ಬೆಳಗಾವಿ ಜಿಲ್ಲಾ ಪಂಚಾಯತಿ ಹೊರಗುತ್ತಿಗೆ ನೌಕರನ ಅದ್ಬುತ ಕ್ರೀಡಾ ಸಾಧನೆ..

ಬೆಳಗಾವಿ ಜಿಲ್ಲಾ ಪಂಚಾಯತಿ ಹೊರಗುತ್ತಿಗೆ ನೌಕರನ ಅದ್ಬುತ ಕ್ರೀಡಾ ಸಾಧನೆ..

ಜಿ ಪಂ ಕ್ರೀಡಾಕೂಟದಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದ ಬಡ ಪ್ರತಿಭೆ..

ಕಚೇರಿಗೆ ಕರೆಸಿ ಪ್ರತಿಭೆಗೆ ಪುರಸ್ಕರಿಸಿದ ಜಿಪಂ ಸಿಎಓ ಪರಶುರಾಮ ದುಡಗುಂಟಿ..

ಬೆಳಗಾವಿ : ಜಿಲ್ಲಾ ಪಂಚಾಯತಿ ಬೇಕಾಗವಿಯು ಇತ್ತೀಚೆಗೆ ದಿನಾಂಕ 29, 30, ಹಾಗೂ 1ನೇ ತಾರುಕಿನಂದು ಮೂರು ದಿನಗಳ ಕಾಲ ತಮ್ಮ ಸಿಬ್ಬಂದಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕಾಗಿ ಹಾಗೂ ನಿರಂತರ ಕೆಲಸದ ಒತ್ತಡದಿಂದ ಸ್ವಲ್ಪ ರಂಜನೀಯ ಬಿಡುವಿಗಾಗಿ, 2024ರ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವನ್ನು ಜಿಪಂ ಸಿಇಓ ರಾಹುಲ್ ಶಿಂಧೆ ಸರ ಅವರ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗಿತ್ತು.

ನಗರದ ಸಮೀಪವಿರುವ ವಿಟಿಯು ಕ್ರೀಡಾ ಮೈದಾನದಲ್ಲಿ ಜರುಗಿದ, ವಯಕ್ತಿಕ, ಗುಂಪು, ಒಳಾಂಗಣ, ಹೊರಾಂಗಣ, ಮಹಿಳಾ, ಪುರುಷ ಹೀಗೆ ಹತ್ತು ಹಲವು ಬಗೆಯ ಕ್ರೀಡೆಗಳು ಅತೀ ಉತ್ಸಾಹ ಹಾಗೂ ಕ್ರೀಡಾ ಮನೋಭಾವನೆಯಿಂದ ಕೂಡಿದ್ದು, ಪ್ರತಿ ತಾಲೂಕಿನ ಸಿಬ್ಬಂದಿಗಳು ಅತೀ ಸಂತೋಷ ಹಾಗೂ ಸ್ಪೂರ್ತಿಯಿಂದ ನಿಜವಾದ ವೃತ್ತಿಪರ ಕ್ರೀಡಾಪಟುಗಳಂತೆ ಭಾಗಿಯಾಗಿ ತಮ್ಮ ಕ್ರೀಡಾ ಆಸಕ್ತಿಯನ್ನು ತೋರ್ಪಡಿಸಿ, ಎಲ್ಲರ ಮನವನ್ನು ಗೆದ್ದಿದ್ದರು .

ಅದರಂತೆ ಎಲ್ಲರ ಆಕರ್ಷಣೀಯ ಕ್ರೀಡೆಯಾದ ಕ್ರಿಕೆಟ್ ಆಟದಲ್ಲಿ, ಮೂರು ದಿನಗಳ ಕಾಲ ಇಡೀ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳ ಮನಸೆಳೆದು, ತನ್ನ ಅದ್ಬುತ ಆಲ್ ರೌಂಡಿಂಗ ಪ್ರದರ್ಶನದಿಂದ ಕ್ರೀಡಾ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ, ಖಾನಾಪುರ ಗ್ರಾಮ ಪಂಚಾಯತಿಯ ಗುಮಾಸ್ತ, ಹೊರಗುತ್ತಿಗೆಯ ಬಡನೌಕರ “ನಾಮದೇವ ಗುರವ” ಅವರ ಕ್ರೀಡಾ ಕಲೆಗೆ ಜಿಪಂ ಸಿಇಓ ಅವರಿಂದ ಹಿಡಿದು ಎಲ್ಲಾ ಸಿಬ್ಬಂದಿಗಳು ಗೌರವದ ಅಭಿನಂದನೆಗಳನ್ನು ತಿಳಿಸಿದ್ದರು..

ಆದರೆ, ಕ್ರೀಡೆ ಮುಗಿದ ಮರುದಿನವೇ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಹಾಗೂ ಅವರ ಸಿಬ್ಬಂದಿಗಳು ನಾಮದೇವ ಗುರವ ಎಂಬ ಕ್ರೀಡಾ ಸಾಧಕ ಯುವಕನನ್ನು ತಮ್ಮ ಕಚೇರಿಗೆ ಕರೆಸಿ, ಅಭಿನಂದಿಸಿ, ಗೌರವದ ಸತ್ಕಾರ ನೆರವೇರಿಸಿದ್ದಾರೆ, ಜೊತೆಗೆ ಯುವಕನ ಅದ್ಬುತ ಆಟಕ್ಕೆ ಮೆಚ್ಚುಗೆಯಿಂದ 5 ಸಾವಿರ ನಗದು ಹಣವನ್ನು ನೀಡಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದು, ತಮ್ಮ ಸಿಬ್ಬಂದಿ ನಾಮದೇವ ಗುರವ ಅವರ ವೃತ್ತಿ ಹಾಗೂ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ್ದು, ತಮ್ಮ ಇಲಾಖೆಯ ಅಧಿಕಾರಿಗಳು ಕರೆಸಿ ಸನ್ಮಾನಿಸಿದ್ದು ತುಂಬಾ ಸಂತಸದ ಸಂಗತಿಯಾಗಿದೆ ಎಂಬ ಧನ್ಯತಾ ಭಾವ ಕ್ರೀಡಾಪಟು ನಾಮದೇವ ಗುರವ ಅವರಲ್ಲಿತ್ತು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..