ಬೆಳಗಾವಿಯ ವಿಠ್ಠಲಾಚಾರ್ಯ ಶಿವಣಗಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ..
ಸಂವಿಧಾನ ಸಮರ್ಪಣಾ ದಿನಾಚರಣೆಯಂದು ಸಂವಿಧಾನ ಪೀಠಿಕೆ ಓದಿದ ವಿದ್ಯಾರ್ಥಿನಿಗಳು..
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಎಂದು ಶುಭಾಶಯಗಳ ವಿನಿಮಯ..
ಬೆಳಗಾವಿ : ಮಂಗಳವಾರ ದಿನಾಂಕ 26/11/2024ರಂದು ನಗರದ ಪೋರ್ಟ್ ರಸ್ತೆಯಲ್ಲಿರುವ ವಿಠ್ಠಲಾಚಾರ್ಯ ಎನ್ ಶಿವಣಗಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ, ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ..
ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಮುಖ್ಯ ಶಿಕ್ಷಕಿಯವರ ನೇತೃತ್ವದಲ್ಲಿ ಸಿಬ್ಬಂದಿಗಳು ಸೇರಿಕೊಂಡು, ವಿಧ್ಯಾರ್ಥಿನಿಗಳಿಂದ ಸಂವಿದಾನದ ಪೂರ್ವ ಪೀಠಿಕೆಯನ್ನು ಓದುವ ಮೂಲಕ ವಿಶೇಷವಾಗಿ ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ..

ವಿಶ್ವದ ಶ್ರೇಷ್ಠ ಸಂವಿಧಾನವೆಂದರೆ ಭಾರತದ ಸಂವಿಧಾನ, ಅದು 1949ರ ನವೆಂಬರ್ 26ರಂದು ಸಮರ್ಪಣೆ ಆಗಿದ್ದು, “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ವಿಚಾರದಡಿಯಲ್ಲಿ, ವಿಧ್ಯಾರ್ಥಿಗಳ ಸಮೇತ ಎಲ್ಲರೂ ಭಾರತ ಸಂವಿಧಾನದ ದಿನದ ಶುಭಾಶಯಗಳನ್ನು ತಮತಮ್ಮಲ್ಲಿ ಹಂಚಿಕೊಂಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..