ಕಂದಾಯದ ಕಡ್ಡಾಯ ವಸೂಲಿಗೆ ಪೀಲ್ಡಿಗೀಳಿದ ಪಾಲಿಕೆ ಕಂದಾಯ ಉಪ ಆಯುಕ್ತರು..

ಕಂದಾಯದ ಕಡ್ಡಾಯ ವಸೂಲಿಗೆ ಪೀಲ್ಡಿಗೀಳಿದ ಪಾಲಿಕೆ ಕಂದಾಯ ಉಪ ಆಯುಕ್ತರು..

ನೂರಕ್ಕೆ ನೂರರಷ್ಟು ತೆರಿಗೆ ಸಂಗ್ರಹದ ಗುರಿ..

ಒಂದನೇ ತಾರೀಖಿನೊಳಗೆ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕಾಣಬೇಕು..

ಪ್ರಭಾವಕ್ಕೆ ಮಣಿಯುವ ಮಾತೇ ಇಲ್ಲಾ..

ರೇಷ್ಮಾ ತಾಳಿಕೋಟೆ, ಕಂದಾಯ ಉಪ ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ..

ಬೆಳಗಾವಿ : ಕಳೆದ ಒಂದೆರಡು ತಿಂಗಳಿನಿಂದ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ತಮ್ಮ ಸಿಬ್ಬಂದಿಗಳಿಗೆ ವಿಶೇಷ ಮಾರ್ಗದರ್ಶನ ನೀಡಿ, ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹದ ಕಾರ್ಯದಲ್ಲಿ ನಾವು ಸಫಲವಾಗಬೇಕು, ಆ ಮೂಲಕ ಪಾಲಿಕೆಯ ಆದಾಯದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೆಲವು ಮಾರ್ಗೋಪಾಯಗಳನ್ನು ತಮ್ಮ ಕಂದಾಯ ವಿಭಾಗಕ್ಕೆ ನೀಡುತ್ತಾ ಬರುತ್ತಿದ್ದಾರೆ..

ಕಳೆದ ಸುಮಾರು ದಿನಗಳಿಂದ ಪಾಲಿಕೆಯ ಕಂದಾಯ ನಿರೀಕ್ಷಕರು ಬೆಳಿಗ್ಗೆ 8 ಗಂಟೆಗೆ ತೆರಿಗೆ ಬಾಕಿ ಇರುವ ನಗರವಾಸಿಗಳ ಮನೆಗೆ ತೆರಳಿ, ಬಾಕಿ ಇರುವ ಆಸ್ತಿ ತೆರಿಗೆಗಳ ಬಗ್ಗೆ ಮಾಹಿತಿ ನೀಡಿ, ಪ್ರಸ್ತುತ ತೆರಿಗೆ ಭರಣ ಮಾಡುವುದರಿಂದ ಆಗುವ ಅನುಕೂಲದ ಬಗ್ಗೆ ತಿಳಿಹೇಳಿ, ಸಾಧ್ಯವಾದರೆ ಸ್ಥಳದಲ್ಲಿಯೇ ಚಲನ ನೀಡುವ ಹಾಗೂ ತೆರಿಗೆ ತುಂಬಿಸಿಕೊಳ್ಳುವ ಕಾರ್ಯದಲ್ಲಿ ಪಾಲಿಕೆಯ ಕಂದಾಯ ಸಿಬ್ಬಂದಿಗಳು ನಿರತವಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂಬ ಮಾಹಿತಿಯಿದೆ..

ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು, ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿ ಎಲ್ಲರಿಗೂ ಕೆಲ ಜವಾಬ್ದಾರಿ ನೀಡಿದ್ದು, ಆ ಪ್ರಕಾರದಂತೆ ತೆರಿಗೆ ಸಂಗ್ರಹ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿ ಇರುವಂತೆ ಉಪ ಆಯುಕ್ತರು (ಕಂದಾಯ) ನೋಡಿಕೊಳ್ಳುತ್ತಿದ್ದು, ನಿರ್ಲಕ್ಷ ತೋರಿದ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದ ಪ್ರಸಂಗಗಳು ಕಂಡುಬಂದಿವೆ..

