ಪಾಲಿಕೆಯ ಪರಿಷತ್ ಸಭೆಯಲ್ಲಿ ಸದ್ದು ಮಾಡಿದ ಶವ ವಾಹನ ಸಮಸ್ಯೆ.

ಪಾಲಿಕೆಯ ಪರಿಷತ್ ಸಭೆಯಲ್ಲಿ ಸದ್ದು ಮಾಡಿದ ಶವ ವಾಹನ ಸಮಸ್ಯೆ.

ಪಾಲಿಕೆಯ ಲೀಸ್ ಜಾಗಕ್ಕೆ ಸಾರ್ವಜನಿಕರು ಮಾಲೀಕರಲ್ಲ..

ಅನಧಿಕೃತ ಆಸ್ತಿಗಳಿಗೆ ಪಿಐಡಿ ನೀಡಲಾಗುವುದಿಲ್ಲ..

ಪಾಲಿಕೆಯ ಕಂದಾಯ ವಿಭಾಗದ ಸ್ಪಷ್ಟನೆ..

ಬೆಳಗಾವಿ : ಇಆಸ್ತಿಯ ಪಾರ್ಮೆಟ್ ಪ್ರಕಾರ ಪಾಲಿಕೆಯು ಲೀಸ್ ಎಂದು ನೀಡಿದ ಆಸ್ತಿಯಲ್ಲಿ ಸಾರ್ವಜನಿಕರನ್ನು ಮಾಲೀಕರೆಂದು ನಮೂದಿಸಲು ಆಗುವದಿಲ್ಲ, ಅದೇ ರೀತಿ ಕೆಲ ತಿಂಗಳ ಹಿಂದೆ ಸರ್ಕಾರ ಹೊರಡಿಸಿದ ಗೆಜೆಟೆಡ್ ಹಾಗೂ ನಮಗೆ ಸರ್ಕಾರದಿಂದ ಬಂದ ಸೂಚನೆಯ ಪ್ರಕಾರ ಅನಧಿಕೃತ ಆಸ್ತಿಗಳಿಗೆ ಪಿಐಡಿ ಹಾಗೂ ಮೂಲಭೂತ ಸೌಕರ್ಯ ನೀಡಲು ಬರುವದಿಲ್ಲವೆಂದು ಪಾಲಿಕೆಯ ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ಸ್ಪಷ್ಟನೆ ನೀಡಿದ್ದರೆ..

ಮಂಗಳವಾರ ನಡೆದ ಪಾಲಿಕೆಯ ಪರಿಷತ್ ಸಭೆಯಲ್ಲಿ ನಗರ ಸೇವಕರಾದ ಹನುಮಂತ ಕೊಂಗಾಲಿ, ರವಿ ದೊತ್ರೆ ಹಾಗೂ ನಿತಿನ್ ಜಾಧವ ಅವರು ಪಾಲಿಕೆಯ ಆಸ್ತಿ ದಾಖಲೆಗಳಿಗೆ ಸಂಭಂದಿಸಿದಂತೆ ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು, ಸರ್ಕಾರದ ಗೆಜೆಟೆಡ್ ಹಾಗೂ ನೀಡಿದ ಸೂಚನೆಯಂತೆ ಇತ್ತೀಚೆಗೆ ನಾವು ಯಾವುದೇ ಅನಧಿಕೃತ ಆಸ್ತಿಗಳಿಗೆ ಪಿಐಡಿ ನೀಡುತ್ತಿಲ್ಲ, ಅದೇ ರೀತಿ ಮೂಲ ಸೌಕರ್ಯಗಳನ್ನೂ ನೀಡಲಾಗದು, ಏನೇ ಕಾರಣ, ಯಾವುದೇ ಒತ್ತಡವಿದ್ದರೂ ಪಿಐಡಿ ನೀಡಲು ಅವಕಾಶವಿಲ್ಲ, ಮುಂದೆ ನೀಡುವಂತೆ ಸರ್ಕಾರದ ಆದೇಶ ಬಂದಾಗ ನಿಯಮ ಬದಲಾಗಬಹುದು ಎಂದಿದ್ದಾರೆ.

ಇನ್ನು ಇತ್ತೀಚೆಗೆ ಪಾಲಿಕೆಯ ಆಸ್ತಿ ದಾಖಲೆಗಳಲ್ಲಿ (ಊತಾರ) ಆಸ್ತಿ ಮಾಲೀಕರ ಹೆಸರಿಗೆ ಬದಲಾಗಿ ಪಾಲಿಕೆಯ ಹೆಸರು ಬಂದಿರುವ ಬಗ್ಗೆ ನಗರ ಸೇವಕ ರವಿ ದೋತ್ರೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದ ಅವರು, ಇತ್ತೀಚೆಗೆ ಇಆಸ್ತಿಯ ಪ್ರಕಾರ ಮಾಲೀಕರ ಕಾಲಮ್ ಒಂದೇ ಇರುವದರಿಂದ ಅಲ್ಲಿ ಪಾಲಿಕೆಯ ಹೆಸರು ಬರುತ್ತಿದೆ, ಮೊದಲು ನಾವು ಮಾಲೀಕತ್ವದ ಜಾಗದಲ್ಲಿ ಪಾಲಿಕೆ ಹಾಗೂ ಲೀಜಿಗಳ ಹೆಸರುಗಳನ್ನು ಕೂಡಾ ನಮೂದಿಸಿ ದಾಖಲೆ ನೀಡುತ್ತಿದ್ದೆವು ಆದರೆ ಈಗ ಒಂದೇ ಆಯ್ಕೆ ಇರುವಾಗ ಮಾಲೀಕರ ಜಾಗದಲ್ಲಿ ಪಾಲಿಕೆ ಹೆಸರು ಅನಿವಾರ್ಯ ಎಂದಿದ್ದಾರೆ..

