ರೇಣುಕಾದೇವಿ ದರ್ಶನಕ್ಕೆ ಬರುವ ಸರ್ವ ಭಕ್ತರಿಗೆ ಸಕಲ ಸೌಲಭ್ಯ ದೊರೆಯಬೇಕು..

ರೇಣುಕಾದೇವಿ ದರ್ಶನಕ್ಕೆ ಬರುವ ಸರ್ವ ಭಕ್ತರಿಗೆ ಸಕಲ ಸೌಲಭ್ಯ ದೊರೆಯಬೇಕು..

ಮೂಲ ಸೌಕರ್ಯ ಒದಗಿಸುವ ಯೋಜನೆಗಳನ್ನು ರೂಪಿಸಬೇಕಿದೆ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ರೇಣುಕಾ ಯಲ್ಲಮ್ಮ‌ ದೇವಸ್ಥಾನ ಉತ್ತರ ಕರ್ನಾಟಕದ ಭಕ್ತಿ ಪ್ರಧಾನ ಕ್ಷೇತ್ರವಾಗಿದ್ದು ಇಲ್ಲಿ ಬರುವಂತಹ‌ ಲಕ್ಷಾಂತರ ಭಕ್ತಾಧಿಗಳ ವಸತಿ, ಕುಡಿಯುವ ನೀರು‌ ಹಾಗೂ ಶೌಚಾಲಯಗಳು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.

ಭಾನುವಾರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಆಗಮಿಸಿ ಮಾತನಾಡಿದ ಸಚಿವರಾದ ಸತೀಶ ಜಾರಕಿಹೊಳಿ, ಇಂದು ಸುಮಾರು 31 ಕೋಟಿ ರೂ ಗಳ‌ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಪಣೆ‌ ಮಾಡಲಾಗಿದೆ.‌ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ರೂಪು ರೇಷೆಗ‌ಳ ಕುರಿತು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಬರುವಂತಹ ದಿನಗಳಲ್ಲಿ ದೇವಸ್ಥಾನಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಲೊಕೋಯೋಗಿ ಇಲಾಖೆ ವತಿಯಿಂದ ರಸ್ತೆ, ಕೋಣೆಗಳ ನಿರ್ಮಾಣಕ್ಕೆ ‌ಮನವಿ‌ ಮಾಡಲಾಗಿದೆ. ದೇವಿ ದರ್ಶನಕ್ಕೆ ಅನುಕೂಲವಾಗುವಂತೆ ಭಕ್ತರಿಗೆ ಶೀಘ್ರ ದರ್ಶನ ದೊರಕಿಸುವ ವ್ಯವಸ್ಥೆಗಳ‌ ಕುರಿತು ಚರ್ಚಿಸಲಾಗಿದೆ. ಯಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಗಳ ಮೂಲಕ ಆಗಮಿಸುವ ಜಾನುವಾರುಗಳಿಗೂ ದಾಸೋಹದ ವ್ಯವಸ್ಥೆ ಮಾಡುವ ನಿರ್ಣಯಗಳನ್ನು‌ ಇಂದಿನ‌ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ..

ಭಕ್ತಾದಿಗಳಿಗೆ ಊಟ ಮಾಡಲು ಅನುಕೂಲವಾಗಲು ಒಂದು ಭವ್ಯ ದಾಸೋಹ ಭವನವನ್ನು ಸರಕಾರದಿಂದ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ‌ ಮಾಡಿದರು.

ಇನ್ನು ಶಾಸಕರಾದ ವಿಶ್ವಾಸ ವೈದ್ಯ‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಲ್ಲಮ್ಮ‌ದೇವಸ್ಥಾನ ಪ್ರಾಧಿಕಾರದ ರಚನೆಯ ಬಹುದಿನಗಳ‌ ಕನಸಾದ ಈ ದಿವಸ ನನಸಾಗಿದೆ. ಕೊಟ್ಯಾಂತರ ಭಕ್ತಾದಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಿಂದ ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಲೋಕಾರ್ಪಣೆ ಮಾಡಲಾಗುತ್ತಿದೆ. ಭಕ್ತಾದಿಗಳ‌ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..