ಬೆಳಗಾವಿ ತಹಶೀಲ್ದಾರ ಕಛೇರಿಯ ಎಸ್ಡಿಸಿ ಸಿಬ್ಬಂದಿಯ ಆತ್ಮಹತ್ಯೆ..

ಬೆಳಗಾವಿ ತಹಶೀಲ್ದಾರ ಕಛೇರಿಯ ಎಸ್ಡಿಸಿ ಸಿಬ್ಬಂದಿಯ ಆತ್ಮಹತ್ಯೆ..

ತಹಶೀಲ್ದಾರ ಕೊಠಡಿಯಲ್ಲಿಯೇ ನೇಣಿಗೆ ಶರಣಾದ ರುದ್ರಣ್ಣ ಯಡವನ್ನವರ..

ಬೆಳಗಾವಿ : ಮಂಗಳವಾರ ಬೆಳಿಗ್ಗೆ ಬೆಳಗಾವಿಯ ತಹಶೀಲ್ದಾರ ಕಚೇರಿಯಲ್ಲಿ ಕಛೇರಿಯ ದ್ವಿತೀಯ ದರ್ಜೆಯ ಸಹಾಯಕರಾದ ರುದ್ರನ್ನ ಯಡವನ್ನವರ ನೇಣಿಗೆ ಶರಣಾದ ಘಟನೆ ಕಂಡುಬಂದಿದೆ.

ನಿನ್ನೆಯಷ್ಟೇ ಸವದತ್ತಿಗೆ ವರ್ಗಾವಣೆ ಆಗಿರುವ ಮಾಹಿತಿ ಇದ್ದು, ಅದರ ಕುರಿತಾದ ಅಸಮಾಧಾನವೂ ಸಾವಿಗೆ ಶರಣಾದ ವ್ಯಕ್ತಿಗೆ ಇದ್ದಿತು ಎಂಬ ಮಾಹಿತಿ ಲಭ್ಯವಾಗಿದ್ದು, ನೇಣಿಗೆ ಶರಣಾದ ವ್ಯಕ್ತಿಯ ಪತ್ನಿ ಗಿರಿಜಾ ಕೂಡಾ ತಹಶೀಲ್ದಾರ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ನಡೆದ ಈ ಘಟನೆಯಿಂದ ಬೆಳಗಾವಿಯ ಇಡೀ ತಹಶೀಲ್ದಾರ ಕಛೇರಿಯ ಸಿಬ್ಬಂದಿಯೇ ದಿಗ್ಬ್ರಮೆಯಾಗಿದ್ದು, ಆತ್ಮಹತ್ಯೆಗೆ ಯಾವ ಕಾರಣ ಇರಬಹುದು ಎಂಬ ಗೊಂದಲದಲ್ಲಿದ್ದಾರೆ..

ನೇಣಿಗೆ ಶರಣಾದ ವ್ಯಕ್ತಿ ವಾಟ್ಸ್ ಅಪ್ ಸಂದೇಶವನ್ನು ತನ್ನ ಸಿಬ್ಬಂದಿಗೆ ಹಾಗೂ ಮಾಧ್ಯಮದವರಿಗೆ ಕೆಳಿಸಿದ್ದು ಲಭ್ಯವಿದ್ದು ಬೆಳಗಾವಿಯಿಂದ ಸವದತ್ತಿಗೆ ಈತನ ವರ್ಗಾವಣೆಯ ಕಾರಣವೂ ಈತನ ನೋವಿಗೆ ಕಾರಣವಾಗಿದ್ದು, ವರ್ಗಾವಣೆಯ ರದ್ದತಿಗಾಗಿ ಬೆಳಗಾವಿಯ ಸಚಿವರ ಆಪ್ತರನ್ನು ಬೇಟಿ ಆಗಿದ್ದು, ತಹಶೀಲ್ದಾರರಿಗೂ ಮನವಿ ಮಾಡಿಕೊಂಡಿದ್ಫು ಯಾವ ಸ್ಪಂದನೆ ನೀಡಲಿಲ್ಲ, ಬದಲಾಗಿ ತೊಂದರೆ ಆಗಿದೆ ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ..

ಆತ್ಮಹತ್ಯೆಗೆ ಕಾರಣವೇನು ಎಂಬುದು ಮುಂದೆ ನಡೆಯುವ ಪೊಲೀಸ್ ತನಿಖೆಯ ಮೂಲಕ ಸತ್ಯಾಂಶ ಬಯಲಿಗೆ ಬರಬೇಕಾಗಿದ್ದು, ನಿನ್ನೆಯಷ್ಟೇ ಎಲ್ಲರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿದ ಸಿಬ್ಬಂದಿ ಇಂದು ನೇಣಿಗೆ ಶರಣಾಗಿದ್ದು ಯಾರ ಕಡೆಯಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ..

ವರದಿ ಪ್ರಕಾಶ್ ಬಸಪ್ಪ ಕುರಗುಂದ.