ಆಕ್ಸಿಜನ್ ಕೊರತೆಯಿಂದ ಶಿಶುಗಳ ಸಾವು ಎಂಬುದು ಶುದ್ಧ ಸುಳ್ಳು..
ಶಿಶುಗಳ ಸಾವಿಗೆ ಕೆಲ ಬೇರೆ ಬೇರೆ ವೈದ್ಯಕೀಯ ಕಾರಣಗಳಿರುತ್ತವೆ..
ಬೇರೆ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಸಿದರೆ ಬಿಮ್ಸ್ ಶಿಶುಗಳ ಸಾವಿನ ದರ (ಶೇ7.8) ಬಹಳ ಕನಿಷ್ಠವಿದೆ..
ಕಂಪ್ರೆಸರ್, ಆಕ್ಸಿಜನ್ ಹಾಗೂ ಶಿಶುಗಳ ಸಾವಿಗೆ ಸಂಬಧವೇ ಇಲ್ಲಾ..
ಅಶೋಕ ಶೆಟ್ಟಿ, ನಿರ್ದೇಶಕರು ಬೀಮ್ಸ್ ಜಿಲ್ಲಾಸ್ಪತ್ರೆ ಬೆಳಗಾವಿ..
ಬೆಳಗಾವಿ : ಬೆಳಗಾವಿ ಜಿಲ್ಲಾಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಕೆಲ ನವಜಾತ ಶಿಶುಗಳ ಸಾವಿಗೆ ಅಲ್ಲಿರುವ ಆಕ್ಸಿಜನ್ ಕೊರತೆ ಕಾರಣ ಎಂಬುದು ಸುಳ್ಳು, ಬದಲಾಗಿ ಶಿಶುಗಳ ಸಾವಿಗೆ ಅನೇಕ ವೈದ್ಯಕೀಯ ಹಾಗೂ ಸಾಂದರ್ಭಿಕ ಕಾರಣಗಳು ಇರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ..
ಬೀಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇದೆಯೇ? ಅದರಿಂದ ಶಿಶುಗಳ ಜೀವಕ್ಕೆ ಸಮಸ್ಯೆ ಆಗಿದೆಯೇ? ಎಂಬ ವಿಷಯದ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಅಶೋಕ ಶೆಟ್ಟಿ ಅವರನ್ನು ಕೇಳಿದಾಗ, ನಮ್ಮ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅಂತಹ ಸಮಸ್ಯೆ ಇಲ್ಲವೇ ಇಲ್ಲಾ, ಆಕ್ಸಿಜನ್ ಕೊರತೆಯಿಂದ ಶಿಶುಗಳ ಮರಣ ಎಂಬುದು ಶುದ್ಧ ಸುಳ್ಳು, ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಾಖಲಾಗಿ ಹೆರಿಗೆ ಮುಗಿದಾಗ, ಕೆಲ ಶಿಶುಗಳ ಮರಣಕ್ಕೆ ಅನೇಕ ವೈದ್ಯಕೀಯ ಕಾರಣಗಳಿರುತ್ತವೆ, ಅದಕ್ಕಾಗಿ ಶಿಶುಗಳು ಸಾವನ್ನಪ್ಪಿರುತ್ತವೆ ಎಂದಿದ್ದಾರೆ..

