ಬಸವೇಶ್ವರ ದೇವಸ್ಥಾನ ಕಟ್ಟಡಕ್ಕಾಗಿ 51ಸಾವಿರ ದೇಣಿಗೆ ನೀಡಿದ ಹಾಲಪ್ಪ ನೇಸರಗಿ..
ಕರಡಿಗುದ್ದಿ ಗ್ರಾಮದ ಗ್ರಾ ಪಂ ಉಪಾಧ್ಯಕ್ಷ ಹಾಲಪ್ಪ ನೇಸರಗಿ ಅವರಿಗೆ ಸನ್ಮಾನ..
ಬೆಳಗಾವಿ : ತಾಲೂಕಿನ ಕರಡಿಗುದ್ದಿ ಗ್ರಾಮದ ಬಸವೇಶ್ವರ ದೇವಾಲಯದ ಹೊಸ ಕಟ್ಟಡವನ್ನು ಕಟ್ಟಲು 51,000 ರೂಪಾಯಿಗಳ ದೇಣಿಗೆ ನೀಡಿದ ಕಮೀಟಿಯ ಅದ್ಯಕ್ಷರಾದ ಹಾಗೂ ಕರಡಿಗುದ್ದಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹಾಲಪ್ಪ ನೇಸರಗಿಯವರಿಗೆ ಗ್ರಾಮದ ಮುಖಂಡರಿಂದ ಗೌರವದ ಸತ್ಕಾರ ಮಾಡಲಾಗಿದೆ..
ಈ ಸನ್ಮಾನ ಸಮಯದಲ್ಲಿ ದೇವಸಸ್ಥಾನ ಕಮಿಟಿಯ ಸದಸ್ಯರು ಹಾಜರಿದ್ದು, ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ ಇವರನ್ನು ಅಭಿನಂದಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಸದಾನಂದ ರಾಚನ್ನವರ, ಮಾಜಿ ಪಿಕೆಪಿಎಸ್ ಸದಸ್ಯರಾದ ಶಂಕರ್ ಮುರಕಿಭಾವಿ, ಅಶೋಕ್ ಮೂಕನವರ್, ಮಹಾಂತೇಶ ಮುಕನವರ, ನಾಗಪ್ಪ ಕುರಿ, ನಿಂಗಪ್ಪ ಯರಗಣವಿ, ಬಸನಗೌಡ ಪಾಟೀಲ್, ಸಿದ್ದಪ್ಪ ವಾಲಿಕಾರ, ಯಲ್ಲಪ್ಪ ಉರುಬಿನಟ್ಟಿ, ಶಿಂಗಪ್ಪ ಉರುಬಿನಟ್ಟಿ, ದಸ್ತಗೀರ್ ನದಾಫ್, ನಾಗೇಶ್ ದಳವಾಯಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..