ಎನಪಿಎಸ್ ಹಾಗೂ ಯುಪಿಎಸ್ ಜಾರಿ ಬೇಡ, ಓಪಿಎಸ್ ಜಾರಿಗೆ ಬರಬೇಕು..
ರಾಷ್ಟ್ರೀಯ ಹಳೆಯ ಪಿಂಚಣಿ ವ್ಯವಸ್ಥೆಯ ಚಳುವಳಿ ಸದಸ್ಯರ ಒತ್ತಾಯ..
ಬೆಳಗಾವಿ : ಹಳೆಯ ಪಿಂಚಣಿ ವ್ಯವಸ್ಥೆಯ ರಾಷ್ಟ್ರೀಯ ಚಳುವಳಿ ಕಾರ್ಯಕಾರಿಣಿ ನಿರ್ಧಾರದಂತೆ ಎನಪಿಎಸ್ ಮತ್ತು ಯುಪಿಎಸ್ ಅನ್ನು ಜಾರಿಗೆ ತರುವ ಕ್ರಮವನ್ನು ಹಿಂಪಡೆಯಬೇಕು ಜೊತೆಗೆ ಓಪಿಎಸ್ ಅನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಎನಪಿಎಸ್ ನೌಕರರ ಸಂಘದ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಪ್ರತಿಭಟನೆಯ ಮೂಲಕ, ಮನವಿ ನೀಡಿದ್ದಾರೆ..

ಕರ್ನಾಟಕ ರಾಜ್ಯ ಸರ್ಕಾರಿ ಎನಪಿಎಸ್ ನೌಕರರ ಸಂಘವು ಕಳೆದ ಹತ್ತು ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗುವ ವಿಷಯದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದು, ನೌಕರರ ಸಂಘವು ರಾಷ್ಟ್ರ ಮಟ್ಟದಲ್ಲಿ NMOPS ಸಹಯೋಗವನ್ನು ಹೊಂದಿದೆ..
NMOPS ನ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೂ ಕೂಡಾ ನೌಕರರ ನಿವೃತ್ತ ಬದುಕಿಗೆ ಯಾವುದೇ ಭದ್ರತೆಯನ್ನು ಒದಗಿಸುವುದಿಲ್ಲ ಎಂಬ ಸತ್ಯಸಂಗತಿ ತಿಳಿದಾದ ಮೇಲೆ, ಇಂದು ರಾಷ್ಟ್ರದಾದ್ಯಂತ ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ “no nps, no ups, only ops” ಎಂಬ ಶೀರ್ಷಿಕೆಯಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ..
ರಾಜ್ಯ ಸರ್ಕಾರವು ಈಗಾಗಲೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ NPS ರದ್ದುಗೊಳಿಸಿ OPS ಜಾರಿಗೆ ತರುವುದಾಗಿ ನಮ್ಮ ಸಂಘಟನೆಗೆ ಭರವಸೆಯನ್ನು ನೀಡಿದ್ದು, ಅದರಂತೆ NPS ಅನ್ನು ರದ್ದುಗೊಳಿಸಿ OPS ಅನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ..
ಈ ಪ್ರತಿಭಟನೆ ಮನವಿಯ ಸಂದರ್ಭದಲ್ಲಿ ಎನ್ ಪಿಎಸ್ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಟಿ ಎನ್, ಆರ್ ವಿ ಹೈಬತ್ತಿ, ಅಶೋಕ್, ವೆಂಕಟೇಶ್, ಸಂಘದ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..