1929ರಲ್ಲಿಯೇ ಪಾಲಿಕೆಯ ಕೆಲ ಆಸ್ತಿಗಳನ್ನು ಕೆಲ ಜನರಿಗೆ ಲೀಸ್ ಆಗಿ ನೀಡಿದ್ದು ಅಲ್ಲಿಂದ ಇಲ್ಲಿವರೆಗೂ ಪಾಲಿಕೆ ಹಾಗೂ ಲೀಸ್ ಪಡೆದಂತಹ ಜನರ ಹೆಸರುಗಳು ಆಸ್ತಿ ದಾಖಲೆಗಳಲ್ಲಿ ನಮುದಾಗಿದ್ದು ಈಗ ಇಆಸ್ತಿಯ ಪ್ರಕಾರ ಮಾಲೀಕತ್ವದ ಜಾಗದಲ್ಲಿ ಪಾಲಿಕೆಯ ಹೆಸರು ಸೇರಿದೆ, ಈಗ ಇಂತಹ ಆಸ್ತಿಗಳನ್ನು ಸೇಲ್ ಡೀಡ್ ಮಾಡಲು ಆಗುವದಿಲ್ಲ, ಬದಲಾಗಿ ಲೀಸ್ ವರ್ಗಾವಣೆ ಅಂತ ಮಾಡಿಕೊಳ್ಳಬಹುದು ಎಂದಿದ್ದಾರೆ.

ಇನ್ನು ಉಪಮಹಪೌರ ಆನಂದ ಚೌಹಾಣ್ ಅವರು ಮಾತನಾಡಿ, ಪಾಲಿಕೆಯ ಶವ ವಾಹನಗಳ ದುಸ್ಥಿತಿಯಿಂದ ಪಾಲಿಕೆಯ ಮಾನ ಮರ್ಯಾದೆ ಎಲ್ಲಾ ಹಾಳಾಗುತ್ತಿದೆ, ಮೊನ್ನೆ ಸುಮಾರು ಇನ್ನೂರು ಜನರು ಸೇರಿ ಅಂತ್ಯಕ್ರಿಯೆಗೆ ಸಾಗುವಾಗ ಮಾರ್ಗ ಮಧ್ಯದಲ್ಲಿಯೇ ಶವ ವಾಹನ ಕೆಟ್ಟು ನಿಂತಾಗ, ಶವ ಸಂಸ್ಕಾರಕ್ಕೆ ಬಂದ ಜನರು ವಾಹನವನ್ನು ತಳ್ಳುವಂತಾಯಿತು, ಆಗಲೂ ವಾಹನ ಸುರು ಆಗಲಿಲ್ಲ, ಆಗ ಉಪ ಮಹಾಪೌರನಾದ ನನಗೆ ತುಂಬಾ ಮುಜುಗರವಾಯಿತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯದ ಕುರಿತಾಗಿ ನಗರ ಸೇವಕ ರವಿ ದೋತ್ರೆ ಅವರು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿ, ಕೇವಲ ನಾಲ್ಕು ವಾಹನಗಳನ್ನು ಸರಿಯಾಗಿ ನೋಡಿಕೊಳ್ಳದ ಪಾಲಿಕೆಯ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಆಗಬೇಕು ಎಂದು ಖಾರವಾಗಿ ಮಾತನಾಡಿದರು. ಅದೇ ರೀತಿ ತ್ಯಾಜ್ಯ ಸಂಗ್ರಹ ಹಾಗೂ ವಿತರಣಾ ವಾಹನಗಳ ಬಗ್ಗೆಯೂ ಕೂಡಾ ಕೆಲ ನಗರ ಸೇವಕರು ಮಾತನಾಡಿ ವಾಹನಗಳ ಸ್ಥಿತಿಗತಿಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ವಾಹನ ನಿರ್ವಹಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಸುದೀರ್ಘ ಚರ್ಚೆಯ ನಂತರ ಕೊನೆಗೆ ಎರಡು ಹೊಸ ಶವ ವಾಹನಗಳ ಖರೀದಿಗೆ ಪರಿಷತ್ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ನಗರ ಸೇವಕರ ಅಧ್ಯಯನ ಪ್ರವಾಸದ ಬಗ್ಗೆಯೂ ಆರೋಗ್ಯಕರ ಚರ್ಚೆ ನಡೆದು ಸಭೆಯಲ್ಲಿ ಆ ವಿಷಯಕ್ಕೂ ಅನುಮೋದನೆಯನ್ನು ನೀಡಲಾಯಿತು.

ಪಾಲಿಕೆಯ ಪರಿಷತ್ ಸಭೆಯಲ್ಲಿ ಅಭಿವೃದ್ಧಿ ಪರವಾದ ಹತ್ತು ಹಲವು ಚರ್ಚೆಗಳು ನಡೆದಿದ್ದು, ನಗರ ಸೇವಕರು ಚರ್ಚಿಸಿದ ವಿಷಯಗಳು ಹಾಗೂ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿ, ಮುಂದೆ ಮಾಡುವ ಕೆಲ ಯೋಜನೆಗಳ ಬಗ್ಗೆಯೂ ಭರವಸೆ ನೀಡಿದ್ದು, ಸಭೆಯು ಸದುಪಯೋಗ ಚರ್ಚೆಗೆ ಸಾಕ್ಷಿಯಾದಂತಿತ್ತು..

ವರದಿ ಪ್ರಕಾಶ ಬಸಪ್ಪ ಕುರಗುಂದ..