ಆಡಳಿತ ವೈಫಲ್ಯ ಎನ್ನುವುದನ್ನು ನಾನು ಒಪ್ಪೋಲ್ಲ..
ವಿರೋಧ ಪಕ್ಷಗಳು ದ್ವೇಷದ ರಾಜಕಾರಣ ಮಾಡಬಾರದು..
ಬಡಗಿ ಅಲ್ಲಾ, ಕತ್ತಿ ಹಿಡಿದು ಹೊಡೆದಾಡುವ ಸ್ಥಿತಿ ಬಿಜೆಪಿಯವರಿಗೆ ಬರಬಹುದು..
ಬೆಳಗಾವಿ : ವಿರೋಧ ಪಕ್ಷವಾದ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಿ, ಸರ್ಕಾರದ ವೈಫಲ್ಯವೆಂಬ ಆರೋಪವನ್ನು ನಾನು ಒಪ್ಪುವುದಿಲ್ಲ ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುವ ಮುನ್ನ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರ ಸಮಸ್ಯೆಯ ಬಗ್ಗೆ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿದರೆ ನಾವು ಸ್ವಾಗತಿಸುತ್ತೇವೆ. ಇಲ್ಲಿಯ ಜನರ ನೂರಾರು ಸಮಸ್ಯೆಗಳಿವೆ ಅವುಗಳನ್ನು ಪರಿಹರಿಸುವಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಕೈ ಜೋಡಿಸಲಿ ಎಂದಿದ್ದಾರೆ..
ಕಾಂಗ್ರೆಸ್ಸಿನಲ್ಲಿ ಬಡಿಗೆ ಹಿಡಿದು ಹೋಡೆದಾಡುವರು ಎಂದು ವಿಜಯೇಂದ್ರ ಹೇಳಿದ ಮಾತಿನ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲೇನು ಅಂತಹ ಪರಿಸ್ಥಿತಿ ಬರುವದಿಲ್ಲ, ನೀವೇ ತೋರಿಸುತ್ತಿರುವ ಹಾಗೆ ಅವರೇ ಹೋಡೆದಾಡುತ್ತಿದ್ದಾರೆ, ಮುಂದೆ ಬರೀ ಬಡಗಿ ಅಲ್ಲಾ ಕತ್ತಿ ಹಿಡಿದು ಹೊಡೆದಾಡುವ ಸ್ಥಿತಿ ಬರಬಹುದು ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..