ಇಂದು ವಿವಿಧ ಕಂದಾಯ ವಿಭಾಗಗಳಲ್ಲಿ ವಿಶೇಷ ಸಭೆಗಳನ್ನು ನಡೆಸಿ, ತೆರಿಗೆ ಸಂಗ್ರಹದಲ್ಲಿ ಸಿಬ್ಬಂದಿಗಳಿಗೆ ಕೆಲ ಸಲಹೆ ಸೂಚನೆ ನೀಡಿ, ಉತ್ಸಾಹದಿಂದ ಕಾರ್ಯ ನಿರ್ವಹಿಸುವಂತೆ ಪ್ರೇರಣಾತ್ಮಕ ಸಂದೇಶ ನೀಡಿದ್ದಾರೆ, ಜೊತೆಗೆ ತೆರಿಗೆ ಸಂಗ್ರಹದಲ್ಲಿ ಯಾರಾದರೂ ಕಳಪೆ ಪ್ರದರ್ಶನ ತೋರಿದಲ್ಲಿ, ಅಂತವರನ್ನು ಬೇರೆ ಕಡೆಗೆ ಬದಲಾಯಿಸಬೇಕಾಗಿತ್ತದೆ ಎಂಬ ಖಡಕ್ ಸೂಚನೆ ಕೂಡಾ ನೀಡಿದ್ದಾರೆ, ಬರುವ ಒಂದನೇ ತಾರೀಖಿನ ಒಳಗಾಗಿ ತೆರೆಗೆ ಸಂಗ್ರಹದಲ್ಲಿ ಪ್ರಗತಿ ಕಾಣಬೇಕು ಎಂಬ ಸೂಚನೆಯನ್ನು ಕೂಡಾ ನೀಡಿದ್ದಾರೆ, ಜೊತೆಗೆ ಯಾರೇ ಎಷ್ಟೇ ಪ್ರಭಾವಿ ಇದ್ದರೂ ಮಣಿಯುವ ಅವಶ್ಯಕತೆ ಇಲ್ಲಾ, ದೊಡ್ಡವರಿದ್ದರೆ ಅವರ ಆಸ್ತಿಗಳು ಕೂಡಾ ದೊಡ್ಡವು ಇರುತ್ತವೆ, ಅವರು ದೊಡ್ಡ ಪ್ರಮಾಣದಲ್ಲಿ ಆಸ್ತಿ ತೆರಿಗೆ ನೀಡಲಿ ಎಂದಿದ್ದಾರೆ..

ಕಂದಾಯ ಉಪ ಆಯುಕ್ತರ ಸೂಚನೆಯಂತೆ ನಗರದಲ್ಲೆಲ್ಲಾ ವ್ಯವಸ್ಥಿತವಾಗಿ ಆಸ್ತಿ ತೆರಿಗೆ ಸಂಗ್ರಹದ ಕಾರ್ಯ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಸ್ವತಃ ಕಂದಾಯ ಉಪ ಆಯುಕ್ತರೇ ನಗರದ ವಿವಿಧ ವಾಣಿಜ್ಯ ಮಳಿಗೆಗಳಿಗೆ ಬೇಟಿ ನೀಡಿ, ಅಲ್ಲಿ ಬಾಕಿ ಇರುವ ತೆರಿಗೆಯ ಬಗ್ಗೆ ವಿಚಾರಣೆ ನಡೆಸಿ, ಆದಷ್ಟು ಬೇಗ ಎಲ್ಲರೂ ತೆರಿಗೆ ಭರಣ ಮಾಡಬೇಕು ಎಂದು ತಿಳಿಸಿದ್ದಾರೆ.

ನಗರದ ಪ್ರಮುಖ ವಾಣಿಜ್ಯ ಮಳಿಗೆಗಳು, ಮಂಗಳದೀಪ, ಮೆಹಂದಿ, ಅಂಗಡಿಗಳು, ಸತ್ಕಾರ ಹೋಟೆಲಗಳಿಗೆ ಬೇಟಿ ನೀಡಿ, ತೆರಿಗೆ ತುಂಬಲು ಸೂಚನೆ ನೀಡಿದ್ದು, ಬಹುದಿನಗಳ ತೆರಿಗೆ ಬಾಕಿ ಹಾಗೂ ನೋಟಿಸಗೂ ಸ್ಪಂದನೆ ನೀಡದ ಮಾರುತಿ ಗಲ್ಲಿಯ ಕಾಮತ ಹೋಟೆಲನ್ನು ಉಪ ಆಯುಕ್ತರು ಕಂದಾಯ ಅವರ ನೇತೃತ್ವದಲ್ಲಿ ಸೀಲ್ ಕೂಡಾ ಮಾಡಲಾಗಿದೆ.

ಪಾಲಿಕೆಯ ಕಂದಾಯ ಉಪ ಆಯುಕ್ತರ ನಗರ ಬೇಟಿಯ ವೇಳೆ ಕಂದಾಯ ಅಧಿಕಾರಿ ಆನಿಶೆಟ್ಟರ್, ಸಹಾಯಕ ಕಂದಾಯ ಅಧಿಕಾರಿ ತಪಸಿ, ಇತರ ಕಂದಾಯ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..