ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ..

ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ..

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ರಾಜ್ಯ ಘಟಕದಿಂದ ಸಾರ್ಥಕ ಕಾರ್ಯಕ್ರಮ..

ಬೆಳಗಾವಿ : ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಸರಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ ಶಿಕ್ಷಕರ ಸಂಘಗಳ ಪರಿಷತ್ತು, ರಾಜ್ಯ ಘಟಕ ಧಾರವಾಡ ಇವರು ಏರ್ಪಡಿಸಿದ ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಬರುವ ಅಕ್ಟೋಬರ್ 05 ರಂದು ಜರುಗಲಿದೆ ಎಂದು ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಂಗಮೇಶ ಬನ್ನಿನಾಯ್ಕರ ಅವರು ತಿಳಿಸಿದ್ದಾರೆ.

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ರಾಜ್ಯ ಘಟಕದ ಅಧೀನದಲ್ಲಿ ಬರುವ ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಸಹಯೋಗದಲ್ಲಿ ಶನಿವಾರ ದಿನಾಂಕ 05/10/2024ರಂದು ಬೆಳಗಾವಿ ಜಿಲ್ಲಾ, ಸವದತ್ತಿಯ ಗುರುಭವನದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ಶಿಕ್ಷಕಿಯರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ..

ಅಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮವು ಪ್ರಾರಂಭವಾಗುವುದು, ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಂಘಟನೆಗಳ ಪದಾಧಿಕಾರಿಗಳು ಶಿಕ್ಷಕ ಸಮೂಹ ಮುಂತಾದವರು ಭಾಗಿಯಾಗುವರಿದ್ದು ಸರ್ವರಿಗೂ ಆದರದ ಸ್ವಾಗತವಿದೆ ಎಂದು ರಾಜ್ಯ ಅಧ್ಯಕ್ಷರಾದ ಸಂಗಮೇಶ ಬನ್ನಿನಾಯ್ಕರ ತಿಳಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..