊಹಾಪೋಹಗಳು ಈಗ ತಿಳಿಯಾಗಿ, ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಅವರ ಜಾಗ ಮರಳಿ ಕೊಡಬೇಕು ಎಂಬ ನ್ಯಾಯಾಲಯದ ನಿರ್ದೇಶನದ ಆಯ್ಕೆಯಂತೆ ಬೆಳಗಾವಿ ಮಹಾನಗರ ಪಾಲಿಕೆ ತನ್ನ ಮೇಲೆ ಇದ್ದಂತ ದೊಡ್ಡ ಜವಾಬ್ದಾರಿಯನ್ನು ಕಳೆದುಕೊಂಡು ನಿರಾಳವಾದಂತ ವಾತಾವರಣ ನಿರ್ಮಾಣವಾಗಿದೆ..
ಆದರೆ ಪ್ರತಿದಿನ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ನೂರಾರು ರಸ್ತೆ ಸವಾರರಿಗೆ ಇಂದು ರಸ್ತೆ ಬಂದಾದ ಕಾರಣ ಮರಳಿ ಸುತ್ತಾಕಿ ಸಂಚರಿಸುವ ಸಂಕಟ ಬಂದಾಗಿದ್ದು, ಪಾಲಿಕೆಗೆ ತುಸು ಸಂತಸ, ನಗರವಾಸಿಗಳಿಗೆ ತುಸು ಸಂಕಟ ಆದಂತಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..