ಕಂಪ್ರೆಸರ್, ಆಕ್ಸಿಜನ್ ಹಾಗೂ ಶಿಶುಗಳ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ, ಆಸ್ಪತ್ರೆಯ ಎಂಸಿಏಚ್ ಪಕ್ಕದಲ್ಲೇ ತ್ರೀ ಎಲ್ಎಂಓ ಟ್ಯಾಂಕಗಳಿರುತ್ತವೆ, ಅದರಲ್ಲಿ ಒಂದು ಆಕ್ಸಿಜನ್, ಇನ್ನೊಂದು ಕಂಪ್ರೆಸರ್ (ಏರ್ಲೈನ್) ಮತ್ತೊಂದು ವ್ಯಾಕ್ಯೂಮ್ ಅಂತ ಮೂರು ಲೈನ್ ಇರುತ್ತವೆ, ಆಕ್ಸಿಜನ್ ಟ್ಯಾಂಕ್ ಪಕ್ಕದಲ್ಲಿ ಇರುವದರಿಂದ ಆಕ್ಸಿಜನ್ ಪ್ಲೋ ಚೆನ್ನಾಗಿಯೆ ಇದೆ, ಆಕ್ಸಿಜನ್ ಕೊರತೆ ಏನು ಇಲ್ಲಾ, ಮತ್ತೆ ಕಂಪ್ರೆಸರ್ ಕೆಲಸವೇ ಬೇರೆ, ಅದು ವೆಂಟಿಲೇಟರಗಳಿಗೆ ಏರ್ ಪೂರೈಸುತ್ತದೆ, ಅದು ಕೂಡಾ ಐದು ವೆಂಟಿಲೇಟರ್ ಗಳಿಗೆ ಮಾತ್ರ, ಉಳಿದ ವೆಂಟಿಲೇಟರಗಳಲ್ಲಿ ಅವುಗಳಲ್ಲಿಯೇ ಎಲ್ಲಾ ವ್ಯವಸ್ಥೆಯಿದೆ, ಆಸ್ಪತ್ರೆಯಲ್ಲಿ ಎರಡು ಕಂಪ್ರೆಸರ್ ಇವೆ ಒಂದು ಕಾರ್ಯನಿರ್ವಹಿಸುತ್ತಾ ಇರುತ್ತದೆ ಮತ್ತೊಂದು ಸ್ಟ್ಯಾಂಡ್ ಬಾಯ್ ಅಂತ ಇರುತ್ತದೆ, ಸ್ಟ್ಯಾಂಡ್ ಬಾಯ್ ಕಂಪ್ರೆಸರ್ ಹಾಳಾಗಿತ್ತು, ಅದಕ್ಕೆ ಕೋಟೆಶನ್ ಮಾಡಿ, ಆರ್ಡರ್ ನೀಡಿದ್ದು, ಇಂದು ಸಂಜೆವೇಳೆಗೆ ಆ ಹೆಚ್ಚುವರಿ ಕಂಪ್ರೆಸರ್ ಕೂಡಾ ಪೂರೈಕೆ ಮಾಡುತ್ತಾರೆ, ಆ ಕಂಪ್ರೆಸರಗೂ ಆಕ್ಸಿಜನ್ ಪೂರೈಕೆಗೆ ಏನೂ ಸಂಬಂಧ ಇಲ್ಲ ಎಂದಿದ್ದಾರೆ..
ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗಕ್ಕೆ ಜನವರಿಯಿಂದ ಅಕ್ಟೋಬರವರೆಗೆ 2154 ಪೆಸೆಂಟಗಳು ದಾಖಲಾಗಿದ್ದು, ರಾಷ್ಟ್ರದ ಅತ್ತ್ಯುತ್ತಮ ಮಕ್ಕಳ ವಿಭಾಗದಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯ ಒಂದು ಎಂದು ನಮ್ಮ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಮನ್ನಣೆ (ಪ್ಲಾಟಿನಂ ಡಿಗ್ರಿ ಸರ್ಟಿಫಿಕೇಟ್) ಸಿಕ್ಕಿದೆ, ಹಾಗಾಗಿ ನಮ್ಮಲ್ಲಿ ಅಡ್ಮಿಷನ್ ಕೂಡಾ ಫುಲ್ ಇವೆ, ಪ್ರತಿ ತಿಂಗಳು 700 ಹೇರಿಗೆಗಳು ಆಗುತ್ತವೆ ಎಂಬ ಮಾಹಿತಿ ನೀಡಿದ್ದಾರೆ.

