ಬಿಮ್ಸ್ ಸಂಸ್ಥೆಗೆ ಸೇರ್ಪಡೆಯಾದ ಅಡ್ವಾನ್ಸ್ ಲೈಫ್ ಸಪೋರ್ಟ್ ತುರ್ತು ವಾಹನ..
ಕೋಟೆಕ ಮಹಿಂದ್ರಾ ಬ್ಯಾಂಕಿನಿಂದ ಬಿಮ್ಸಗೆ ಆಂಬುಲೆನ್ಸ್ ಕೊಡುಗೆ..
ಬೆಳಗಾವಿ : ಕೋಟೆಕ್ ಮಹಿಂದ್ರಾ ಬ್ಯಾಂಕ್ ವತಿಯಿಂದ ಇಂದು ಮುಂಜಾನೆ ಅಡ್ವಾನ್ಸ್ ಲೈಪ್ ಸಪೋಟ್ ತುರ್ತು ವಾಹನವನ್ನು ಬಿಮ್ಸ್ ಆವರಣದಲ್ಲಿ ಬಿಮ್ಸ್ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರು ವಿಡಿಯೋ ಸಂವಾದದ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೇರವೇರಿಸಿದರು.

ಕಾರ್ಯಕ್ರಮದಲ್ಲಿ ಬಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ , ವೈದ್ಯಕೀಯ ಅಧೀಕ್ಷಕರಾದ ಡಾ. ಈರಣ್ಣ ಪಲ್ಲೇದ, ಆರ್ಥಿಕ ಸಲಹೆಗಾರರಾದ ಶ್ರೀಮತಿ ಶಿಲ್ಪಾ ವಾಲಿ, ಎಲ್ಲ ವಿಭಾಗದ ಮುಖ್ಯಸ್ಥರು, ಹಾಗೂ ಕೋಟೆಕ್ ಮಹಿಂದ್ರಾ ಬ್ಯಾಂಕ್‌ನ ಉಪಾಧ್ಯಕ್ಷ ಲಕ್ಷ್ಮಿಕಾಂತ ಕೋಡೆ, ಸಹ ಉಪಾಧ್ಯಕ್ಷ ಈರಯ್ಯ ನಿರವಾನಿ, ಬಿಮ್ಸ್ನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.