ಸಮಾಜಮುಖಿ ಸುದ್ದಿಗೆ ಕೆಲವೇ ಗಂಟೆಗಳಲ್ಲಿ ಸ್ಪಂದನೆ ನೀಡಿದ ಬೆಳಗಾವಿ ಪಾಲಿಕೆ..

ಸಮಾಜಮುಖಿ ಸುದ್ದಿಗೆ ಕೆಲವೇ ಗಂಟೆಗಳಲ್ಲಿ ಸ್ಪಂದನೆ ನೀಡಿದ ಬೆಳಗಾವಿ ಪಾಲಿಕೆ..

ಸ್ವಚ್ಛತೆ ಕಂಡ ವಾರ್ಡ ಸಂಖ್ಯೆ 9ರ ಚರಂಡಿಗಳು..

ಆಯುಕ್ತರ ಹಾಗೂ ಆರೋಗ್ಯ ಸಿಬ್ಬಂದಿಗಳ ಸ್ಪಂದನೆಗೆ ಸಾರ್ವಜನಿಕರ ಸಂತಸ..

ಬೆಳಗಾವಿ : ನಗರದ ವಾರ್ಡ ಸಂಖ್ಯೆ 9ರ ಪುಲಬಾಗಲ್ಲಿಯ ಒಂದು ಓಣಿಯಲ್ಲಿ ಚರಂಡಿಗಳು ಘನ ತ್ಯಾಜ್ಯಗಳಿಂದ ತುಂಬಿದ್ದು, ಅಲ್ಲಿ ವಾಸಿಸುವ ಸ್ಥಳೀಯರಿಗೆ ಅದರಿಂದ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಗಿತ್ತು, ಬಹುದಿನಗಳಿಂದ ಸಮಸ್ಯೆ ಇರುವುದರಿಂದ ಇಂದು ಮುಂಜಾನೆ ಸಮಾಜಮುಖಿ ಎಂಬ ಸುದ್ದಿ ವೆಬ್ ಸೈಟಿನಲ್ಲಿ ಸುದ್ದಿಯನ್ನು ಕೂಡಾ ಪ್ರಕಟಿಸಲಾಗಿತ್ತು.

ಸುದ್ದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳ ನಿರ್ದೇಶನದಂತೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ತ್ಯಾಜ್ಯ ತುಂಬಿದ ಚರಂಡಿಗಳನ್ನು ಸ್ವಚ್ಛ ಮಾಡಿದ್ದಾರೆ.

ಎರಡೂ ಬದಿಯ ಚರಂಡಿಗಳು ಸ್ವಚ್ಛವಾಗಿದ್ದರಿಂದ ನೀರು ಸರಾಗವಾಗಿ ಹರಿದು, ಸ್ಥಳೀಯ ಜನರ ಅಸ್ವಚ್ಛತೆಯ ಸಮಸ್ಯೆ ನಿವಾರಣೆ ಆದಂತಾಗಿ, ಪಾಲಿಕೆಯ ಆಯುಕ್ತರ, ಆರೋಗ್ಯ ವಿಭಾಗದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಕಾರಾತ್ಮಕ ಸ್ಪಂದನೆಗೆ ಸಾರ್ವಜನಿಕರು ಸಂತಸ ವ್ಯಕ್ತ ಪಡಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..