ಶಿಶುಗಳ ಸಾವಿಗೆ ಹಲವು ಕಾರಣಗಳು ಇದ್ದು, ಹುಟ್ಟಿದ ಕೂಡಲೇ ಉಸಿರು ಇರುವದಿಲ್ಲ,, ಬಹುತೇಕ ಹುಟ್ಟಿದ ತಕ್ಷಣ ಅಳುವದಿಲ್ಲ, ಇನ್ಫೆಕ್ಷನ್ ಕೂಡಾ ಆಗುವುದರಿಂದ, ಮಿಕೊನಿಯಮದಿಂದ, ಫ್ರೀ ಮೇಚುರಿಟಿ ಆಗಿದ್ದು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪೆಸೆಂಟಗಳು ದೊಡ್ಡ ಸಮಸ್ಯೆ ಬಂದಾಗ, ಕಡೆಯ ಕ್ಷಣದಲ್ಲಿ ನಮ್ಮಲ್ಲಿ ತುರ್ತು ಚಿಕಿತ್ಸೆಗಾಗಿ ಬರುವರು, ಇಂತಹ ಕಾರಣಗಳಿಂದ ಶಿಶುಗಳ ಸಾವು ಸಂಭವಿಸುತ್ತದೆ, ಹಾಗಾಗಿ 100 ಫೆಸೆಂಟುಗಳು ಬಂದಾಗ ಎಲ್ಲವೂ ಚೇತರಿಕೆ ಆಗುವದಿಲ್ಲ, ಆದರೂ ನಮ್ಮ ಆಸ್ಪತ್ರೆಯ ಶಿಶು ಮರಣದ ದರ 7.8 ಇದ್ದು, ಬೇರೆ ಜಿಲ್ಲಾಸ್ಪತ್ರೆಯಲ್ಲಿ ಹೋಲಿಸಿದರೆ ಇದು ಬಹಳ ಕನಿಷ್ಟವಾಗಿದೆ ಎಂದಿದ್ದಾರೆ.
ನಿಯಮಬದ್ದವಾಗಿ, ಕಟ್ಟುನಿಟ್ಟಾಗಿ ಕೆಲವು ಕೆಲಸ ಮಾಡಲು ಹೋಗುವಾಗ ನಮ್ಮಲ್ಲೇ ಇಂತಹ ಸ್ವಲ್ಪ ಸಮಸ್ಯೆಗಳನ್ನು ಮಾಡುವವರು ಇರುತ್ತಾರೆ, ಇರಲಿ ಇದರಿಂದ ಎಲ್ಲರಿಗೂ ನೈಜ ವಿಷಯ ತಿಳಿಯಲಿ, ಸರ್ಕಾರದಿಂದ. ತನಿಖೆ ಕೂಡಾ ಆಗಲಿ, ಏನು ಸಮಸ್ಯೆ ಎಂದು ಎಲ್ಲರಿಗೂ ತಿಳಿಯಲಿ, ಜನರು ಇದರಿಂದ ಆಸ್ಪತ್ರೆಯ ಬಗ್ಗೆ ಸಂಶಯ ಪಡಬಾರದು, ಖಾಸಗಿ ಆಸ್ಪತ್ರೆಗೆ ಹೋಗಿ ಹಣ ಕಳೆದುಕೊಂಡು ಕಷ್ಟ ಪಡಬಾರದು, ಬಡ, ಮಾದ್ಯಮ, ವರ್ಗದವರಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಸ್ಪತ್ರೆ ಯಾವಾಗಲೂ ಮುಂದಿದೆ, ಮುಂದೇನು ಆರೋಗ್ಯ ಸೇವೆ ನೀಡುತ್ತದೆ, ಜನರು ಯಾವುದೇ ತಪ್ಪು ಸಂದೇಶಕ್ಕೆ ಕಿವಿಗೊಡಬಾರದು, ಇಲ್ಲಿಯ ಸೇವೆಯನ್ನು ಬೇರೆಯವರಿಂದ ಕೇಳಿಕೊಂಡು, ಇದು ನಿಮ್ಮ ಆಸ್ಪತ್ರೆ ಎಂದುಕೊಂಡು ನೀವಿಲ್ಲಿ ಬಂದು ಚಿಕಿತ್ಸೆ ಪಡೆಯಬಹುದು ಎಂದು ಮನವಿ ಮಾಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..