ರಾಮತೀರ್ಥ ನಗರದ ಅಭಿವೃದ್ಧಿ ಕಾರ್ಯದೊಂದಿಗೆ ಸುವ್ಯವಸ್ಥಿತ ಹಸ್ತಾಂತರ..

ರಾಮತೀರ್ಥ ನಗರದ ಅಭಿವೃದ್ಧಿ ಕಾರ್ಯದೊಂದಿಗೆ ಸುವ್ಯವಸ್ಥಿತ ಹಸ್ತಾಂತರ..

ಬುಡಾ ಹಾಗೂ ಪಾಲಿಕೆ ಸಿಬ್ಬಂದಿಯ ಸಮ್ಮುಖದಲ್ಲಿಯೇ ಕೈಗೊಂಡ ನಿರ್ಣಯ..

ಬೆಳಗಾವಿ : ರಾಮತೀರ್ಥ ನಗರ ವಾರ್ಡ್ ಸಂಖ್ಯೆ 46ರ
ಬುಡಾ ವ್ಯಾಪ್ತಿಯಲ್ಲಿ ಬರುವ ಬಾಕಿ ಉಳಿದ ಅಬಿವೃದ್ದಿ ಕೆಲಸಗಳನ್ನು ಪೂರ್ಣಗೊಳಿಸಿ ಸುವ್ಯವಸ್ಥೆಯಲ್ಲಿ ಹತ್ತಾಂತರಿಸುವ ಷರತ್ತಿನೊಂದಿಗೆ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಗಟಾರ, ರಸ್ತೆ, ಹಾಗೂ ಗಾರ್ಡನ್, ಕೆಇಬಿ TC ಪೋಲ್ಸ್, ಕೆಲಸಗಳನ್ನು, ಖುದ್ದಾಗಿ ವಾರ್ಡಿನ ನಗರ ಸೇವಕರಾದ ಹಣಮಂತ ಕೊಂಗಾಲಿ ಅವರು, ಬುಡಾ ನಿರ್ದೇಶಕರ ಉಪಸ್ಥಿತಿಯಲ್ಲಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಬುಡಾ ಅಧಿಕಾರಿಗಳು ಜಂಟಿ ತಂಡ ಪರಿವಿಕ್ಷಣೆ ಮಾಡಿದ್ದಾರೆ.

ಮಹಾನಗರ ಪಾಲಿಕೆಯ ಇಂಜಿನಿಯರ್ಗಳಾದ, EE ಸಿದಗೌಡರ, ಎಈಈ ಅಂಕಿತ್, ಎಇ ಕೆರೂರು ಹಾಗೂ ಬುಡಾ ಇಂಜಿನಿಯರ್ ಎಈಈ ಪ್ರಸನ್ನ ಹಾಗೂ ಎಈಈ ಅಥಣಿ, ರವಿ ಪರಿವೀಕ್ಷಣೆ ನಡೆಸಿದರು, ಶೀಘ್ರದಲ್ಲಿ ಶರತ್ತುಗಳಿಗೆ ಒಳಪಟ್ಟು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಲಿದ್ದು ರಹವಾಸಿಗಳು ಸಹಕರಿಸುವಂತೆ ನಗರ ಸೇವಕರಾದ ಹನುಮಂತ ಕೊಂಗಲಿ ಹಾಗೂ ಅಧಿಕಾರಿಗಳು ಕೆಳಿಕೊಂಡಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..