ಜಿಲ್ಲಾ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ನಿಲಯ ಪಾಲಕರ ಸಭೆ..

ಜಿಲ್ಲಾ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ನಿಲಯ ಪಾಲಕರ ಸಭೆ..

ವಸತಿ ನಿಲಯಗಳ ಹಾಗೂ ನಿಲಯಪಾಲಕರ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುವ ವಿಧ್ಯಾರ್ಥಿಗಳ ಆರೋಗ್ಯ ಹಾಗೂ ಕಲಿಕಾ ಸಾಮರ್ಥ್ಯದ ಬೆಳವಣಿಗೆಗಾಗಿ ಉತ್ತಮ ಸೌಲಭ್ಯ ಕಲ್ಪಿಸುವದರ ಜೊತೆಗೆ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಗೋಳುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ..

ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳ ನಿಲಯಪಾಲಕರ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಸತಿ ನಿಲಯಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಉತ್ತಮ ಸೇವೆ ನೀಡುವದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದಿದ್ದಾರೆ..

ಇದೆ ವೇಳೆ ನಿಲಯಪಾಲಕರಿಗೆ ನಿಮಗೆ ಇರುವ ಸಮಸ್ಯೆಗಳನ್ನು ಹೇಳಿಕೊಳ್ಳಿ ಎಂದು ಸಚಿವರು ಕೇಳಿದಾಗ, ಸಿಬ್ಬಂದಿ ಕೊರತೆ ತುಂಬಾ ಇದೆ, ಹೆಚ್ಚುವರಿ ಕೆಲಸ ಆಗುವದರಿಂದ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂಬ ಸಮಸ್ಯೆ ಕೆಲ ನಿಲಯಪಾಲಕರು ಹೇಳಿಕೊಂಡರೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ, ವಸತಿನಿಲಯಗಳಲ್ಲಿ ಚಪಾತಿ ಮಾಡುವ ಯಂತ್ರಗಳನ್ನು ಉಪಯೋಗಿಸುವ ಪ್ರಯತ್ನ ಮಾಡಿದರೆ ಉತ್ತಮ ಎಂಬ ಸಲಹೆ ನೀಡಿದರು..

ವಸತಿ ನಿಲಯದ ವಿದ್ಯಾರ್ಥಿಗಳ ಕಟಿಂಗ್ ಹಾಗೂ ಶೌಚಾಲಯ ಸ್ವಚ್ಛ ಗೊಳಿಸುವ ಕೆಲಸಕ್ಕೆ ನೀಡುವ ಮೊತ್ತ ತುಂಬಾ ಕಡಿಮೆಯಾಗಿದ್ದು ಇಲಾಖಾ ಸಚಿವರ ಜೊತೆ ಚರ್ಚಿಸಿ, ಹೆಚ್ಚಿನ ಮೊತ್ತವನ್ನು ಒದಗಿಸುವಂತೆ ಮಾಡಬೇಕು ಎಂದು ಕೇಳಿಕೊಂಡರು.

ಇನ್ನೂ ಕೆಲ ನಿಲಯಪಾಲಕರು ಹೊಸ ವಸತಿ ನಿಲಯಗಳಿಗಾಗಿ ಸಚಿವರಲ್ಲಿ ಬೇಡಿಕೆ ಇಟ್ಟಾಗ, ಜಿಲ್ಲೆಯಲ್ಲಿ ಈಗ ಇರುವ ವಸತಿ ನಿಲಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭವಾದ ಎಸ್ಸಿ, ಎಸ್ಟಿ, ಒಬಿಸಿ, ಹಾಗೂ ಅಲ್ಪಸಂಖ್ಯಾತ ವಸತಿ ನಿಲಯಗಳ ಮಾಹಿತಿಯನ್ನೂ ಪಡೆದುಕೊಂಡರು..

ಎಸ್ಸಿ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳ ಆಹಾರದ ಭತ್ಯೆಯೆಂದು ತಿಂಗಳಿಗೆ 1650ರೂಪಾಯಿ ಬರುತ್ತಿದ್ದು, ಎಸ್ಟಿ ಒಬಿಸಿ ಹಾಗೂ ಅಲ್ಪಸಂಖ್ಯಾತ ವಸತಿ ನಿಲಯಗಳಿಗೆ 1750 ರೂಪಾಯಿಗಳು ಬರುತ್ತಿದೆ, ಈ ಸಮಸ್ಯೆಯನ್ನು ಪರಿಹರಿಸಬೇಕೆಂಬ ಮನವಿಯನ್ನು ಸಚಿವರಲ್ಲಿ ಮಾಡಲಾಗಿದ್ದು ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ ಮ್ಯಾಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಎಕ್ಸ್ಪರ್ಟ್ ಕ್ಲಾಸ್ ಅಂತಾ ಮಾಡ್ತಾ ಇದ್ದು, ಎಲ್ಲಾ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಏರ್ಪಡಿಸುವ ಯೋಜನೆಯನ್ನು ಸಿಇಓ ಅವರ ನೇತ್ರತ್ವದಲ್ಲಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು..

ಇನ್ನೂ ಮೂಲಭೂತ ಸೌಕರ್ಯ ಹಾಗೂ ರಿಪೇರಿಗೆ ಅನುದಾನ ಕೊರತೆ, ರಾತ್ರಿ ಕಾವಾಲುಗರರ ಕೊರತೆಯ ಸಮಸ್ಯೆ ಕೇಳಿದ ಸಚಿವರು, ನಮ್ಮ ಹಂತದಲ್ಲಿ ಆಗುವ ಪರಿಹಾರವನ್ನು ಇಲ್ಲೇ ಒದಗಿಸುವದರ ಜೊತೆಗೆ ತಮ್ಮ ಇಲಾಖಾ ಮೇಲಾಧಿಕಾರಿಗಳ, ಸಚಿವರ ಹಾಗೂ ಸರ್ಕಾರದ ಹಂತದಲ್ಲಿ ತಮ್ಮ ಸಮಸ್ಯೆಗಳಿಗೆ ಸಿಗುವ ಪರಿಹಾರಗಳಿಗಾಗಿ ನಿಮ್ಮ ಜೊತೆ ನಾವು ಕೂಡಾ ಪ್ರಯತ್ನ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಸಭೆಯು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಭೆಯಲ್ಲಿ ಶಾಸಕ ಆಶಿಫ್ (ರಾಜು) ಸೇಠ್, ಜಿಪಂ ಸಿಇಓ ರಾಹುಲ್ ಶಿಂಧೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆನ್ನೊಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಶಿವಪ್ರಿಯಾ ಕಡೇಚೂರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ್ ಕುರಿಹುಲಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಧಿಕಾರಿ ಮಿರ್ಜನ್ನವರ, ಇಲಾಖೆಗಳ ತಾಲೂಕಾಧಿಕಾರಿಗಳು ಹಾಗೂ ನಿಲಯಪಾಲಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..