ಜಿಲ್ಲಾ ಪರಿಸರ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ..
ಪರಿಸರ ಸಂರಕ್ಷಣೆಯಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಿ..
ಘನತ್ಯಾಜ್ಯ ಸಂಗ್ರಹ, ಸಾಗಾಟ ಹಾಗೂ ನಿರ್ವಹಣೆ ವ್ಯವಸ್ಥಿತವಾಗಿರಲಿ..
ಸುಭಾಸ ಬಿ ಆಡಿ, ಅಧ್ಯಕ್ಷರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಟ್ಟದ ಸಮಿತಿ..
ಬೆಳಗಾವಿ : ನಗರ ಹಾಗೂ ಜಿಲ್ಲೆಯಾದ್ಯಂತ ಪರಿಸರ ನಿರ್ವಹಣೆ ಹಾಗೂ ಸಂರಕ್ಷಣೆಯಲ್ಲಿ ಇಲಾಖೆಗಳ ಪಾತ್ರ ಮಹತ್ವದ್ದಾಗಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನಿಂದ ಪರಿಸರ ಸಂರಕ್ಷಣೆಯ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು, ತಪ್ಪಿದಲ್ಲಿ ತಾವು ದಂಡನೆಗೆ ಗುರಿಯಾಗುವಿರಿ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ಸುಭಾಸ ಬಿ ಆಡಿ ಅವರು ಸಲಹೆ ಸೂಚನೆ ನೀಡಿದ್ದಾರೆ..

ಸೋಮವಾರ ದಿನಾಂಕ 25/11/2024ರಂದು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ, ಜಿಲ್ಲಾ ಪರಿಸರ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಬೀದಿಬದಿ ವ್ಯಾಪಾರಿಗಳಿಗೆ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು, ಪರಿಸರ ಸಂರಕ್ಷಣಾ ಕಾರ್ಯಗಾರಗಳನ್ನು ನಡೆಸಬೇಕು ಎಂಬ ಸಲಹೆ ಸೂಚನೆ ನೀಡಿದ್ದಾರೆ.
ಕೈಗಾರಿಕಾ ಘನ ತಾಜ್ಯಗಳ ಸಂಗ್ರಹಣೆ, ನಿರ್ವಹಣೆ ಹಾಗೂ ವಿಲೇವಾರಿ ವ್ಯವಸ್ಥಿತವಾಗಿರಬೇಕು, ಉದ್ದಿಮೆಗಳ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿರಬೇಕು, ಪರಿಸರಕ್ಕೆ ಹಾಗೂ ಜನರಿಗೆ ತೊಂದರೆಯಾಗುವಂತಹ ಸನ್ನಿವೇಶ ಇರಬಾರದು, ಕೈಗಾರಿಕಾ ತ್ಯಾಜ್ಯಗಳಿಂದ ಪರಿಸರಕ್ಕೆ ತೊಂದರೆಯಾಗುವ ಸ್ಥಿತಿ ನಿರ್ಮಾಣವಾದಾಗ ಅಧಿಕಾರಿಗಳು ನೀವೇ ಹೋನೆಯಾಗುತ್ತಿರಾ ಎಂದಿದ್ದಾರೆ.

ಇನ್ನು ಪಾಲಿಕೆಯ ತ್ಯಾಜ್ಯ ಸಂಗ್ರಹ ವಿಲೇವಾರಿಗೆ ಕೆಲ ಸಲಹೆ ನೀಡಿದ ಅಧ್ಯಕ್ಷರು, ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ವಿವರಣೆ ಕೇಳಿದರು, ಜೊತೆಗೆ ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆಯನ್ನು ಪಡೆದುಕೊಂಡಿದ್ದು, ಇವುಗಳ ಸುಧಾರಣೆಯ ದೃಷ್ಟಿಯಿಂದ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಹಾಗೂ ವೈದ್ಯಕೀಯ ತ್ಯಾಜ್ಯ ಸಂಸ್ಕರಣ ಘಟಕಗಳ ಕಾರ್ಯನಿರ್ವಹಣೆಯ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿ, ಕೆಲ ಮಾಹಿತಿ ಪಡೆದುಕೊಂಡು, ಇನ್ನು ಬಹಳಷ್ಟು ಸುಧಾರಣೆ ಆಗಬೇಕೆಂಬ ಸಲಹೆ ನೀಡಿದ್ದಾರೆ, ದಂಡು ಮಂಡಳಿಯ ಅಧಿಕಾರಿಗಳಿಗೂ ಪರಿಸರ ನಿರ್ವಹಣೆಯ ಬಗ್ಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ತಗೆದುಕೊಂಡು ಕ್ರಮದ ವಿವರಣೆಯನ್ನು ಪಡೆದುಕೊಂಡಿದ್ದಾರೆ..
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನಗೊಂಡ ಅಧ್ಯಕ್ಷರು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ವಿಳಂಬ ಮಾಡದೇ ಕೆಲಸ ಮಾಡಿ, ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಕುರಿತಾದ ದೂರುಗಳಿವೆ, ಜಲ ಮಾಲಿನ್ಯ ತುಂಬಾ ಅಪಾಯಕಾರಿ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಶೀಘ್ರವೇ ಮುಗಿಸಿ, ಜನರಿಗೆ ಅನುಕೂಲ ಮಾಡಿ ಎಂಬ ಸೂಚನೆ ನೀಡಿದರು.

ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಇಲಾಖೆಯ, ಬೆಳಗಾವಿ ಮಹಾನಗರ ಪಾಲಿಕೆಯ, ಜಿಲ್ಲಾ ಆರೋಗ್ಯ ಇಲಾಖೆಯ, ನಗರ ನೀರು ಸರಬರಾಜು ಮಂಡಳಿಯ, ದಂಡು ಮಂಡಳಿಯ, ತಾಲೂಕು ಪಂಚಾಯತಿಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..