ಪೋಷಣ ಅಭಿಯಾನ ಯೋಜನೆಯಡಿ ವಿಶೇಷ ಕಾರ್ಯಕ್ರಮ.
ನಗರ ವಲಯದಲ್ಲಿ ಅರ್ಥಪೂರ್ಣವಾಗಿ ಜರುಗಿದ ಪೋಷಣ ಮಾಸಾಚರಣೆ..
ಬೆಳಗಾವಿ : ದಿನಾಂಕ, 21/9/2024 ರಂದು ಬೆಳಗಾವಿ ನಗರ ಯೋಜನೆಯ ವ್ಯಾಪ್ತಿಯಡಿ ಬರುವ ನಗರವಲಯದ ಪಿ ಕೆ ಕ್ವಾಟರ್ಸನಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಅಣ್ಣಪ್ಪ ಹೆಗಡೆ ನಿರೂಪಣಾಧಿಕಾರಿಗಳು ಮಹಿಳಾ ಮತ್ತು ಮ್ಕಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಹಾಗೂ ಅಧ್ಯಕ್ಷರಾಗಿ ರಾಮಮೂರ್ತಿ ಕೆ.ವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೆಳಗಾವಿ ನಗರ ಇವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಿದ್ದಾರೆ..

ಮುಖ್ಯಅಥಿತಿಗಳಾಗಿ ನಗರ ಸೇವಕರಾದ ಗಿರಿಶ ದೊಂಗಡೆ, ನಿತಿನ ಜಾಧವ ಆರೋಗ್ಯ ಸಿಬ್ಬಂದಿಯಾದ ಶಿವಮೂರ್ತಿಮಠ, ಸಮಾಜ ಸೇವಕಿಯಾದ ಮಾಧುರಿ ಜಾಧವ, ಪೋಲಿಸ್ ಇಲಾಖೆಯ ಭಾರತಿ ಕೋಳಿ, ಸುಭಾಷ ಹಡಲಗಿ, ವಲಯ ಮೇಲ್ವಿಚಾರಕಿಯಾದ ಸವಿತಾ ಕೊಚ್ಚರಗಿ, ಲೀಲಾವತಿ ಕುರಿ, ವಿಜಯಕುಮಾರ ಪಾಟೀಲ ಭಾಗಿಯಾಗಿದ್ದು,
ಪೋಷಣ ಅಭಿಯಾಣ ಯೋಜನೆಯ ಜಿಲ್ಲಾ ಸಂಯೋಜಕರು, ರಾಜಶ್ರೀ ಕೋಲಕಾರ ತಾಲೂಕಾ ಸಂಯೋಜಕರು, ಅಂಗನವಾಡಿ ಕೇಂದ್ರದ ಫಲಾನುಭವಿಗಳು ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪಾರ್ಥನೆಯೊಂದಿಗೆ, ಮಕ್ಕಳ ಕೈಯಿಂದ ಗಿಡಕ್ಕೆ ನೀರು ಎರೆಯುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಲಾಗಿದ್ದು, ನಂತರ ಎಲ್ಲ ಗಣ್ಯರಿಂದ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಅಣ್ಣಪ್ಪ ಹೆಗಡೆ ನಿರೂಪಣಾಧಿಕಾರಿಗಳು ಬೆಳಗಾವಿ ಇವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸೌಲಭ್ಯಪಡೆಯುವಂತೆ ಫಲಾನುಭವಿಗಳಿಗೆ ತಿಳಿಸಿದರು.
ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, 6 ತಿಂಗಳ ಒಳಗಿನ ಮಗುವಿಗೆ ಅನ್ನಪಾಶನ ಕಾರ್ಯಕ್ರಮ ಹಾಗೂ ಅಂಗನವಾಡಿ ಮಕ್ಕಳ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ನಡೆಯಿತು, ಅಂಗನವಾಡಿಯಿಂದ ದೊರೆಯುವ ಪುಷ್ಟಿ ಹಾಗೂ ನ್ಯೂಟ್ರಿಮಿಕ್ಸದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಯಾರಿಸಿ ಇಡಲಾಗಿತ್ತು. ರಾಮಮೂರ್ತಿ ಕೆ.ವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೆಳಗಾವಿ ನಗರ, ಇವರು ಪೌಷ್ಟಿಕ ಆಹಾರದ ಬಗ್ಗೆ ವಿವರವಾದ ಮಾಹಿತಿ ಫಲಾನುಭವಿಗಳಿಗೆ ತಿಳಿಸಿದರು.
ಕಾವಕ್ರಮದಲ್ಲಿ ನೆರೆದ ಸರ್ವರಿಗೂ ವಂದನಾರ್ಪಣೆ ಸಲ್ಲಿಸುವದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವರದಿ ಪ್ರಕಾಶ ಬಸಪ್ಪ ಕುರಗುಂದ..