ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆ –

ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆ –

ಶಿ ಕುಸುಗಲ್, ಸುರೇಶ್ ಯಾದವ್,

ವಾಲ್ಮೀಕಿಯವರ ಆದರ್ಶ ಗುಣಗಳನ್ನು ಯುವಸಮೂಹ ಪಾಲಿಸಬೇಕು..

ಮಹೇಶ ಶಿಗಿಹಳ್ಳಿ, ರಾಜ್ಯಧ್ಯಕ್ಷರು ಪಪಂ ವಾಲ್ಮೀಕಿ ರಾಜ್ಯ ಯುವ ಘಟಕ..

ಬೆಳಗಾವಿ : ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ದಿನಾಂಕ 17/10/2024ರಂದು ರಾಮತೀರ್ಥ ನಗರದ ಗಣೇಶ್ ವೃತ್ತದಲ್ಲಿ ಕರ್ನಾಟಕ ಪ.ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ವತಿಯಿಂದ ಸಮುದಾಯದ ಏಳಿಗೆಗಾಗಿ ಅರ್ಥಪೂರ್ಣವಾದ ಕಾರ್ಯ ಕೈಗೊಳ್ಳಲಾಗಿದೆ..

ಪ ಪಂಗಡದ ರಾಜ್ಯ ವಾಲ್ಮೀಕಿ ಯುವ ಘಟಕದ ಸಂಘಟನೆಯ ನಾಮಫಲಕ ಉದ್ಘಾಟನೆ ಮಾಡಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶೇಷ ರೀತಿಯ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ಜಯಂತಿ ಆಚರಣೆ ಸಂಧರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಸಮಾಜಸೇವಕರಾದ ಸುರೇಶ್ ಯಾದವರವರು ಮಹರ್ಷಿ ವಾಲ್ಮೀಕಿ ರವರ ಆದರ್ಶಯುತ ಜೀವನ ಮತ್ತು ಇತಿಹಾಸದ ಬಗ್ಗೆ ವಿವರಿಸಿ ಮಾತನಾಡಿದರು. ತದನಂತರ ಹಿರಿಯ ಸಾಹಿತಿಗಳಾದ ಕುಸುಗಲ್ ರವರು ಮಹರ್ಷಿ ವಾಲ್ಮೀಕಿ ರವರ ಜೀವನ ಮೌಲ್ಯಗಳನ್ನು ಮೆಲುಕು ಹಾಕಿ ಇತಿಹಾಸದ ಬಗ್ಗೆ ವಿವರಣೆ ಮಾಡಿದರು.

ನಂತರ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಹೇಶ ಶಿಗೀಹಳ್ಳಿ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜ್ಞಾನ ಮತ್ತು ಚರಿತ್ರೆಯ ಬಗ್ಗೆ ತಿಳಿಸುತ್ತ, ಪ್ರಸಕ್ತ ಯುವ ಸಮೂಹ ಅವರ ಆದರ್ಶಗಳನ್ನು ಪಾಲಿಸುತ್ತಾ, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಲ್ಲಿ ಕಾರ್ಯ ಪ್ರವರ್ತರಾಗಬೇಕು ಎಂಬ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ರಾಮತೀರ್ಥ ನಗರದ ಸ್ಥಳೀಯ ರಹವಾಸಿಗಳು, ಗುರುಹಿರಿಯರು, ಮುಖಂಡರು ಯುವಕರು ಭಾಗವಹಿಸಿದ್ದು, ಸಮುದಾಯದ
ಸಿದ್ಧರಾಯಿ ನಾಯಕ
ಸಂತೋಷ್ ಗುಬಚಿ
ರಾಜು ಶಿಗಿಹಳ್ಳಿ
ಶಕ್ತಿ ಶಿಗೀಹಳ್ಳಿ
ಪ್ರಜ್ವಲ್ ಹೊರಕೇರಿ
ಸೋನು ನಾಯ್ಕ
ಆಕಾಶ್ ಬೇವಿನಕಟ್ಟಿ
ಗಂಗಾರಾಮ
ಬಾಲಕೃಷ್ಣ ಹಾಗೂ ಇನ್ನುಳಿದ ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..