ಬಿಜೆಪಿ ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಅಧಿಕಾರ ಸ್ವೀಕಾರ..
ಅಭಿನಂದನೆ ತಿಳಿಸಿದ ಪಕ್ಷದ ಜಿಲ್ಲಾ ಪದಾಧಿಕಾರಿಗಳು..
ಬೆಳಗಾವಿ : ಶನಿವಾರ ದಿನಾಂಕ 21/09/2024ರಂದು ಬೆಳಗಾವಿ ಮಹಾನಗರ ಜಿಲ್ಲೆಯ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರನ್ನಾಗಿ ಶಿವಲಿಂಗಪ್ರಭು ಮಲ್ಲಿಕಾರ್ಜುನ ಹೂಗಾರ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಸೂಚನೆ ಮೇರೆಗೆ ಬಿಜೆಪಿಯ ಒಬಿಸಿ ಜಿಲ್ಲಾಧ್ಯಕ್ಷರನ್ನಾಗಿ ನಿಯುಕ್ತಿ ಮಾಡಲಾಗಿದೆ..

ಒಬಿಸಿ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಕೃತಜ್ಞತೆ ತಿಳಿಸಿದ ಶಿವಲಿಂಗಪ್ರಭು ಮ ಹೂಗಾರ ಅವರು, ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಸಂಘಟನೆಯ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ..

ಜಗದೀಶ ಶೆಟ್ಟರ ಸಂಸದರು ಬೆಳಗಾವಿ, ಅನೀಲ ಬೆನಕೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಗೀತಾ ಸುತಾರ ಬಿಜೆಪಿ ಮಹಾನಗರದ ಜಿಲ್ಲಾಧ್ಯಕ್ಷರು, ಸವಿತಾ ಕಾಂಬಳೆ ಮೇಯರ, ಮಹಾನಗರ ಪಾಲಿಕೆ ಬೆಳಗಾವಿ ಇವರೆಲ್ಲರೂ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಲಿಂಗಪ್ರಭು ಮ ಹೂಗಾರ ಅವರನ್ನು ಅಭಿನಂದಿಸಿದ್ದು ಜೊತೆಗೆ ಹೂಗಾರ ಸಮಾಜದ ಪ್ರಮುಖರು ಕೂಡಾ ಕರೆದು ಅಭಿನಂದನೆ ತಿಳಿಸಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..