ಸರ್ಕಾರಿ ವಸತಿ ನಿಲಯಗಳಲ್ಲಿ ಮ್ಯಾನೇಜಮೆಂಟ್ ಕೋಟಾದ ವಿಧ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಿ..
ಕೇಂದ್ರ ಸರ್ಕಾರ ಹಾಸ್ಟೆಲ್ ಪ್ರವೇಶಾತಿ ನಿಯಮ ಸಡಿಲಿಸಲಿ,
ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ ಮಾಡಿಕೊಡಲಿ..
ಬೆಳಗಾವಿ : ಜಿಲ್ಲೆಯ ಬೇರೆಬೇರೆ ಕಾಲೇಜುಗಳಲ್ಲಿ ಮ್ಯಾನೇಜಮೆಂಟ ಕೋಟಾದಲ್ಲಿ ಪ್ರವೇಶ ಪಡೆದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಸರ್ಕಾರದ ಬೇರೆ ಬೇರೆ ವಸತಿ ನಿಲಯಗಳಲ್ಲಿ ಪ್ರವೇಶ ನೀಡಿ ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂಬ ಬೇಡಿಕೆಯೊಂದಿಗೆ ವಿವಿಧ ಸಂಘಟನೆಗಳ ಮುಂದಾಳತ್ವದಲ್ಲಿ ಸುವರ್ಣ ವಿಧಾನ ಸೌಧದ ಹತ್ತಿರ ವಿಧ್ಯಾರ್ಥಿ ಸಮೂಹ ಸೋಮವಾರ ಪ್ರತಿಭಟನೆಯನ್ನು ನಡೆಸಿದರು..

ಈ ಹಿಂದೆ ಸರ್ಕಾರಿ ಹಾಸ್ಟೆಲುಗಳಲ್ಲಿ ಮ್ಯಾನೇಜಮೆಂಟ ಕೋಟಾದ ವಿಧ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿತ್ತು, ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಅದನ್ನು ರದ್ದುಪಡಿಸಿದೆ, ಆದರಿಂದ ಬಡ ವಿಧ್ಯಾರ್ಥಿಗಳ ಪಾಡು ಪರದಾಡುವಂತಾಗಿದೆ, ಬಡತನದ ಮಧ್ಯೆ ಬಾಡಿಗೆ ಕೊಠಡಿ ಹಿಡಿಯಲು ಸಾಧ್ಯವಾಗದೇ ತಮ್ಮ ಶಿಕ್ಷಣವನ್ನೇ ಮೊಟಕುಗೊಳಿಸುವ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.
ಆದಕಾರಣ ಈ ಹಾಸ್ಟೆಲ್ ಪ್ರವೇಶಾತಿ ನಿಯಮ ಸಡಿಲಿಸಿ, ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದ್ದು, ಈ ವೇಳೆ ಪರಿಶಿಷ್ಟ ಸಮುದಾಯದ ಹೋರಾಟಗಾರರು, ಕನ್ನಡಪರ ಹೋರಾಟಗಾರರು, ವಿಧ್ಯಾರ್ಥಿ ಸಂಘಟನೆ, ರೈತ ಸಂಘಟನೆ, ಬಸವ ಸಂಘಟನೆ ಹಾಗೂ ಇತರ ಪ್ರಗತಿಪರ ಹೋರಾಟಗಾರರು ವಿಧ್ಯಾರ್ಥಿಗಳ ಈ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..