ವಿಜಯಯಾತ್ರೆ ಮುಂದುವರೆಸಿದ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ..
ಶಿಗ್ಗಾಂವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪರ ಘೋಷಣೆ ಕೂಗಿದ ಜನಸ್ತೋಮ..
ಬೆಳಗಾವಿ : ಕರ್ನಾಟಕ ರಾಜ್ಯದ ಬಹುಮುಖ್ಯ ಪ್ರಾಮುಖ್ಯತೆ ಪಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸ್ಪರ್ಧೆ ತುಂಬಾ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಾವೇ ವಿಜಯ ಸಾಧಿಸುತ್ತೇವೆ ಎಂಬ ಲೆಕ್ಕಾಚಾರದಲ್ಲಿದ್ದವು.
ಶಿಗ್ಗಾಂವಿ ಕ್ಷೇತ್ರದಲ್ಲಂತೂ ಬಿಜೆಪಿಯ ಅಭ್ಯರ್ಥಿ ಭರತ ಬೊಮ್ಮಾಯಿ ಬಲಿಷ್ಠ ಅಭ್ಯರ್ಥಿ ಆಗಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಎಂಬ ಹೆಗ್ಗಳಿಕೆಯಿಂದ ಕಣಕ್ಕಿಳಿದಿದ್ದು ಗೆಲ್ಲುವರೆಂಬ ಭರವಸೆಯಲ್ಲಿದ್ದರು,
ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಪಠಾಣ್ ಸ್ಪರ್ಧೆ ಮಾಡಿದ್ದರು.
ಯಾವಾಗ ಶಿಗ್ಗಾಂವಿ ಸವಣೂರ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಬೆಳಗಾವಿಯ ಮಾಸ್ಟರ್ ಮೈಂಡ್ ಆದ ಸತೀಶ್ ಜಾರಕಿಹೊಳಿ ಅವರು ಮುನ್ನುಗ್ಗಿ, ಕಾಂಗ್ರೆಸ್ ಅಭ್ಯರ್ಥಿಯ ಪರ ಚುನಾವಣಾ ನೇತೃತ್ವ ವಹಿಸಿಕೊಂಡರೋ ಆವಾಗಿನಿಂದ ಚುನಾವಣಾ ಚಿತ್ರಣವೇ ಬದಲಾಗುತ್ತಾ ಹೋಗಿ, ಸತೀಶ್ ಜಾರಕಿಹೊಳಿ ಅವರ ಇಡೀ ತಂಡವೇ ಶಿಗ್ಗಾಂವಿ ಕ್ಷೇತ್ರದಲ್ಲಿ ನೆಲೆಯೂರಿ, ಹಗಲು ರಾತ್ರಿ ಕೆಲಸ ಮಾಡಿತ್ತು..
ಬೆಳಗಾವಿಯ ಈ ಮಾಸ್ಟರ್ ಮೈಂಡನ ಕಾರ್ಯತಂತ್ರಕ್ಕೆ ಪಲಿತಾಂಶದ ದಿನವಾದ ಇಂದು ವಿಜಯಮಾಲೆ ದೊರೆತಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಶಿರ್ ಪಠಾಣ್ ಅವರ ಗೆಲುವಿನೊಂದಿಗೆ ಸತೀಶ ಜಾರಕಿಹೊಳಿ ಅವರ ವಿಜಯಯಾತ್ರೆ ಮುಂದುವರೆದಿದೆ ಎನ್ನಬಹುದು..
ಇನ್ನು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಸಚಿವ ಸತೀಶ್ ಜಾರಕಿಹೊಳಿ ಅವರ ಪರವಾದ ಘೋಷಣೆಗಳು ಕೂಗಿದ್ದು, ಅವರು ಎಷ್ಟರ ಮಟ್ಟಿಗೆ ಅಲ್ಲಿಯ ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿದ್ದಾರೆ ಎಂಬುದು ತಿಳಿದಿದ್ದು, ಬೆಳಗಾವಿಗರಾದ ನಮ್ಮೆಲ್ಲರಿಗೂ ಇದು ಹೆಮ್ಮೆಯ ವಿಷಯ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..