ಜರ್ಮನಿಯ ವೈದ್ಯಕೀಯ ತಜ್ಞರಿಂದ ನರ್ಸಿಂಗ್ ಕ್ಷೇತ್ರದ ಕುರಿತಾದ ಸಂವಾದ ಕಾರ್ಯಕ್ರಮ..
ಡಾ ರವಿ ಪಾಟೀಲರ ವೈದ್ಯಕೀಯ ಸಂಸ್ಥೆಯಿಂದ ಆಯೋಜನೆ..
ಉತ್ತರ ಕರ್ನಾಟಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಂವಾದ..
ಬೆಳಗಾವಿ : ಜಿಲ್ಲೆಯ ನರ್ಸಿಂಗ್ ಪದವೀಧರರಿಗಾಗಿ ವಿದೇಶದಲ್ಲಿ ಉದ್ಯೋಗಾವಕಾಶಗಳ ಜೊತೆಗೆ ಉನ್ನತ ವಿದ್ಯಾಭ್ಯಾಸದ ಸೃಷ್ಟಿಸುವ ವಿನೂತನ ಪ್ರಯತ್ನದತ್ತ ಡಾ.ರವಿ ಪಾಟೀಲ್ ಆರೋಗ್ಯ ಸಂಸ್ಥೆ ಹೆಜ್ಜೆ ಹಾಕಿದೆ.
ಡಾ, ರವಿ ಪಾಟೀಲ ಆರೋಗ್ಯ ಸಂಸ್ಥೆಯು ತಾನು ನೀಡುತ್ತಿರುವ ಅತ್ಯುತ್ತಮ ವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣದ ಜೊತೆಗೆ ಉತ್ತರ ಕರ್ನಾಟಕ ಭಾಗದ ನರ್ಸಿಂಗ್ ಹಾಗೂ ಫಿಸಿಯೋಥೆರಪಿ ವಿದ್ಯಾರ್ಥಿಗಳು ಜರ್ಮನಿಯಲ್ಲಿ ಅತ್ಯಾಕರ್ಷಕ ಉದ್ಯೋಗಾವಕಾಶಗಳನ್ನು ಪಡೆಯುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜರ್ಮನಿ ಮೂಲದ ನ್ಯೂರೆಂಬರ್ಗ್ ಮೀಡಿಯಾಟೋಸ್ ಸಂಸ್ಥೆಯ ಜೊತೆಗೆ ಶೈಕ್ಷಣಿಕ ಒಪ್ಪಂದಕ್ಕೆ ಮುಂದಾಗಿದೆ.
ಈ ಕುರಿತು ವಿವರಗಳನ್ನು ಹಂಚಿಕೊಳ್ಳಲು ಇದೇ ಭಾನುವಾರ , ಡಿಸೆಂಬರ್ ದಿನಾಂಕ ಒಂದರಂದು, ಬೆಳಿಗ್ಗೆ ಹನ್ನೊಂದು ಗಂಟೆಗೆ ಬೆಳಗಾವಿ ಶಿವಬಸವ ನಗರದ ಕೆ.ಪಿ.ಟಿ.ಸಿ.ಎಲ್ ಸಭಾ ಭವನದಲ್ಲಿ ಮಿಡಿಯಾಟೋಸ್ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಡಾ.ಮ್ಯಾಕ್ಸಿಮಿಲಿಯನ್ ಡೈಬರ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜರ್ಮನಿ ದೇಶದಲ್ಲಿ ನರ್ಸಿಂಗ್ ಕ್ಷೇತ್ರಕ್ಕೆ ಇರುವ ಮಹತ್ವ, ಉನ್ನತ ಶಿಕ್ಷಣ ಪಡೆಯಲು ಬೇಕಾದ ಅರ್ಹತೆಗಳು, ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ನೇರವಾಗಿ ಡಾ.ಮ್ಯಾಕ್ಸಿಮಿಲಿಯನ್ ಡೈಬರ್ ಅವರೊಂದಿಗೆ ಚರ್ಚೆ ನಡೆಸಬಹುದಾಗಿದೆ.
ಈಗಾಗಲೇ ಡಾ ರವಿ ಪಾಟೀಲ್ ಅವರ ಸಂಸ್ಥೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಜರ್ಮನಿಯಲ್ಲಿ ಉದ್ಯೋಗಾವಕಾಶಗಳನ್ನು ಪಡೆದಿದ್ದು , ವಿದೇಶದಲ್ಲೂ ಬದುಕನ್ನು ಕಟ್ಟಿಕೊಂಡು ಆರ್ಥಿಕ ವಾಗಿ ಸಬಲರಾಗಿದ್ದಾರೆ.
ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಪಾಲಿಗೆ ಆಶಾದಾಯಕವಾಗಿರುವ ಈ ಸಂವಾದದಲ್ಲಿ ಭಾಗಿಯಾಗಿ ವಿನೂತನ ಯೋಜನೆಯ ಲಾಭವನ್ನು ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳು ಪಡೆಯಬೇಕೆಂದು ಸಂಸ್ಥೆಯ ಆಶಯವಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..